Darshan Birthday: ದರ್ಶನ್ ಬರ್ತ್ಡೇಗೆ ರಿವೀಲ್ ಆಗಲಿದೆ ‘ಡೆವಿಲ್’ ಸಿನಿಮಾದ ಫಸ್ಟ್ ಲುಕ್
ಫೆಬ್ರವರಿ 16 ದರ್ಶನ್ ಅಭಿಮಾನಿಗಳಿಗೆ ಹಬ್ಬ. ಏಕೆಂದರೆ ಅಂದು ದರ್ಶನ್ ಜನ್ಮದಿನ. ಈ ವಿಶೇಷ ದಿನಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಈ ದಿನದಂದೇ ಅವರ ಮುಂದಿನ ಸಿನಿಮಾ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಲಿದೆ ಎಂದು ದರ್ಶನ್ ಆಪ್ತರು ಮಾಹಿತಿ ಹಂಚಿಕೊಂಡಿದ್ದಾರೆ.
ನಟ ದರ್ಶನ್ (Darshan) ಅವರು ‘ಕಾಟೇರ’ ಸಿನಿಮಾ ಗೆಲುವಿನ ಖುಷಿಯಲ್ಲಿ ಇದ್ದಾರೆ. ಈ ಚಿತ್ರದ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ಬೀಗುತ್ತಿದೆ. ಈ ಸಿನಿಮಾ ಗೆಲುವಿನ ಬಳಿಕ ಅವರ ಸುಮ್ಮನೆ ಕುಳಿತಿಲ್ಲ. ಅವರು ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಹಲವು ಗಾಳಿ ಸುದ್ದಿಗಳು ಇತ್ತೀಚೆಗೆ ಹರಿದಾಡಿವೆ. ಇದಕ್ಕೆ ನಿರ್ದೇಶಕ ಪ್ರಕಾಶ್ ವೀರ್ ಅವರು ಸ್ಪಷ್ಟನೆ ನೀಡಿದ್ದರು. ಈಗ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ.
ಫೆಬ್ರವರಿ 16ರಂದು ದರ್ಶನ್ ಅವರ ಜನ್ಮದಿನ. ಈ ವಿಶೇಷ ದಿನಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ‘ಕಾಟೇರ’ ರಿಲೀಸ್ ಆಗಿ ಅಂದಿಗೆ 50 ದಿನ ಪೂರ್ಣಗೊಳ್ಳಲಿದೆ. ಈ ದಿನದಂದೇ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಲಿದೆ ಎಂದು ದರ್ಶನ್ ಆಪ್ತರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಅವತಾರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಮೂಡಿದೆ. ದರ್ಶನ್ ಲುಕ್ ರಿವೀಲ್ ಆದರೆ ಸಿನಿಮಾದ ಕಥೆ ಯಾವ ರೀತಿಯಲ್ಲಿ ಇರಬಹುದು ಎಂದು ಊಹಿಸಿಕೊಳ್ಳಲು ಫ್ಯಾನ್ಸ್ಗೆ ಸುಲಭವಾಗಲಿದೆ.
ಕೆಲ ತಿಂಗಳ ಹಿಂದೆ ‘ಡೆವಿಲ್’ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಸದ್ದಿಲ್ಲದೆ ಈ ಸಿನಿಮಾ ಕೆಲಸಗಳು ಆರಂಭ ಆಗಿವೆ. ಈ ಮೊದಲು ಸಿನಿಮಾದ ಫಸ್ಟ್ ಲುಕ್ ಎಂದು ಕೆಲವು ಎಡಿಟ್ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಇದು ಸಿನಿಮಾ ಪೋಸ್ಟರ್ ಅಲ್ಲ ಎಂದು ತಂಡ ಸ್ಪಷ್ಟನೆ ನೀಡಿತ್ತು. ಈಗ ಒಂದು ವಿಶೇಷ ದಿನದಂದು ‘ಡೆವಿಲ್’ ಪೋಸ್ಟರ್ ರಿವೀಲ್ ಆಗುತ್ತಿದೆ.
ಇದನ್ನೂ ಓದಿ: ದರ್ಶನ್ ನಟನೆಯ ‘ಡೆವಿಲ್’ ಬಗ್ಗೆ ಹರಡಿದ ಗಾಳಿಸುದ್ದಿಗೆ ನಿರ್ದೇಶಕ ಪ್ರಕಾಶ್ ವೀರ್ ಪ್ರತಿಕ್ರಿಯೆ
ಪ್ರಕಾಶ್ ವೀರ್ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಇದೆ. ‘ಮಿಲನ’, ‘ವಂಶಿ’ ಮೊದಲಾದ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಇದು ದರ್ಶನ್ ಹಾಗೂ ಪ್ರಕಾಶ್ ಒಟ್ಟಾಗಿ ಕೆಲಸ ಮಾಡುತ್ತಿರುವ ಮೊದಲ ಸಿನಿಮಾ ಅಲ್ಲ. ಈ ಮೊದಲು ‘ತಾರಕ್’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಈ ಚಿತ್ರ 2017ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಹಲವು ವರ್ಷಗಳ ಬಳಿಕ ‘ಡೆವಿಲ್’ ಚಿತ್ರಕ್ಕಾಗಿ ತಂಡ ಒಂದಾಗಿದೆ. ಸಿನಿಮಾದ ನಾಯಕಿ ಹಾಗೂ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ