ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯದ ಸಾರಿಗೆ ಬಸ್ ಚಾಲಕನಿಗೆ ಕಿರುಕುಳ ಕೊಟ್ಟ ಘಟನೆ ಇದಕ್ಕೆ ತಾಜಾ ಉದಾಹರಣೆ. ಇದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಇಂದು (ಮಾರ್ಚ್ 22) ರಾಜ್ಯ ಸ್ತಬ್ಧವಾಗಲಿದೆ. ಹಲವು ಸಂಘ-ಸಂಸ್ಥೆಗಳು ಈ ಬಂದ್‌ಗೆ ಬೆಂಬಲ ಸೂಚಿಸಿವೆ. ಅದೇ ರೀತಿ ಕರ್ನಾಟಕ ಬಂದ್‌ಗೆ (Karnataka Bandh) ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಕೊಟ್ಟಿದೆ. ಇದರಿಂದ ಸಿನಿಮಾ ಪ್ರದರ್ಶನದಲ್ಲಿ ವ್ಯತ್ಯಾಸ ಕಾಣಲಿದೆ.
ಇಂದು ರಾಜ್ಯಾದ್ಯಂತ ಬೆಳಗಿನ ಶೋಗಳು ಬಂದ್ ಇರಲಿವೆ. ಬೆಳಿಗ್ಗೆ ಶೋ ಪ್ರದರ್ಶಿಸದಂತೆ ವಾಣಿಜ್ಯ ಮಂಡಳಿ ಕಡೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಸದ್ಯ ಬುಕ್ ಮೈ ಶೋನಲ್ಲಿ ಬುಕ್ಕಿಂಗ್ ಓಪನ್ ಇದೆ. ಆದರೆ, ಬಂದ್ ಬಿಸಿ ಹೆಚ್ಚಿದರೆ ನಂತರ ಶೋ ರದ್ದಾಗುವ ಸಾಧ್ಯತೆ ದಟ್ಟವಾಗಿದೆ. ಮಧ್ಯಾಹ್ನದ ಬಳಿಕ ಯಥಾ ಪ್ರಕಾರ ಶೋಗಳು ಪ್ರಸಾರ ಕಾಣಲಿವೆ. ಹೀಗಾಗಿ ಸಿನಿಮಾ ನೋಡುವ ಪ್ಲ್ಯಾನ್ ಇದ್ದರೆ ಮಧ್ಯಾಹ್ನದ ಬಳಿಕ ಯೋಜಿಸುವುದು ಉತ್ತಮ.
ಇದರ ಜೊತೆಗೆ ಫಿಲ್ಮ್ ಚೇಂಬರ್ನ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು ಸೇರಿದಂತೆ ಚಿತ್ರರಂಗಕ್ಕೆ ಸಂಬಂಧಿಸಿದ ಹಲವರು ಹೋರಾಟದಲ್ಲಿ ಭಾಗಿ ಆಗಲಿದ್ದಾರೆ. ಟೌನ್ಹಾಲ್ ಸರ್ಕಲ್ನಿಂದ ಫ್ರೀಡಂ ಪಾರ್ಕ್ವರೆಗೆ ಮೆರವಣಿಗೆ ನಡೆಯಲಿದೆ. ಇದರಲ್ಲಿ ಇವರು ಭಾಗಿ ಆಗಲಿದ್ದು, ಮರಾಠಿ ಪುಂಡರ ವಿರುದ್ಧ ಹೋರಾಟದ ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ: ಕರ್ನಾಟಕ ಬಂದ್, ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ
ಓಲಾ, ಉಬರ್, ಏರ್ಪೋರ್ಟ್ ಟ್ಯಾಕ್ಸಿ, ಆಟೋ ಚಾಲಕರ ಸಂಘಟನೆ, ಖಾಸಗಿ ಸಾರಿಗೆ ಒಕ್ಕೂಟ, ಎಪಿಎಂಸಿ ಸಂಘಟನೆ, ಕಾರ್ಮಿಕ ಪರಿಷತ್ ಬಂದ್‌ಗೆ ಬೆಂಬಲ ಸೂಚಿಸಿದ್ದು, ಈ ಸೇವೆಯಲ್ಲಿ ವ್ಯತ್ಯಾಸ ಆಗಲಿದೆ. ವೈದ್ಯಕೀಯ ಸೇವೆ, ಹಾಲು, ಅಗತ್ಯ ವಸ್ತುಗಳು, ನಮ್ಮ ಮೆಟ್ರೋ ಸೇವೆ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.