
ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಇತ್ತೀಚೆಗೆ ಖುಷಿಯ ಮೇಲೆ ಖುಷಿಯ ವಿಚಾರ ಸಿಗುತ್ತಿದೆ. ‘ವಿಕ್ರಾಂತ್ ರೋಣ’ ಚಿತ್ರದ (Vikrant Rona Movie) ಟ್ರೇಲರ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಅದಕ್ಕೂ ಮೊದಲು ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಅವರಿಂದ ಬ್ಯಾಟ್ ಗಿಫ್ಟ್ ಸಿಕ್ಕಿತ್ತು. ಇಂದು (ಜೂನ್ 26) ಸುದೀಪ್ಗೆ ಮತ್ತೊಂದು ವಿಶೇಷ ಗಿಫ್ಟ್ ಸಿಕ್ಕಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರಿಂದ ಅನ್ನೋದು ವಿಶೇಷ. ಈ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಸುದೀಪ್ ಅವರಿಗೆ ಸಿನಿಮಾ ಜತೆಗೆ ಕ್ರಿಕೆಟ್ ಬಗ್ಗೆಯೂ ಆಸಕ್ತಿ ಇದೆ. ಆಗಾಗ ಅವರು ಕ್ರಿಕೆಟ್ ಆಡುತ್ತಾರೆ. 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಕಥೆಯನ್ನು ಆಧರಿಸಿ ‘83’ ಚಿತ್ರ ಸಿದ್ಧಗೊಂಡಿತ್ತು. ಈ ಸಿನಿಮಾ ತಂಡ ಬೆಂಗಳೂರಿಗೆ ಬಂದಾಗ ಸುದೀಪ್ ಕೂಡ ಹಾಜರಿ ಹಾಕಿದ್ದರು. ಆ ಕ್ಷಣವನ್ನು ಅವರು ಆನಂದಿಸಿದ್ದರು. ಈಗ ಕಿಚ್ಚ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ವಿಶೇಷ ಸಂದರ್ಭದಲ್ಲಿ ಸುದೀಪ್ಗೆ ಒಂದು ಅದ್ಭುತ ಗಿಫ್ಟ್ ಸಿಕ್ಕಿದೆ.
1983ರಲ್ಲಿ ವಿಶ್ವಕಪ್ ಆಡಿದ ಟೀಂ ಇಂಡಿಯಾ ಆಟಗಾರರ ಹೆಸರನ್ನು ಪುಟ್ಟ ಬ್ಯಾಟ್ ಮೇಲೆ ಬರೆಯಲಾಗಿದೆ. ಈ ಬ್ಯಾಟ್ಮೇಲೆ ಆಟಗಾರರು ತಮ್ಮ ಹಸ್ತಾಕ್ಷರ ಹಾಕಿದ್ದಾರೆ. ಈ ಬ್ಯಾಟ್ಅನ್ನು ಕಪಿಲ್ ದೇವ್ ಅವರು ಸುದೀಪ್ಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ಬ್ಯಾಟ್ನ ಫೋಟೋವನ್ನು ಹಂಚಿಕೊಂಡು ಸುದೀಪ್ ಸಂಭ್ರಮಿಸಿದ್ದಾರೆ. ‘ವಾವ್..ಎಂತಹ ಭಾನುವಾರ. ಇಂತಹ ದೊಡ್ಡ ಸರ್ಪ್ರೈಸ್ಗೆ ನಿಮಗೆ ಧನ್ಯವಾದ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ನಾನು ವಿಶ್ವದ ತುತ್ತ ತುದಿಯಲ್ಲಿದ್ದೇನೆ. ಧನ್ಯವಾದಗಳು’ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸುದೀಪ್ ಬಗ್ಗೆ ವಿಶೇಷ ಪ್ರೀತಿ ಇದೆ. ಈ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದವರು ಸುದೀಪ್ಗೆ ಜೆರ್ಸಿ ಗಿಫ್ಟ್ ನೀಡಿದ್ದರು. ರಾಜಸ್ಥಾನ್ ತಂಡದ ಆಟಗಾರ ಜೋಸ್ ಬಟ್ಲರ್ ಅವರು ಬ್ಯಾಟ್ಅನ್ನು ಸುದೀಪ್ಗೆ ನೀಡಿದ್ದರು. ಈ ಸುದ್ದಿ ಕೂಡ ಸಾಕಷ್ಟು ಚರ್ಚೆ ಆಗಿತ್ತು.
ಇದನ್ನೂ ಓದಿ: ಜೋಸ್ ಬಟ್ಲರ್ ಕೊಟ್ಟ ಬ್ಯಾಟ್ ಅನ್ನು ಸುದೀಪ್ ಎಲ್ಲಿಟ್ಟಿದ್ದಾರೆ? ಕಿಚ್ಚ ಕೊಟ್ರು ಉತ್ತರ
ಕೇರಳದಲ್ಲಿ ‘ವಿಕ್ರಾಂತ್ ರೋಣ’: ಕೊಚ್ಚಿಗೆ ತೆರಳಿದ ಕಿಚ್ಚ ಸುದೀಪ್ಗೆ ಅಭಿಮಾನಿಗಳ ಆತ್ಮೀಯ ಸ್ವಾಗತ
Published On - 12:16 pm, Sun, 26 June 22