ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದ ‘ಕೆಡಿ’; ಮೊದಲ ದಿನದ ಗಳಿಕೆ ಎಷ್ಟು?

ಧ್ರುವ ಸರ್ಜಾ ಮತ್ತು ಸಂಜಯ್ ದತ್ ನಟನೆಯ 'ಕೆಡಿ: ದಿ ಡೆವಿಲ್' ಸಿನಿಮಾ ಏಪ್ರಿಲ್ 30ರಂದು ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದಿದೆ. ಮೊದಲ ದಿನವೇ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾದ ಈ ಬೃಹತ್ ಬಜೆಟ್ ಚಿತ್ರ ಮುಂದಿನ ರಜೆ ದಿನಗಳಲ್ಲಿ ಇನ್ನಷ್ಟು ಗಳಿಕೆ ಮಾಡುವ ನಿರೀಕ್ಷೆಯಿದೆ. ಪ್ರೇಮ್ ನಿರ್ದೇಶನದ ಈ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದ ‘ಕೆಡಿ’; ಮೊದಲ ದಿನದ ಗಳಿಕೆ ಎಷ್ಟು?
ಧ್ರುವ ಸರ್ಜಾ

Updated on: May 01, 2026 | 7:18 AM

‘ಕೆಡಿ: ದಿ ಡೆವಿಲ್’ ಸಿನಿಮಾ (KD Movie) ಏಪ್ರಿಲ್ 30ರಂದು ರಿಲೀಸ್ ಆಯಿತು. ಈ ಸಿನಿಮಾದಲ್ಲಿ ಧ್ರುವ ಸರ್ಜಾ, ಸಂಜಯ್ ದತ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಅನೇಕರು ಚಿತ್ರದ ಬಗ್ಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಫ್ಯಾನ್​​ಶೋಗಳು ಹೌಸ್​​ಫುಲ್ ಪ್ರದರ್ಶನ ಕಂಡವು. ಹಾಗಾದರೆ ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ಚಿತ್ರದಿಂದ ಕೆವಿಎನ್​ ಪ್ರೊಡಕ್ಷನ್​​ಗೆ ಲಾಭ ತಂದುಕೊಡಲಿದೆಯೇ ಎಂಬುದು ಸದ್ಯದ ಪ್ರಶ್ನೆ.

‘ಕೆಡಿ’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ‘ಮಾರ್ಟಿನ್’ ಸಿನಿಮಾ ಕೆಲಸಗಳು ನಡೆಯುತ್ತಿದ್ದ ಕಾರಣ, ‘ಕೆಡಿ’ ಸಿನಿಮಾಗೆ ಸಮಯ ಕೊಡಲು ಧ್ರುವ ಸರ್ಜಾ ಅವರ ಬಳಿ ಸಾಧ್ಯವಾಗಿರಲಿಲ್ಲ. ಆ ಬಳಿಕ ‘ಕೆಡಿ’ ಸಿನಿಮಾದಲ್ಲಿ ತೊಡಗಿಕೊಂಡರು ಧ್ರುವ.ಈ ಸಿನಿಮಾ ರೆಟ್ರೋ ಶೈಲಿ ಮಾದರಿಯಲ್ಲಿದೆ. ದೊಡ್ಡ ದೊಡ್ಡ ಸೆಟ್​​ಗಳ ನಿರ್ಮಾಣ ಮಾಡಿ ಶೂಟ್ ಮಾಡಲಾಗಿದೆ.

‘ಕೆಡಿ’ ಸಿನಿಮಾಗೆ ಮೊದಲ ದಿನ 845 ಶೋಗಳನ್ನು ನೀಡಲಾಗಿತ್ತು. ಮುಂಜಾನೆ ಫ್ಯಾನ್ಸ್ ಶೋ ಕೂಡ ಇಟ್ಟಿದ್ದರಿಂದ ಸಿನಿಮಾ ಹೆಚ್ಚಿನ ಗಳಿಕೆ ಮಾಡಿದೆ. ಈ ಚಿತ್ರ ಮೊದಲ ದಿನ 4.10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ ಎಂದು ‘ಸ್ಯಾಕ್‌ನಿಲ್ಕ್ (sacnilk) ವರದಿ ಮಾಡಿದೆ. ಇನ್ನು, ಚಿತ್ರದ ನೆಟ್ ಕಲೆಕ್ಷನ್ ಮೂರುವರೆ ಕೋಟಿ ರೂಪಾಯಿ ಆಗಿದೆ.

ಸಿನಿಮಾಗೆ ಈ ಮೂರು ದಿನ ತುಂಬಾನೇ ಮುಖ್ಯವಾಗಲಿದೆ. ಇಂದು (ಮೇ 1) ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸರ್ಕಾರಿ ರಜೆ ಇದ್ದು ಚಿತ್ರ ಹೆಚ್ಚಿನ ಗಳಿಕೆ ಮಾಡುವ ನಿರೀಕ್ಷೆ ಇದೆ. ಇನ್ನು ಶನಿವಾರ ಹಾಗೂ ಭಾನುವಾರ ಎಂದಿನಂತೆ ಜನರು ಸಿನಿಮಾ ವೀಕ್ಷಣೆಗೆ ತೆರಳುತ್ತಾರೆ. ಹೀಗಾಗಿ, ಸಿನಿಮಾದ ಕಲೆಕ್ಷನ್ ಹೆಚ್ಚಬಹುದು.

ಇದನ್ನೂ ಓದಿ: KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ

ಕೆಡಿ ಸಿನಿಮಾಗೆ ದೊಡ್ಡ ಮಟ್ಟದ ಬಜೆಟ್ ಖರ್ಚಾಗಿದೆ. ಪ್ರೇಮ್ ಹಲವು ವರ್ಷ ಇದಕ್ಕಾಗಿ ಮೀಸಲಿಟ್ಟಿದ್ದಾರೆ. ಈಗ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದು ಅವರ ಪಾಲಿಗೆ ಖುಷಿ ನೀಡಿದೆ. ಸಿನಿಮಾದ ಹಿನ್ನೆಲೆ ಸಂಗೀತವನ್ನು ಜನರು ಇಷ್ಟಪಟ್ಟಿದ್ದಾರೆ. ಸುದೀಪ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಸೇರಿದಂತೆ ಅನೇಕರು ಚಿತ್ರದ ಭಾಗ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us