Puneeth Rajkumar Funeral: ಪುನೀತ್ ಪಾರ್ಥಿವ ಶರೀರಕ್ಕೆ ಕೈ ಮುಗಿದು, ಹಣೆಗೆ ಮುತ್ತಿಟ್ಟ ಸಿಎಂ ಬಸವರಾಜ ಬೊಮ್ಮಾಯಿ
ಪುನೀತ್ರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಹೀಗಾಗಿ ಪುನೀತ್ ಅಂತ್ಯಕ್ರಿಯೆ ವೇಳೆ ಭಾವುಕನಾದೆ ಅಂತ ಕಂಠೀರವ ಸ್ಟೇಡಿಯಂ ಬಳಿ ಸಿಎಂ ಬೊಮ್ಮಾಯಿ ಹೇಳಿದರು.
ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಇನ್ನು ನೆನಪು ಮಾತ್ರ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಮಣ್ಣಲ್ಲಿ ಮಣ್ಣಾದರು. ಕುಟುಂಬಸ್ಥರು ಸೇರಿ ಹಲವು ಗಣ್ಯರು ಪುನೀತ್ಗೆ ಅಂತಿಮ ನಮನ ಸಲ್ಲಿಸಿದರು. ಪುನೀತ್ ಅಂತಿಮ ಯಾತ್ರೆಗೂ ಮುನ್ನ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪವರ್ ಸ್ಟಾರ್ಗೆ ನಮನ ಸಲ್ಲಿಸಿದರು. ಈ ವೇಳೆ ಭಾವುಕರಾದ ಅವರು ಪಾರ್ಥಿವ ಶರೀರಕ್ಕೆ ಕೈ ಮುಗಿದು, ಹಣೆಗೆ ಮುತ್ತಿಟ್ಟರು. ಪುನೀತ್ರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಹೀಗಾಗಿ ಪುನೀತ್ ಅಂತ್ಯಕ್ರಿಯೆ ವೇಳೆ ಭಾವುಕನಾದೆ ಅಂತ ಕಂಠೀರವ ಸ್ಟೇಡಿಯಂ ಬಳಿ ಸಿಎಂ ಬೊಮ್ಮಾಯಿ ಹೇಳಿದರು. ಭಾವುಕರಾದ ಡಿಕೆಶಿ ಇನ್ನು ಪುನೀತ್ ರಾಜ್ಕುಮಾರ್ ನೆನದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾವುಕರಾದರು. ನಟ ಪುನೀತ್ ರಾಜ್ಕುಮಾರ್ರದ್ದು ವಿಭಿನ್ನ ವ್ಯಕ್ತಿತ್ವ. ನನ್ನ ಅವರ ಕುಟುಂಬದ ಓಡನಾಟ 25 ವರ್ಷನದ್ದು. ಹುಟ್ಟು ಸಾವು ಇದ್ದಿದ್ದೇ. ಆದರು ನಾವು ಏನು ಮಾಡಿದ್ದೇವೆ ಅನ್ನುವುದು ಗೊತ್ತಾಗುತ್ತದೆ. ನಟ ಪುನೀತ್ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಅಂತ ಅಂತ್ಯಕ್ರಿಯೆ ಬಳಿಕ ಅಭಿಪ್ರಾಪಟ್ಟರು.
ಕಳೆದ ಮೂರು ದಿನಗಳಿಂದ ಸಾರ್ವಜನಿಕರು ದರ್ಶನ ಮಾಡಿದ್ದಾರೆ. ಇದರಲ್ಲಿ ಪೊಲೀಸರು, ಕಂದಾಯ ಅಧಿಕಾರಿಗಳು, ಬಿಬಿಎಂಪಿಯವರು ಶ್ರದ್ಧಾಪೂರ್ವಕವಾಗಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸಾರ್ವಜನಿಕ ದರ್ಶನಕ್ಕೆ ಹಾಗೂ ಅಂತ್ಯಕ್ರಿಯೆಗೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದರು. ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದಗಳು. ಡಾ.ರಾಜ್ಕುಮಾರ್ ಕುಟುಂಬದವರು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಅಂತ ಶಿವ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಕುಟುಂಬದವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಕಣ್ಣೀರ ವಿದಾಯ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಂತ್ಯಕ್ರಿಯೆ ನೆರವೇರಿತು. ಪುನೀತ್ ಅಂತ್ಯಕ್ರಿಯೆ ವೇಳೆ ಸೋದರನ ನೆನೆದು ನಟ ಶಿವಣ್ಣ ಕಣ್ಣೀರು ಹಾಕಿದರು. ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ, ವಂದನಾ ಕಣ್ಣೀರು ಹಾಕಿದರು
ಇದನ್ನೂ ಓದಿ
ಯುವರತ್ನದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಕುಣಿಸಿದ ಜಾನಿ ಮಾಸ್ಟರ್ ಸಹ ಅಗಲಿದ ನಟನ ಅಂತಿಮ ದರ್ಶನ ಪಡೆದರು
Published On - 8:54 am, Sun, 31 October 21