Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಿಕಾ, ಆಲಿಯಾ ಸಾಲಿಗೆ ಸೇರಿದ ಕಿಯಾರಾ, ಕಾರಣವಾಗಿದ್ದು ಯಶ್ ನಟನೆಯ ‘ಟಾಕ್ಸಿಕ್’

Kiara Advani: ಬಾಲಿವುಡ್​ನ ಬಲು ದುಬಾರಿ ನಟಿ ಯಾರೆಂದರು ಸಾಮಾನ್ಯವಾಗಿ ಕೇಳಿ ಬರುವ ಹೆಸರು ದೀಪಿಕಾ ಪಡುಕೋಣೆ ಅಥವಾ ಆಲಿಯಾ ಭಟ್. ಆದರೆ ಇದೀಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಕಿಯಾರಾ ಅಡ್ವಾಣಿ. ಹೌದು, ಯಶ್ ಜೊತೆಗೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿರುವ ಕಿಯಾರಾ ಅಡ್ವಾಣಿಗೆ ಭಾರಿ ಮೊತ್ತದ ಸಂಭಾವನೆಯನ್ನು ನೀಡಲಾಗುತ್ತಿದೆ.

ದೀಪಿಕಾ, ಆಲಿಯಾ ಸಾಲಿಗೆ ಸೇರಿದ ಕಿಯಾರಾ, ಕಾರಣವಾಗಿದ್ದು ಯಶ್ ನಟನೆಯ ‘ಟಾಕ್ಸಿಕ್’
Yash
Follow us
ಮಂಜುನಾಥ ಸಿ.
|

Updated on: Mar 21, 2025 | 3:23 PM

ಬಾಲಿವುಡ್​ನ (Bollywood) ಸ್ಟಾರ್ ನಟಿ, ದುಬಾರಿ ನಟಿಯರು ಯಾರೆಂದರೆ ಎಲ್ಲರೂ ಹೇಳುವುದು ದೀಪಿಕಾ ಪಡುಕೋಣೆ, ಆಲಿಯಾ ಭಟ್ ಹೆಸರು. ಆದರೆ ಇನ್ನು ಮುಂದೆ ಈ ಪಟ್ಟಿಗೆ ಮತ್ತೊಬ್ಬ ನಟಿಯ ಹೆಸರನ್ನು ಸೇರಿಸಿಕೊಳ್ಳಬೇಕು. ಪಿಂಕ್​ವಿಲ್ಲಾ ವರದಿಯಂತೆ ಬಾಲಿವುಡ್​ನ ಅತ್ಯಂತ ದುಬಾರಿ ನಟಿಯರಲ್ಲಿ ಒಬ್ಬರು ಕಿಯಾರಾ ಅಡ್ವಾಣಿ. ಈ ನಟಿಗೆ ಭಾರಿ ಸಂಭಾವನೆ ಕೊಟ್ಟಿರುವುದು ಯಾವುದೇ ಹಿಂದಿ ಸಿನಿಮಾ ಅಥವಾ ತಮಿಳು, ತೆಲುಗಿನ ಸಿನಿಮಾ ಅಲ್ಲ ಬದಲಿಗೆ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾ ‘ಟಾಕ್ಸಿಕ್’. ಯಶ್ ಜೊತೆಗೆ ನಟಿಸಿ ಕಿಯಾರಾ ಅಡ್ವಾಣಿ ಬಾಲಿವುಡ್​ನ ಅತ್ಯಂತ ದುಬಾರಿ ನಟಿಯಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾಕ್ಕೆ ಕಿಯಾರಾ ಅಡ್ವಾಣಿಗೆ ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ. ಕಿಯಾರಾ ಅಡ್ವಾಣಿ ಇಷ್ಟು ದೊಡ್ಡ ಸಂಭಾವನೆ ಪಡೆಯುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಯೊಬ್ಬರಿಗೆ ಇಷ್ಟು ದುಬಾರಿ ಮೊತ್ತದ ಸಂಭಾವನೆ ನೀಡಲಾಗುತ್ತಿರುವುದು ಇದೇ ಮೊದಲಂತೆ. ಆಲಿಯಾ, ದೀಪಿಕಾ ಸಹ ಸಿನಿಮಾಕ್ಕೆ ಆರು-ಏಳು ಕೋಟಿ ಅಷ್ಟೆ ಪಡೆಯುತ್ತಾರಂತೆ. ತೀರ ಹೆಚ್ಚೆಂದರೆ ಹತ್ತು ಕೋಟಿ ಸಂಭಾವನೆ ಪಡೆಯುತ್ತಾರೆಯಷ್ಟೆ. ಆದರೆ ಕಿಯಾರಾ ಅಡ್ವಾಣಿ ಎಲ್ಲರನ್ನೂ ಮೀರಿಸಿ ಬರೋಬ್ಬರಿ 15 ಕೋಟಿ ಸಂಭಾವನೆ ಪಡೆದಿದ್ದಾರೆ.

ಕೆಲ ಮೂಲಗಳ ಪ್ರಕಾರ ದೀಪಿಕಾ ಪಡುಕೋಣೆಗೆ ‘ಕಲ್ಕಿ 2898 ಎಡಿ’ ಸಿನಿಮಾಕ್ಕಾಗಿ 23 ಕೋಟಿ ರೂಪಾಯಿ ಸಂಭಾವನೆ ದೊರೆತಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಾತ್ರಿ ಇಲ್ಲ. ಆದರೆ ಕಿಯಾರಾಗೆ 15 ಕೋಟಿ ಸಂಭಾವನೆ ನೀಡಿರುವುದು ಸಣ್ಣ ಮೊತ್ತವೇನೂ ಅಲ್ಲ. ಈ ಹಿಂದೆ ಕಿಯಾರಾ ನಟಿಸಿದ್ದ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಅವರಿಗೆ ಎಂಟು ಕೋಟಿ ಸಂಭಾವನೆ ನೀಡಲಾಗಿತ್ತಂತೆ.

ಇದನ್ನೂ ಓದಿ:ಶಿವಣ್ಣನ ಆರೋಗ್ಯ ವಿಚಾರಿಸಿದ ಯಶ್-ರಾಧಿಕಾ: ಇಲ್ಲಿದೆ ವಿಡಿಯೋ

‘ಟಾಕ್ಸಿಕ್’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಮತ್ತು ಯಶ್​ರ ಮಾನ್ಸ್ಟರ್ ಮೈಂಡ್ಸ್ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಸಿನಿಮಾದಲ್ಲಿ ಕಿಯಾರಾ ಮಾತ್ರವೇ ಅಲ್ಲದೆ ನಯನತಾರಾ ಸಹ ನಟಿಸುತ್ತಿದ್ದಾರೆ. ಇವರಿಗೂ ಸಹ ದೊಡ್ಡ ಮೊತ್ತದ ಸಂಭಾವನೆಯನ್ನೇ ನೀಡಲಾಗಿದೆ. ಸಿನಿಮಾದಲ್ಲಿ ಹಲವು ಹಾಲಿವುಡ್ ತಂತ್ರಜ್ಞರು ಸಹ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಅನ್ನು ಮಲಯಾಳಂನ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಏಕಕಾಲಕ್ಕೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್