AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BookMyShowನಲ್ಲಿ ಇನ್ಮುಂದೆ ಹೊಸ ಸಿನಿಮಾಗಳನ್ನು ಖರೀದಿಸಿ ನೋಡಬಹುದು!

ಪ್ರತಿ ಶುಕ್ರವಾರ ಸಿನಿಮಾ ರಿಲೀಸ್​ ಆಗುವ ಸಂಪ್ರದಾಯ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದೇ ಪದ್ಧತಿಯನ್ನು ಬುಕ್​ ಮೈ ಶೋ ಕೂಡ ಅನುಸರಿಸುತ್ತಿದೆ.

BookMyShowನಲ್ಲಿ ಇನ್ಮುಂದೆ ಹೊಸ ಸಿನಿಮಾಗಳನ್ನು ಖರೀದಿಸಿ ನೋಡಬಹುದು!
ಬುಕ್​ಮೈಶೋ ಆ್ಯಪ್​ನಲ್ಲಿ ಖರೀದಿಗೆ ಲಭ್ಯವಿರುವ ಸಿನಿಮಾ
ರಾಜೇಶ್ ದುಗ್ಗುಮನೆ
| Edited By: |

Updated on: Feb 08, 2021 | 9:28 PM

Share

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಚಿತ್ರಮಂದಿರ ಸಂಪೂರ್ಣ ಬಂದ್​ ಆಗಿತ್ತು. ಈ ಸಮಯದಲ್ಲಿ ಒಟಿಟಿ​ಗೆ ತುಂಬಾನೇ ಬೇಡಿಕೆ ಹೆಚ್ಚಿತ್ತು. ಈ ಬೆಳವಣಿಗೆ ನಂತರ ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳದೆ ಆನ್​ಲೈನ್​ನಲ್ಲೇ​ ಸಿನಿಮಾ ವೀಕ್ಷಣೆಗೆ ಹೆಚ್ಚು ಆದ್ಯತೆ ನೀಡಲು ಆರಂಭಿಸಿದ್ದಾರೆ. ಹೀಗಾಗಿ, ಟಿಕೆಟ್​ ಬುಕಿಂಗ್​ ತಾಣ BookMyShow ಸೇರಿ ಸಾಕಷ್ಟು ಆ್ಯಪ್​ಗಳು ನಷ್ಟ ಅನುಭವಿಸಲು ಆರಂಭಿಸಿದ್ದವು. ಆದರೆ, ಬುಕ್​ ಮೈ ಶೋ ಈ ಬೆಳವಣಿಗೆಯಿಂದ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಒಟಿಟಿ ಮಾದರಿಯಲ್ಲೇ ಹಣ ಕೊಟ್ಟು ಸಿನಿಮಾ ವೀಕ್ಷಣೆ ಮಾಡುವ ಆಯ್ಕೆಯನ್ನು ಬುಕ್​ಮೈ ಶೋ ತಂದಿದೆ.

ಇತ್ತೀಚೆಗೆ ರಿಲೀಸ್​ ಆದ ಕ್ರಿಸ್ಟೋಫರ್​ ನೋಲನ್​ ಅವರ ಟೆನೆಟ್​, ವಂಡರ್​ ವುಮನ್​ 1984 ಸೇರಿ ಸುಮಾರು 600 ಸಿನಿಮಾಗಳು ಬುಕ್​ ಮೈ ಶೋನಲ್ಲಿದೆ. ಕೆಲ ಸಿನಿಮಾಗಳನ್ನು ನೀವು ಕೊಂಡು ನೋಡಬಹುದು, ಇಲ್ಲವೇ ರೆಂಟ್​ ಕೂಡ ಪಡೆಯಬಹುದು.

ಪ್ರತಿ ಶುಕ್ರವಾರ ಸಿನಿಮಾ ರಿಲೀಸ್​ ಆಗುವ ಸಂಪ್ರದಾಯ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದೇ ಪದ್ಧತಿಯನ್ನು ಬುಕ್​ ಮೈ ಶೋ ಕೂಡ ಅನುಸರಿಸುತ್ತಿದೆ. ಅಂದರೆ, ಪ್ರತಿ ಶುಕ್ರವಾರ ಹೊಸ ಹೊಸ ಸಿನಿಮಾಗಳು ಬುಕ್​ ಮೈ ಶೋನಲ್ಲಿ ರಿಲೀಸ್​ ಆಗಲಿವೆ.

ಉಳಿದ ಒಟಿಟಿಗೆ ಹೋಲಿಸಿದರೆ ಬುಕ್​ಮೈಶೋ ನೀಡುತ್ತಿರುವ ಆಯ್ಕೆ ತುಂಬಾನೇ ಭಿನ್ನವಾಗಿದೆ. ಏಕೆಂದರೆ, ಉಳಿದ ಒಟಿಟಿಗಳಲ್ಲಿ ಒಂದು ಸಿನಿಮಾ ನೋಡಬೇಕು ಎಂದರೂ ನೀವು ಕನಿಷ್ಠ ಒಂದು ತಿಂಗಳ ಚಂದಾದಾರತ್ವ ಪಡೆಯಲೇಬೇಕು. ಆದರೆ, ಬುಕ್​ ಮೈ ಶೋನಲ್ಲಿ ನೀವು ಒಂದು ಸಿನಿಮಾವನ್ನು ಕೂಡ ಕೊಂಡು ನೋಡಬಹುದು. ಒಂದು ಸಿನಿಮಾ ಬೆಲೆ ಕನಿಷ್ಠ 40 ರೂಪಾಯಿಯಿಂದ ಗರಿಷ್ಠ 700 ರೂಪಾಯಿ ವರೆಗೂ ಇದೆ.

Book-My-Show

ಬುಕ್​ಮೈಶೋ ಆ್ಯಪ್​ನಲ್ಲಿ ಖರೀದಿಗೆ ಲಭ್ಯವಿರುವ ಸಿನಿಮಾ

ನೋಡೋದು ಹೇಗೆ?

  • ನೀವು ಮೊದಲಿಗೆ ಬುಕ್​ ಮೈ ಶೋ ಆ್ಯಪ್​ ಅಪ್​​ಡೇಟ್​ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ನಿಮಗೆ ಸ್ಟ್ರೀಮ್​ ಆಯ್ಕೆ ಸಿಗಲಿದೆ.
  • ಅಪ್​ಡೇಟ್​ ಮಾಡಿಕೊಂಡ ನಂತರ ಸ್ಟ್ರೀಮ್​ ಆಯ್ಕೆ ಕ್ಲಿಕ್​ ಮಾಡಬೇಕು.
  • ಸ್ಟ್ರೀಮ್​ ಆಯ್ಕೆ ಕ್ಲಿಕ್​ ಮಾಡಿದ ನಂತರ ಅಲ್ಲಿ ಸಿಗುವ ಸಿನಿಮಾಗಳನ್ನು ನೀವು ರೆಂಟ್​ ಅಥವಾ ಕೊಂಡುಕೊಂಡು ಸಿನಿಮಾ ನೋಡಬಹುದಾಗಿದೆ.

ಇನ್ಮುಂದೆ ಒಟಿಟಿಗೂ ಬರಲಿದೆ ಕಟ್ಟುಪಾಡು: ಕೇಂದ್ರದ ಮಹತ್ವದ ಘೋಷಣೆ

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!