Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Bandh: ಕರ್ನಾಟಕ ಬಂದ್, ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

ಕರ್ನಾಟಕ ಬಂದ್: ಮರಾಠಿ ಪುಂಡರ ಪುಂಡಾಟದ ವಿರುದ್ಧ ಕನ್ನಡ ಪರ ಸಂಘಟನೆಗಳು ರಣಕಹಳೆ ಮೊಳಗಿಸಿವೆ. ಮಾರ್ಚ್​ 22ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ಬಂದ್​ಗೆ ಕೆಲವರು ಕೈ ಜೋಡಿಸಿದ್ದರೆ, ಮತ್ತೆ ಕೆಲವರು ಬೆಂಬಲ ಇಲ್ಲ ಎಂದಿದ್ದಾರೆ. ಬಂದ್​ಗೆ ಯಾರ್ಯಾರ ಬೆಂಬಲವಿದೆ? ಯಾವ ಜಿಲ್ಲೆಗಳಲ್ಲಿ ಬಂದ್ ಪರಿಣಾಮ ತಟ್ಟಲಿದೆ? ಏನೇನಿರಲಿವೆ? ಏನೇನು ಇರುವುದಿಲ್ಲ? ಎಲ್ಲ ಮಾಹಿತಿ ಇಲ್ಲಿದೆ.

Karnataka Bandh: ಕರ್ನಾಟಕ ಬಂದ್, ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Mar 21, 2025 | 1:56 PM

ಬೆಂಗಳೂರು, ಮಾರ್ಚ್ 21: ಬೆಳಗಾವಿ ಗಡಿಯಲ್ಲಿ (Belagavi Border) ಮರಾಠಿ ಪುಂಡರ ಹಾವಳಿ ವಿರೋಧಿಸಿ ಹಾಗೂ ರಾಜ್ಯದ ಹಿತಾಸಕ್ತಿ ಸಂಬಂಧಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು (Pro Kannada Organisations) ಮಾರ್ಚ್​ 22 ರಂದು ಕರ್ನಾಟಕ ಬಂದ್​ಗೆ (Karnataka Bandh) ಕರೆ ನೀಡಿವೆ. ಕೆಲವು ಜಿಲ್ಲೆಗಳಲ್ಲಿ ಬಂದ್ ಬಿಸಿ ಹೆಚ್ಚಿರಲಿದ್ದು, ಇನ್ನು ಕೆಲವು ಜಿಲ್ಲೆಗಳಲ್ಲಿ ಬಂದ್​ಗೆ ಬೆಂಬಲ ವ್ಯಕ್ತವಾಗಿಲ್ಲ. ಹಲವು ಸಂಘಟನೆಗಳು ಬಂದ್​ಗೆ ಬೆಂಬಲ ಘೋಷಿಸಿವೆ. ಶಾಲಾ ಕಾಲೇಜು ನಡೆಸುವ ಹಾಗೂ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿ ಸರ್ಕಾರದಿಂದ ಇನ್ನಷ್ಟೇ ಅಧಿಕೃತ ನಿರ್ಧಾರ ಪ್ರಕಟಗೊಳ್ಳಬೇಕಿದೆ. ಬಂದ್ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ.

ಬಂದ್​ಗೆ ಯಾರ್ಯಾರ ಬೆಂಬಲ?

  • ಓಲಾ
  • ಉಬರ್
  • ಏರ್​​ಪೋರ್ಟ್​ ಟ್ಯಾಕ್ಸಿ
  • ಆಟೋ ಚಾಲಕರ ಸಂಘಟನೆ
  • ಖಾಸಗಿ ಸಾರಿಗೆ ಒಕ್ಕೂಟ
  • ಎಪಿಎಂಸಿ ಸಂಘಟನೆ
  • ಕಾರ್ಮಿಕ ಪರಿಷತ್

ಏನೆಲ್ಲ ಬಂದ್ ಆಗಿರಲಿವೆ?

  • ಥಿಯೇಟರ್​ – ಬೆಳಗಿನ ಪ್ರದರ್ಶನ ಮಾತ್ರ ಬಂದ್
  • ಬೀದಿ ವ್ಯಾಪಾರ – ನೈತಿಕ ಬೆಂಬಲ, ಎಂದಿನಂತೆ ವ್ಯಾಪಾರ ನಡೆಯಲಿದೆ
  • ಖಾಸಗಿ ಸಾರಿಗೆ – ಶಾಲಾ ವಾಹನ ಬಿಟ್ಟು ಉಳಿದ ಸೇವೆ ಬಂದ್
  • ಚಿಕ್ಕಮಗಳೂರು – 50 ಸಂಘಟನೆಗಳ ಬೆಂಬಲ
  • ಹುಬ್ಬಳ್ಳಿ – ಹೋಟೆಲ್​ ಮಾಲೀಕರ ಬೆಂಬಲ ಇಲ್ಲ
  • ಹುಬ್ಬಳ್ಳಿ – ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಬೆಂಬಲವಿಲ್ಲ

ಯಾವ ಜಿಲ್ಲೆಗಳಲ್ಲಿ ಕರ್ನಾಟಕ ಬಂದ್​ಗೆ ಬೆಂಬಲ?

ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಬಂದ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಚಿಕ್ಕಮಗಳೂರಲ್ಲಿ ಬಂದ್​ಗೆ ಬೆಂಬಲ ವ್ಯಕ್ತವಾಗಿದೆ. ಚಿತ್ರದುರ್ಗದಲ್ಲೂ ಕನ್ನಡ ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ.

ಯಾವ ಜಿಲ್ಲೆಗಳಲ್ಲಿ ಬೆಂಬಲ ಇಲ್ಲ?

  • ಕೋಲಾರ
  • ದಕ್ಷಿಣ ಕನ್ನಡ
  • ಹುಬ್ಬಳ್ಳಿ
  • ಕಲಬುರಗಿ
  • ಕೊಪ್ಪಳ

ಕರ್ನಾಟಕ ಬಂದ್: ಏನೇನಿರುತ್ತೆ, ಏನೇನಿರಲ್ಲ?

ಕರ್ನಾಟಕ ಬಂದ್ ವೇಳೆ ಆಸ್ಪತ್ರೆ, ವೈದ್ಯಕೀಯ ಸೇವೆ, ಮೆಡಿಕಲ್, ಹಾಲು, ಅಗತ್ಯ ವಸ್ತುಗಳು, ನಮ್ಮ ಮೆಟ್ರೋ ಸೇವೆ ಇರಲಿದೆ. ಓಲಾ ಹಾಗೂ ಉಬರ್, ಕೆಲ ಖಾಸಗಿ ವಾಹನಗಳು ಹಾಗೂ ಏರ್​​ಪೋರ್ಟ್ ಟ್ಯಾಕ್ಸಿ ಸಂಚಾರ ಇರುವುದಿಲ್ಲ.

ಇದನ್ನೂ ಓದಿ
Image
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
Image
ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
Image
ಕರ್ನಾಟಕ ಬಂದ್, ಈ ಅಗತ್ಯ ಕೆಲಸಗಳನ್ನು ಇಂದು, ನಾಳೆಯೊಳಗೆ ಮುಗಿಸಿ
Image
ಕರ್ನಾಟಕ ಬಂದ್ ದಿನ ಏನೇನಿರುತ್ತೆ, ಏನೇನಿರಲ್ಲ? ಇಲ್ಲಿದೆ ವಿವರ

ಇದನ್ನೂ ಓದಿ: ಕರ್ನಾಟಕ ಬಂದ್​: ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ

ಶಾಲಾ ಕಾಲೇಜು, ಪರೀಕ್ಷೆಗಳ ಕಥೆ ಏನು?

ಅಧಿಕೃತ ವೇಳಾಪಟ್ಟಿ ಪ್ರಕಾರ, ಮಾರ್ಚ್​ 22ರ ಶನಿವಾರ ಎಸ್​ಎಸ್​ಎಲ್​ಸಿ ಪರೀಕ್ಷೆ ಇರವುದಿಲ್ಲ. ಹೀಗಾಗಿ ಹತ್ತನೇ ತರಗತಿ ಪರೀಕ್ಷೆ ಮೇಲೆ ಬಂದ್ ಯಾವುದೇ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, 1 ರಿಂದ 9 ನೇ ತರಗತಿ ವರೆಗಿನ ಕೆಲವು ತರಗತಿಗಳ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಮುಂದೂಡಿಕೆ ಮಾಡಬೇಕೇ ಅಥವಾ ನಡೆಸುವುದೇ ಎಂಬ ಬಗ್ಗೆ ಸರ್ಕಾರ ಇಂದು ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ? ಸಚಿವರು ಕೊಟ್ಟ ಮಾಹಿತಿ ಇಲ್ಲಿದೆ

ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ, ಕೆಎಸ್​ಆರ್​​ಟಿಸಿ, ಬಿಎಂಟಿಸಿ ನೌಕರರ ಸಂಘದಿಂದ ಕೂಡ ಬಂದ್​ಗೆ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಕೆಎಸ್​ಆರ್​​ಟಿಸಿ, ಬಿಎಂಟಿಸಿ ಬಸ್​ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Fri, 21 March 25

ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್