ಪರಭಾಷೆಯಲ್ಲಿ ಮಿಂಚಿದ ‘ಕೆಜಿಎಫ್’ ಕಲಾವಿದ ಅವಿನಾಶ್​; ತೆಲುಗು ಸ್ಟಾರ್ ನಟರ ಜತೆ ಸಿನಿಮಾ

ಈಗ ಅವಿನಾಶ್ ಅವರಿಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿರಂಜೀವಿ ನಟನೆಯ ‘ವಾಲ್ತೆರು ವೀರಯ್ಯ’ ಚಿತ್ರದಲ್ಲಿ ಅವಿನಾಶ್ ನಟಿಸುತ್ತಿದ್ದಾರೆ. ಇದನ್ನು ಅವಿನಾಶ್ ಅವರು ಘೋಷಣೆ ಮಾಡಿದ್ದಾರೆ.

ಪರಭಾಷೆಯಲ್ಲಿ ಮಿಂಚಿದ ‘ಕೆಜಿಎಫ್’ ಕಲಾವಿದ ಅವಿನಾಶ್​; ತೆಲುಗು ಸ್ಟಾರ್ ನಟರ ಜತೆ ಸಿನಿಮಾ
ಚಿರಂಜೀವಿ-ಅವಿನಾಶ್
TV9kannada Web Team

| Edited By: Rajesh Duggumane

Nov 23, 2022 | 11:46 AM

‘ಕೆಜಿಎಫ್’ (KGF) ಸರಣಿಯ ಚಿತಗಳು ಮಾಡಿದ ದಾಖಲೆಗಳು ಒಂದೆರಡಲ್ಲ. ಈ ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಯಶ್ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡರೆ, ಉಳಿದ ಕಲಾವಿದರು ಕೂಡ ಸಾಕಷ್ಟು ಖ್ಯಾತಿ ಗಳಿಸಿದರು. ಆ್ಯಂಡ್ರ್ಯೂ  ಪಾತ್ರ ಮಾಡಿದ್ದ ಅವಿನಾಶ್ ಅವರಿಗೆ ಪರಭಾಷೆಗಳಿಂದ ಸಾಕಷ್ಟು ಆಫರ್ ಬರುತ್ತಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ಮಾಹಿತಿ ಹಂಚಿಕೊಂಡಿದ್ದಾರೆ.

ಬಾಲಕೃಷ್ಣ ಅವರು ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಂದಮೂರಿ ಬಾಲಕೃಷ್ಣ ಅವರು ಹೀರೋ. ಕನ್ನಡದ ಹೀರೋಗಳಾದ ದುನಿಯಾ ವಿಜಯ್ ಹಾಗೂ ರವಿ ಶಂಕರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಇವರ ಸಾಲಿಗೆ ಅವಿನಾಶ್ ಕೂಡ ಸೇರ್ಪಡೆ ಆಗಿದ್ದರು. ಅವರು ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದರು. ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಅನೇಕರಲ್ಲಿದೆ.

ಈಗ ಅವಿನಾಶ್ ಅವರಿಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿರಂಜೀವಿ ನಟನೆಯ ‘ವಾಲ್ತೆರು ವೀರಯ್ಯ’ ಚಿತ್ರದಲ್ಲಿ ಅವಿನಾಶ್ ನಟಿಸುತ್ತಿದ್ದಾರೆ. ಇದನ್ನು ಅವಿನಾಶ್ ಅವರು ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಅವಿನಾಶ್ ಅವರು ಬಾಬಿ ಸಿಂಹನ ಭೇಟಿ ಮಾಡಿದ್ದಾರೆ. ಬಾಬಿ ಸಿಂಹ ಅವರು ‘ವಾಲ್ತೆರು ವೀರಯ್ಯ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇಬ್ಬರೂ ಕೆಲವು ಹೊತ್ತು ಒಟ್ಟಾಗಿ ಕುಳಿತು ಮಾತುಕತೆ ನಡೆಸಿದ್ದಾರೆ.

‘ಜಿಗರ್ಥಂಡ, ಮಹಾನ್​ ಸಿನಿಮಾಗಳನ್ನು ನೋಡಿ ನಿಮ್ಮ ಬಗ್ಗೆ ಗೌರವ ಮೂಡಿದೆ. ಈಗ ವಾಲ್ತೆರು ವೀರಯ್ಯ ಚಿತ್ರದಲ್ಲಿ ನಿಮ್ಮ ಜತೆ ತೆರೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಜತೆ ಸಮಯ ಕಳೆದಿದ್ದು ಖುಷಿ ನೀಡಿದೆ. ಲವ್​ ಯು ಸರ್. ನಮ್ಮ ಬಾಂಧವ್ಯ ಹೀಗೆಯೇ ಮುಂದುವರಿಯಲಿ’ ಎಂದು ಟ್ವೀಟ್ ಮಾಡಿದ್ದಾರೆ ಅವಿನಾಶ್.

ಇದನ್ನೂ ಓದಿ: ಬೆಂಗಳೂರಲ್ಲಿ ಅಪಘಾತ: ‘ಕೆಜಿಎಫ್ 2’ ನಟನ ಬೆಂಜ್ ಕಾರು ಸಂಪೂರ್ಣ ಜಖಂ; ಕೂದಲೆಳೆ ಅಂತರದಲ್ಲಿ ನಟ ಪಾರು

‘ವೀರ ಸಿಂಹ ರೆಡ್ಡಿ’ ಹಾಗೂ ‘ವಾಲ್ತೆರು ವೀರಯ್ಯ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಎರಡೂ ಚಿತ್ರಗಳಲ್ಲಿ ಅವಿನಾಶ್ ನಟಿಸುತ್ತಿದ್ದಾರೆ ಎಂಬುದು ಅಭಿಮಾನಿಗಳ ಪಾಲಿಗೆ ಹೆಮ್ಮೆಯ ವಿಚಾರ. ‘ಕೆಜಿಎಫ್​’ನಲ್ಲಿ ಅವಿನಾಶ್ ಅವರು ನಿರ್ವಹಿಸಿದ್ದ ಆ್ಯಂಡ್ರ್ಯೂ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಈ ಚಿತ್ರದಿಂದ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ಸಿಕ್ಕಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada