‘ಕಪ್ಪು ಬಿಳುಪಿನ ನಡುವೆ’ ಹಾರರ್ ಸಿನಿಮಾ ಆದರೂ ಇದರಲ್ಲಿ ಇರೋದಿಲ್ಲ ದೆವ್ವ
ವಸಂತ್ ವಿಷ್ಣು ಮತ್ತು ವಿದ್ಯಾಶ್ರೀ ಗೌಡ ಅವರು ‘ಕಪ್ಪು ಬಿಳುಪಿನ ನಡುವೆ’ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ ಮತ್ತು ಬಿರಾದಾರ್ ಅವರಿಗೂ ಈ ಸಿನಿಮಾದಲ್ಲಿ ಮುಖ್ಯವಾದ ಪಾತ್ರಗಳಿವೆ. ಹಾಸ್ಯ ಕಲಾವಿದ ಹರೀಶ್, ನವೀನ್, ಮಾಹೀನ್, ತೇಜಸ್ವಿನಿ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ.
ಸ್ಯಾಂಡಲ್ವುಡ್ನಲ್ಲಿ (Sandalwood) ನೂತನ ಪ್ರಯತ್ನಗಳಿಗೆ ಕನ್ನಡದ ಸಿನಿಪ್ರಿಯರು ಬೆಂಬಲ ನೀಡುತ್ತಾ ಬಂದಿದ್ದಾರೆ. ಹಾಗಾಗಿ ಅಂಥ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈಗ ಹೊಸ ಮತ್ತು ಡಿಫರೆಂಟ್ ಕಥೆಯ ಹಾರರ್ ಸಿನಿಮಾ (Horror Movie) ‘ಕಪ್ಪು ಬಿಳುಪಿನ ನಡುವೆ’ ಸಿದ್ಧವಾಗಿದೆ. ಧರ್ಮೇಂದ್ರ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ವೃತ್ತಿಯಲ್ಲಿ ಪಾರಂಪರಿಕ ಆಯುರ್ವೇದ ವೈದ್ಯರಾಗಿರುವ ಅವರು ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ತೋರಿಸಿದ್ದಾರೆ. ಅನೇಕ ವರ್ಷಗಳಿಂದ ಕನ್ನಡ ಚಿತ್ರರಂಗದ ಜೊತೆ ನಂಟು ಹೊಂದಿರುವ ವಸಂತ್ ವಿಷ್ಣು ಅವರು ಮೊದಲ ಬಾರಿಗೆ ‘ಕಪ್ಪು ಬಿಳುಪಿನ ನಡುವೆ’ (Kappu Bilupina Naduve) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಜೊತೆಗೆ, ಅವರೇ ಹೀರೋ ಆಗಿ ನಟಿಸಿದ್ದಾರೆ. ಇತ್ತೀಚಿಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ‘ಕಪ್ಪು ಬಿಳುಪಿನ ನಡುವೆ’ ಸಿನಿಮಾತಂಡದ ಸದಸ್ಯರು ಒಂದಷ್ಟು ಮಾಹಿತಿ ಹಂಚಿಕೊಂಡರು.
ವಸಂತ್ ವಿಷ್ಣು, ವಿದ್ಯಾಶ್ರೀ ಗೌಡ ಅವರು ‘ಕಪ್ಪು ಬಿಳುಪಿನ ನಡುವೆ’ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟರಾದ ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್ ಅವರಿಗೆ ಈ ಚಿತ್ರದಲ್ಲಿ ಮುಖ್ಯವಾದ ಪಾತ್ರಗಳಿವೆ. ಹಾಸ್ಯ ಕಲಾವಿದ ಹರೀಶ್, ನವೀನ್, ಮಾಹೀನ್, ತೇಜಸ್ವಿನಿ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಲಿಂಗೇಗೌಡ ಮತ್ತು ಶಣ್ಮಗ ಸುಂದರಂ ಅವರು ನಿರ್ಮಾಣದ ಉಸ್ತುವಾರಿ ನಿಭಾಯಿಸಿದ್ದಾರೆ.
ಇದನ್ನೂ ಓದಿ: ನಿಮಗೆ ಭೂತ ಕಂಡಿತ್ತಾ? ಈ ಸೆಲೆಬ್ರಿಟಿಗಳಿಗೆ ಆಗಿತ್ತು ಹಾರರ್ ಅನುಭವ
ಮೊದಲ ಸಿನಿಮಾಗೆ ನಿರ್ದೇಶನ ಮಾಡಿರುವ ಖುಷಿಯಲ್ಲಿ ವಸಂತ್ ವಿಷ್ಣು ಮಾತನಾಡಿದ್ದಾರೆ. ‘ಈ ಮೊದಲು ನಾನು 4 ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದೆ. ಡೈರೆಕ್ಷನ್ ವಿಭಾಗದಲ್ಲೂ ಕೆಲಸ ಮಾಡಿದ್ದೇನೆ. ಈಗ ಸ್ವತಂತ್ರವಾಗಿ ‘ಕಪ್ಪು ಬಿಳುಪಿನ ನಡುವೆ’ ಸಿನಿಮಾಗೆ ಡೈರೆಕ್ಷನ್ ಮಾಡಿದ್ದೇನೆ. ಬೆಳಕು ಹಾಗೂ ಕತ್ತಲಿಗೆ ಪಾಸಿಟಿವ್ ಹಾಗೂ ನೆಗೆಟಿವ್ ಎನರ್ಜಿ ಅಂತಲೂ ಎನ್ನಬಹುದು. ಇದೊಂದು ಯೂಟ್ಯೂಬರ್ಗಳ ಕುರಿತ ಸಿನಿಮಾ. ಹಾರರ್ ಸಿನಿಮಾ ಕೂಡ ಹೌದು. ಆದರೆ ಇಲ್ಲಿ ಭಯಪಡಿಸುವ ದೆವ್ವಗಳು ಇಲ್ಲ. ಹಾರಾರ್ ಜಾನರ್ನಲ್ಲೇ ಹೊಸ ರೀತಿಯ ಪ್ರಯತ್ನವಿದು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹಾರರ್ ಸಿನಿಮಾ ನೋಡುವುದರಿಂದ ತೂಕ ಇಳಿಸಿಕೊಳ್ಳಬಹುದು: ಅಧ್ಯಯನ
ಕನಕಪುರದಿಂದ 30 ಕಿಲೋಮೀಟರ್ ದೂರದ ದಟ್ಟ ಕಾಡಿನಲ್ಲಿ ‘ಕಪ್ಪು ಬಿಳುಪಿನ ನಡುವೆ’ ಚಿತ್ರದ ಹೆಚ್ಚಿನ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣ ಆಗಿರುವ ಈ ಚಿತ್ರವೀಗ ತೆರೆಗೆ ಬರಲು ಸಿದ್ಧವಾಗಿದೆ. ಶೀಘ್ರದಲ್ಲೇ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ‘ಸಿನಿಮಾ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಮತ್ತು ನನ್ನ ತಂಡಕ್ಕೆ ಧನ್ಯವಾದ’ ಎಂದು ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
‘ಡೈರೆಕ್ಟರ್ ಹೇಳಿದ ಕಥೆ ನನಗೆ ಇಷ್ಟವಾಯಿತು. ಪ್ರೇಕ್ಷಕರಿಗೆ ಒಂದು ಉತ್ತಮವಾದ ಸಂದೇಶ ನೀಡುವ ಸಿನಿಮಾವನ್ನು ನಿರ್ಮಿಸುವ ಆಸೆಯಿಂದ ಈ ಪ್ರಯತ್ನ ಮಾಡಿದ್ದೇನೆ. ಎಲ್ಲರ ಪ್ರೋತ್ಸಾಹವಿರಲಿ’ ಎಂದು ನಿರ್ಮಾಪಕ ಧರ್ಮೇಂದ್ರ ಹೇಳಿದ್ದಾರೆ. ಈ ಸಿನಿಮಾದಲ್ಲಿ 3 ಹಾಡುಗಳಿವೆ. ಎಲ್ಲದಕ್ಕೂ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಸಂತೋಷ್ ವೆಂಕಿ ಮತ್ತು ಶ್ರೀಧರ್ ಕಶ್ಯಪ್ ಧ್ವನಿ ನೀಡಿದ್ದಾರೆ. ‘ಜೀ ಮ್ಯೂಸಿಕ್ ಸೌತ್’ ಮೂಲಕ ಹಾಡುಗಳು ರಿಲೀಸ್ ಆಗಿವೆ. ಈ ಚಿತ್ರಕ್ಕೆ ರಿಶಾಲ್ ಸಾಯಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ