ಐಎಂಡಿಬಿ, ಬುಕ್​ ಮೈ ಶೋ ರೇಟಿಂಗ್​ನಲ್ಲಿ ‘ಕೆಜಿಎಫ್​ 2’ನದ್ದೇ ಪಾರುಪತ್ಯ; ಈ ಚಿತ್ರವನ್ನು ತಡೆಯೋರೆ ಇಲ್ಲ

ಏಪ್ರಿಲ್ 13ರ ರಾತ್ರಿಯಿಂದಲೇ ‘ಕೆಜಿಎಫ್ 2’ ಸಿನಿಮಾ ಪ್ರದರ್ಶನ ಕಾಣೋಕೆ ಆರಂಭವಾಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಚಿತ್ರಕ್ಕೆ ಫುಲ್ ಮಾರ್ಕ್ಸ್​ ಕೊಡುತ್ತಿದ್ದಾರೆ.

ಐಎಂಡಿಬಿ, ಬುಕ್​ ಮೈ ಶೋ ರೇಟಿಂಗ್​ನಲ್ಲಿ ‘ಕೆಜಿಎಫ್​ 2’ನದ್ದೇ ಪಾರುಪತ್ಯ; ಈ ಚಿತ್ರವನ್ನು ತಡೆಯೋರೆ ಇಲ್ಲ
ಯಶ್
Updated By: ರಾಜೇಶ್ ದುಗ್ಗುಮನೆ

Updated on: Apr 14, 2022 | 4:02 PM

ನಟ ಯಶ್ (Yash) ಹಾಗೂ ಪ್ರಶಾಂತ್ ನೀಲ್ (Prashanth Neel) ಅವರ ಕಾಂಬಿನೇಷನ್​ನ ‘ಕೆಜಿಎಫ್​ ಚಾಪ್ಟರ್​ 2’ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಸಿನಿಮಾ ತೆರೆಕಂಡ ನಂತರದಲ್ಲಿ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಚಿತ್ರತಂಡದವರು ಸಖತ್ ಖುಷಿಪಟ್ಟಿದ್ದಾರೆ. ಈ ಸಿನಿಮಾ ಎಷ್ಟು ದಾಖಲೆಗಳನ್ನು ಬರೆಯಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಇನ್ನು, ಸಿನಿಮಾಗಳಿಗೆ ರೇಟಿಂಗ್ ನೀಡುವ ಐಎಂಡಿಬಿ (KGF Chapter 2 IMDB Rating)ಹಾಗೂ ಟಿಕೆಟ್ ಬುಕಿಂಗ್ ತಾಣ ಬುಕ್ ಮೈ ಶೋನಲ್ಲಿ ಸಿನಿಮಾಗೆ ಭರ್ಜರಿ ರೇಟಿಂಗ್ ಸಿಕ್ಕಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಏಪ್ರಿಲ್ 13ರ ರಾತ್ರಿಯಿಂದಲೇ ‘ಕೆಜಿಎಫ್ 2’ ಸಿನಿಮಾ ಪ್ರದರ್ಶನ ಕಾಣೋಕೆ ಆರಂಭವಾಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಚಿತ್ರಕ್ಕೆ ಫುಲ್ ಮಾರ್ಕ್ಸ್​ ಕೊಡುತ್ತಿದ್ದಾರೆ. ಆ್ಯಕ್ಷನ್ ದೃಶ್ಯಗಳು, ಸಿನಿಮಾ ಮೇಕಿಂಗ್, ಯಶ್ ಹೊಡೆಯೋ ಮಾಸ್ ಡೈಲಾಗ್​ಗಳನ್ನು ನೋಡಿ ಥ್ರಿಲ್ ಆಗಿದ್ದಾರೆ ಫ್ಯಾನ್ಸ್. ಹೀಗಾಗಿ, ಎಲ್ಲೆಲ್ಲಿ ಚಿತ್ರದ ಬಗ್ಗೆ ಹೇಳಲು ಸಾಧ್ಯವೋ ಅಲ್ಲೆಲ್ಲ ಒಳ್ಳೆಯ ರಿವ್ಯೂ ನೀಡುತ್ತಿದ್ದಾರೆ.

ಏಪ್ರಿಲ್​ 14ರ ಮಧ್ಯಾಹ್ನ 4 ಗಂಟೆ ವೇಳೆಗೆ ಬುಕ್ ಮೈ ಶೋನಲ್ಲಿ ಸಿನಿಮಾಗೆ 29 ಸಾವಿರ ಮಂದಿ ರೇಟಿಂಗ್ ನೀಡಿದ್ದಾರೆ. ಚಿತ್ರದ ರೇಟಿಂಗ್ ಶೇ.95 ಇದೆ. ಇನ್ನು, ಐಎಂಡಿಬಿಯಲ್ಲೂ ಚಿತ್ರ ಹಿಂದೆ ಬಿದ್ದಿಲ್ಲ. ಏಪ್ರಿಲ್ 14ರ ಮಧ್ಯಾಹ್ನ 3 ಗಂಟೆ ವೇಳೆಗೆ ನಾಲ್ಕು ಸಾವಿರ ಮಂದಿ ಚಿತ್ರಕ್ಕೆ ರೇಟಿಂಗ್ ನೀಡಿದ್ದು, 9.8/10 ಇದೆ. ಮುಂದಿನ ದಿನಗಳಲ್ಲಿ ಈ ರೇಟಿಂಗ್​ನಲ್ಲಿ ಬದಲಾವಣೆ ಕಾಣಲಿದೆ.

ಟ್ವಿಟರ್​ನಲ್ಲಿ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ‘ಕೆಜಿಎಫ್ ಚಾಪ್ಟರ್​ 2’ ಹ್ಯಾಶ್​ಟ್ಯಾಗ್​ ವೈರಲ್ ಆಗುತ್ತಿದೆ. ಇನ್ನು, ‘ಕೆಜಿಎಫ್ 3’ ಬರುವ ಮುನ್ಸೂಚನೆ ಸಿಕ್ಕಿದ್ದು,ಈ ಕಾರಣಕ್ಕೆ ಟ್ವಿಟರ್​ನಲ್ಲಿ ‘ಕೆಜಿಎಫ್​ 3’ ಹ್ಯಾಶ್​ಟ್ಯಾಗ್ ಟ್ರೆಂಡ್ ಆಗಿದೆ. ಒಟ್ಟಾರೆ, ಈ ಸಿನಿಮಾವನ್ನು ಅಭಿಮಾನಿಗಳು ಅಪ್ಪಿಕೊಂಡಿದ್ದಾರೆ. ಹೀಗಾಗಿ, ಮೊದಲ ದಿನದ ಕಲೆಕ್ಷನ್ 100 ಕೋಟಿ ರೂಪಾಯಿ ದಾಟಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: KGF Chapter 2 Twitter Review: ಮಧ್ಯರಾತ್ರಿ ನೋಡಿದವರಿಗೆ ‘ಕೆಜಿಎಫ್​ 2’ ಇಷ್ಟ ಆಯ್ತಾ? ಇಲ್ಲಿದೆ ಟ್ವಿಟರ್​ ವಿಮರ್ಶೆ

KGF Chapter 2 Review: ಕೆಜಿಎಫ್​ ಚಾಪ್ಟರ್​ 2 ವಿಮರ್ಶೆ; ಪ್ರಶಾಂತ್ ನೀಲ್ ಕೈಚಳಕ, ಯಶ್ ಫ್ಯಾನ್ಸ್​ಗೆ ಧಮಾಕ