ವಿಶ್ವಾದ್ಯಂತ ತೀವ್ರ ನಿರೀಕ್ಷೆ ಹುಟ್ಟಿಸಿದ್ದ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಚಿತ್ರ ಭರ್ಜರಿಯಾಗಿ ರಿಲೀಸ್ ಆಗಿದೆ. ಎಲ್ಲೆಡೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ವಿವಿಧ ರಾಜ್ಯಗಳಲ್ಲಿ ಕೂಡ ಫ್ಯಾನ್ಸ್ ಅದ್ದೂರಿಯಾಗಿ ರಿಲೀಸ್ ಸಂಭ್ರಮವನ್ನು ಆಚರಿಸಿದ್ದಾರೆ. ಯಶ್ (Yash), ಸಂಜಯ್ ದತ್ (Sanjay Dutt), ರವೀನಾ ಟಂಡನ್ (Raveena Tandon) ನಟನೆಯ ಚಿತ್ರಕ್ಕೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಜನ ಸಲಾಂ ಎಂದಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ‘ಕೆಜಿಎಫ್ 2’ ರಿಲೀಸ್ ಆಗಿದೆ. ಭಾರತದಲ್ಲಿ 6000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದು, ರಾಜ್ಯದ 550ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ಪ್ರದರ್ಶನ ನಡೆದಿದೆ. ಮಧ್ಯರಾತ್ರಿಯಿಂದಲೇ ಹಲವೆಡೆ ಕೆಜಿಎಫ್-2 ಶೋ ಆರಂಭವಾಗಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೆ ಗ್ರ್ಯಾಂಡ್ ವೆಲ್‌ಕಂ ಸಿಕ್ಕಿದೆ್ದು, ‘ಕೆಜಿಎಫ್-2’ 40 ಲಕ್ಷ ಟಿಕೆಟ್ಸ್ ಸೋಲ್ಡ್ ಔಟ್ ಆಗಿತ್ತು. ರಾಜ್ಯದಲ್ಲಿ ‘ಕೆಜಿಎಫ್-2’ ಎಲ್ಲಾ ಶೋಗಳು ಬಹುತೇಕ ಹೌಸ್‌ಫುಲ್ ಆಗಿವೆ.
5 ಭಾಷೆಗಳಲ್ಲಿ 70 ದೇಶಗಳಲ್ಲಿ ‘ಕೆಜಿಎಫ್-2’ ರಿಲೀಸ್ ಆಗಿದೆ. ರಾಜ್ಯದಲ್ಲಿ ಚಿತ್ರದ ರಿಲೀಸ್ ಸಂಭ್ರಮ ಹೇಗಿತ್ತು? ಇಲ್ಲಿದೆ ಮುಖ್ಯಾಂಶಗಳು.
‘ಕೆಜಿಎಫ್ ಚಾಪ್ಟರ್ 2’ ರಿಲೀಸ್ ಸಂಭ್ರಮ ಹೇಗಿತ್ತು? ಇಲ್ಲಿ ವೀಕ್ಷಿಸಿ:
ಮೈಸೂರು: ಮೈಸೂರಿನಲ್ಲಿ ಯಶ್ ಅಭಿಮಾನ ಮುಂದುವರೆದಿದೆ. ಬೃಹತ್ ಗೋಲ್ಡನ್ ಬಿಸ್ಕೆಟ್ ಹಾರ ಮಾಡಿಸಿದ ಅಭಿಮಾನಿಗಳು, ಸಂಗಮ್ ಚಿತ್ರಮಂದಿರದ ಬೃಹತ್ ಕಟೌಟ್‌ಗೆ ಅದನ್ನು ಅಲಂಕರಿಸಿದ್ದಾರೆ. ರಾಕಿ ಎಂದು ಬರೆದ ಗೋಲ್ಡ್ ಬಣ್ಣದ ಬಿಸ್ಕೆಟ್ ಹಾರ ಅದಾಗಿದ್ದು, 50 ಅಡಿ ಉದ್ದದ ಯಶ್ ಕಟೌಟ್‌ಗೆ 30 ಅಡಿ ಬಿಸ್ಕೆಟ್ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಲಾಗಿದೆ. ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದಿಂದ ಕಾರ್ಯಕ್ರಮ ನಡೆಸಲಾಗಿದೆ. ಸಿನಿಮಾ ನೋಡಲು ಬಂದವರಿಗೆ ಅನ್ನ ಸಂತರ್ಪಣೆಯನ್ನೂ ಏರ್ಪಡಿಸಲಾಗಿದೆ.
ಕೆಜಿಎಫ್ ನೋಡೋ ಕನಸು ಕಂಡಿದ್ದ ಪತ್ನಿಯ ಆಸೆಯನ್ನು ನೆರವೇರಿಸುವ ಸಲುವಾಗಿ ಪತಿಯೋರ್ವರು ಪತ್ನಿ ಫೋಟೋ ಇಟ್ಟು ಚಿತ್ರ ನೋಡಲು ಮುಂದಾಗಿದ್ದಾರೆ. ಕಳೆದೆ ಕೆಲವು ತಿಂಗಳ ಹಿಂದೆ ಮಂಜು ಎಂಬುವವರ ಪತ್ನಿ ರೂಪ ಎನ್ನುವವರು ಡೆಂಗ್ಯುನಿಂದ ನಿಧನರಾಗಿದ್ದಾರೆ. ಈಗ ಅವರ ನೆನಪಲ್ಲಿ ಮಂಜು ಸಿನಿಮಾಗೆ ಹೊರಟಿದ್ದಾರೆ. ಪತ್ನಿಗೆ ಕೆಜಿಎಫ್ ಮಿಸ್ ಮಾಡಬಾದ್ರು ಅನ್ನೊ ಆಸೆ ಇತ್ತು. ಹೀಗಾಗಿ ಇಂದು ನಾಗರಭಾವಿ ವಿರ್ ಸಿನಿಮಾಸ್ ನಲ್ಲಿ ಪತ್ನಿ ಪೋಟೋ ಇಟ್ಟು ಸಿನಿಮಾ ನೋಡ್ತೀವಿ ಎಂದಿದ್ದಾರೆ ಮಂಜು.
ಪೈರಸಿ ತಡೆಯಲು ಕೆಜಿಎಫ್ 2 ಚಿತ್ರತಂಡ ಸಾಕಷ್ಟು ಕ್ರಮ ಕೈಗೊಂಡಿದೆ. ಜತೆಗೆ ಈ ಬಗ್ಗೆ ತಿಳಿದುಬಂದರೆ ಗಮನಕ್ಕೆ ತರುವಂತೆಯೂ ಮನವಿ ಮಾಡಿದ್ದಾರೆ. ಆದರೆ ಇದೀಗ ಚಿತ್ರವು ಬಿಡುಗಡೆಯಾದ ಕೆಲವೇ ಗಂಟೆಗಳ ಒಳಗೆ ಪೈರಸಿಯಾಗಿದೆ. ಆನ್ಲೈನ್ನಲ್ಲಿ ಹೆಚ್ಡಿ ಮೂವಿ ಲಭ್ಯವಿದೆ ಎನ್ನುವ ಲಿಂಕ್ಗಳು ದೊಡ್ಡ ಪ್ರಮಾಣದಲ್ಲಿ ಹರಿದಾಡುತ್ತಿದೆ.
ಚಿಕ್ಕಮಗಳೂರು: ಕಾಫಿನಾಡಲ್ಲಿ ಕೆ.ಜಿ.ಎಫ್.2 ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ಚಿಕ್ಕಮಗಳೂರು ನಗರದ ನಾಗಲಕ್ಷ್ಮಿ ಥಿಯೇಟರ್ನಲ್ಲಿ ಸಿನಿಮಾ ರಿಲೀಸ್ ಆಗಿದೆ. ನಿನ್ನೆ (ಬುಧವಾರ) ಚಿಕ್ಕಮಗಳೂರಲ್ಲಿ ಸಿನಿಮಾ ರಿಲೀಸ್ ಆಗಲ್ಲ ಎಂದು ಚಿತ್ರಮಂದಿರದ ಮಾಲೀಕರು ಹೇಳಿದ್ದರು. ಇದರಿಂದ ಚಿತ್ರಮಂದಿರದ ಮುಂಭಾಗ ಯಶ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಸಿ.ಟಿ.ರವಿ ಸ್ಥಳಕ್ಕೆ ಬಂದು ಯಶ್ ಹಾಗೂ ವಿತರಕರ ಜೊತೆ ಮಾತನಾಡುವ ಭರವಸೆ ನೀಡಿದ್ದರು. ನಿನ್ನೆ ತಡರಾತ್ರಿ ಚಿತ್ರದ ರಿಲೀಸ್ಗೆ ಅನುಮತಿ ಸಿಕ್ಕಿದ್ದು, ಇಂದು ಕಾಫಿನಾಡಿನಲ್ಲಿ ತೆರೆಕಂಡಿದೆ. ಬೆಳಗ್ಗೆಯಿಂದಲೂ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಜಮಾಯಿಸಿದ್ದು, ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಅಮೆರಿಕಾದಲ್ಲೂ ಕೆಜಿಎಫ್ ಹವಾ ಜೋರಾಗಿದೆ. ಮೊದಲ ದಿನ ಸಿನಿಮಾ ನೋಡಿದ ಅಮೆರಿಕಾದ ಕನ್ನಡಿಗರು ಚಿತ್ರಮಂದಿರದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ತಾವೇ ಯಶ್ ಕಟೌಟ್ ನಿರ್ಮಿಸಿ, ಸಿನಿ ಪರದೆ ಮುಂದೆ ಪುಟಾಣಿಗಳು, ದೊಡ್ಡವರು ಬಿಂದಾಸ್ ಡ್ಯಾನ್ಸ್ ಮಾಡಿದ್ದಾರೆ. ಅಮೆರಿಕಾದ ಚಿತ್ರಮಂದಿರದಲ್ಲಿ ಕನ್ನಡದ ಬಾವುಟ ರಾರಾಜಿಸಿದ್ದು, ಅಲ್ಲೂ ಕೆಜಿಎಫ್ ರಿಲೀಸ್ ಹವಾ ಭರ್ಜರಿಯಾಗಿದೆ.
‘ಕೆಜಿಎಫ್ ಚಾಪ್ಟರ್ 2’ ಕೊನೆಯಲ್ಲಿ ಮುಂದಿನ ಭಾಗದ ಸುಳಿವು ನೀಡಲಾಗಿದೆ. ಇದರಿಂದ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದ್ದು, ಟ್ವಿಟರ್ನಲ್ಲಿ ಈ ವಿಚಾರ ಟ್ರೆಂಡ್ ಆಗಿದೆ. ‘ಕೆಜಿಎಫ್ 3’ ಸದ್ಯ ಟ್ರೆಂಡ್ ಆಗಿದ್ದು, ಜನರು ವಿಧವಿಧ ಅಭಿಪ್ರಾಯ ಹಂಚಿಕೊಂಡಿದ್ದಾರೆ.
#KGFChapter3 on cards???#KGFChapter2 #KGF2InCinemas #Yash #KGFChapter3#KGF2 #RockyBhai ?? pic.twitter.com/EzR5JVoNuv
— RCB ❤️ (@Navyanth18) April 14, 2022
ಅಮೆರಿಕಾದ ಮಿಚಿಗನ್‌ನಲ್ಲಿ ‘ಕೆಜಿಎಫ್ ಚಾಪ್ಟರ್ 2’ ಹವಾ ಜೋರಾಗಿದೆ. ಕೆಜಿಎಫ್ ಸಿನಿಮಾ ನೋಡಿ ಬಂದವರು ಫುಲ್ ಖುಷಿಯಾಗಿದ್ದಾರೆ. ಅಮೆರಿಕಾದಲ್ಲಿ ಕನ್ನಡ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಕನ್ನಡ ಅಭಿಮಾನಿಗಳು ಯಶ್‌ಗೆ ಜೈಕಾರ ಹಾಕಿದ್ದಾರೆ.
ಕೆಜಿಎಫ್ 2 ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿದೆ. ಇದಕ್ಕೆ ಸ್ಯಾಂಡಲ್ವುಟ್ ನಟ ರಕ್ಷಿತ್ ಶೆಟ್ಟಿ ಚಿತ್ರತಂಡಕ್ಕೆ ಶುಭಾಶಯ ಹೇಳಿದ್ದಾರೆ. ‘‘ಈ ಚಿತ್ರ ನಮಗೆ ಹೆಮ್ಮೆ’’ ಎಂದಿರುವ ರಕ್ಷಿತ್, ಈಗಾಗಲೇ ಚಿತ್ರವು ಗೆದ್ದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
A cinema that so many of us are so absolutely proud of! #KGFChapter2 is an undeniable winner already. Sending my heartiest wishes to the team for its grand release ? @TheNameIsYash @prashanth_neel @VKiragandur @SrinidhiShetty7 @Karthik1423 @hombalefilms
— Rakshit Shetty (@rakshitshetty) April 14, 2022
ಬೆಂಗಳೂರು: ನಗರದ ಕೆಂಗೇರಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿಂದು ಮಹಿಳೆಯರ ಸ್ಪೆಷಲ್ ಶೋ ಪ್ರದರ್ಶನವಾಗಲಿದೆ. ಬೆಳಗ್ಗೆ ೧೦ ಗಂಟೆಯ ಇಡೀ ಶೋನ ಟಿಕೆಟ್ಗಳನ್ನು ಮಹಿಳಾ ಫ್ಯಾನ್ಸ್ ಖರೀದಿಸಿದ್ದಾರೆ. ಕನ್ನಡ ಇಂಡಸ್ಟ್ರಿಯಲ್ಲಿ ಇದೆ ಮೊದಲ ಬಾರಿಗೆ ಮಹಿಳೆಯರೇ ಸಂಪೂರ್ಣ ಶೋ ಟಿಕೇಟ್ ಖರಿದಿಸಿ ಸಿನಿಮಾ ನೋಡುತ್ತಿದ್ದಾರೆ. ಇಡೀ ಚಿತ್ರಮಂದಿರದ 590 ಟಿಕೇಟ್ ತೆಗೆದುಕೊಂಡಿರುವ ಲೇಡಿಸ್ ಫ್ಯಾನ್ಸ್, ರಂಗೋಲಿ ಹಾಕಿ ರಾಕಿಭಾಯ್ ವೆಲಕಮ್ಗೆ ಸಿದ್ಧತೆ ನಡೆಸಿದ್ದಾರೆ.
‘ಕೆ.ಜಿ.ಎಫ್ – ಚಾಪ್ಟರ್ 2’ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಮೂಲಕ ಶುಭಕೋರಿದ್ದಾರೆ. ‘‘ವಿಶ್ವದಾದ್ಯಂತ ಕನ್ನಡ ಚಿತ್ರರಂಗದ ಸಂಭ್ರಮ, ಪರಂಪರೆ, ಮೌಲ್ಯ ಮತ್ತು ಸಾಮರ್ಥ್ಯದ ಬಗ್ಗೆ ಇತಿಹಾಸ ಬರೆಯಲಿರುವ ಚಿತ್ರ ಕೆಜಿಎಫ್ 2’. ಇಡೀ ಚಿತ್ರತಂಡಕ್ಕೆ ಶುಭಕೋರುತ್ತೇನೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಕೆ.ಜಿ.ಎಫ್ – ಚಾಪ್ಟರ್ 2’, ವಿಶ್ವದಾದ್ಯಂತ ಕನ್ನಡ ಚಿತ್ರರಂಗದ ಸಂಭ್ರಮ, ಪರಂಪರೆ, ಮೌಲ್ಯ ಮತ್ತು ಸಾಮರ್ಥ್ಯದ ಬಗ್ಗೆ ಇತಿಹಾಸ ಬರೆಯಲಿರುವ ಚಿತ್ರ.
ಇಡೀ ಚಿತ್ರತಂಡಕ್ಕೆ ಶುಭಕೋರುತ್ತೇನೆ.@VKiragandur @prashanth_neel @TheNameIsYash pic.twitter.com/PUXjQOYU5R— Ashwini Puneeth Rajkumar (@ashwinipuneet) April 14, 2022
ಕೋಲಾರ: ಯಶ್ ಅಭಿಮಾನಿಯೋರ್ವರು ವಿಭಿನ್ನ ಪ್ರಯತ್ನದ ಮೂಲಕ ಗಮನಸೆಳೆದಿದ್ದಾರೆ. ದಾರದಲ್ಲಿಯೇ ಫೋಟೊ ಬಿಡಿಸಿರುವ ನಾಗೇಶ್, ಶಾರದ ಚಿತ್ರಮಂದಿರದ ಎದುರು ಫೋಟೊ ಪ್ರದರ್ಶನ ಮಾಡಿದ್ದಾರೆ. ಕೋಲಾರ ತಾಲ್ಲೂಕಿನ ಖಾಜಿನ ಕಲ್ಲಹಳ್ಳಿಯವರಾಗಿರುವ ನಾಗೇಶ್ ಕಪ್ಪು ದಾರ ಬಳಸಿ ಚಿತ್ರ ಬಿಡಿಸಿದ್ದಾರೆ.
ಬೀದರ್: ಬೀದರ್ ನಗರದ ಸ್ವಪ್ನಾ ಮಲ್ಟಿಪ್ಲೆಕ್ಸ್ ನಲ್ಲಿ ಯಶ್ ಚಿತ್ರ ರಂಗೋಲಿಯಲ್ಲಿ ಅರಳಿದೆ. 20 ಅಡಿ ಉದ್ದದ ಚಿತ್ರ ಬಿಡಿಸಿದ ಯಶ್ ಅಭಿಮಾನಿಗಳು ಎಲ್ಲರ ಗಮನ ಸೆಳೆದಿದ್ದಾರೆ. ಮಲ್ಟಿಪ್ಲೆಕ್ಸ್ನಲ್ಲಿ ‘ಕೆಜಿಎಫ್ 2’ 16 ಪ್ರದರ್ಶನ ಕಾಣಲಿದೆ. ಮುಂಜಾನೆ 8.50 ಕ್ಕೆ ಮೊದಲ ಶೋ ಆರಂಭವಾಗಲಿದ್ದು, ಥೇಟರ್ ಕಡೆಗೆ ಅಭಿಮಾನಿಗಳು ಆಗಮಿಸಿ ಸಂಭ್ರಮಿಸುತ್ತಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ‘KGF-2’ ರಿಲೀಸ್ ಆಗಿಲ್ಲ. ಹಣದ ವಿಚಾರವಾಗಿ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಚಿತ್ರ ರಿಲೀಸ್ ಮಾಡಲಾಗಿಲ್ಲ. ವಿತರಕರು, ಚಿತ್ರಮಂದಿರ ಮಾಲೀಕರ ಮಧ್ಯೆ ಮಾತುಕತೆ ವಿಫಲವಾಗಿದ್ದು, ವಿತರಕರು ಹೆಚ್ಚು ಹಣಕ್ಕೆ ಡಿಮ್ಯಾಂಡ್ ಮಾಡಿದ ಹಿನ್ನೆಲೆಯಲ್ಲಿ ಪ್ರದರ್ಶನಕ್ಕೆ ಚಿತ್ರಮಂದಿರದವರು ಹಿಂದೇಟು ಹಾಕಿದ್ದಾರೆ. ಅಷ್ಟೊಂದು ಹಣ ನೀಡಿ ಟಿಕೆಟ್ ಕೊಂಡು ಇಲ್ಲಿ KGF-2 ಸಿನಿಮಾ ನೋಡಲ್ಲ, ಹೀಗಾಗಿ ಕೆಜಿಎಫ್‌ನಲ್ಲಿ KGF-2 ಸಿನಿಮಾ ರಿಲೀಸ್ ಮಾಡಿಲ್ಲ ಎಂದು ಚಿತ್ರಮಂದಿರದ ಮಾಲಿಕರು ಹೇಳಿದ್ದಾರೆ. ಹೀಗಾಗಿ ಸಮೀಪದ ಬಂಗಾರಪೇಟೆ ತಾಲೂಕಿನ ಚಿತ್ರಮಂದಿರಕ್ಕೆ ಹೋಗಿ ಅಭಿಮಾನಿಗಳು ಚಿತ್ರ ವೀಕ್ಷಿಸುತ್ತಿದ್ದಾರೆ.
ಕೆಜಿಎಫ್ 2 ಚಿತ್ರದ ತಾರೆಯರಾದ ಶ್ರೀನಿಧಿ ಶೆಟ್ಟಿ , ಹರೀಶ್ ರೈ , ಗರುಡ, ಆಂಡ್ರು ಅವಿನಾಶ್, ಅಯ್ಯಪ್ಪ , ನಟಿ ಅರ್ಚನಾ ಸೇರಿದಂತೆ ಸ್ಯಾಂಡಲ್ವುಡ್ ತಾರೆಯರಾದ ನಟಿ ಆಶಾ ಭಟ್, ವಿನಯ್ ರಾಜ್ ಕುಮಾರ್, ಗುರು ರಾಜ್ ಕುಮಾರ್ ಮೊದಲಾದವರು ಊರ್ವಶಿ ಚಿತ್ರಮಂದಿರದಲ್ಲಿ ಮಧ್ಯ ರಾತ್ರಿ ಸಿನಿಮಾ ವೀಕ್ಷಿಸಿದ್ದಾರೆ.
ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಸಿಬ್ಬಂದಿ ಎಡವಟ್ಟು ಕೆಜಿಎಫ್ 2 ಬದಲಿಗೆ ಕೆಜಿಎಫ್ 1 ಹಾಕಿ ಎಡವಟ್ಟು ಮಾಡಿದ್ದಾರೆ. ಈ ವೇಳೆ ಫ್ಯಾಣ್ಸ್ ರೊಚ್ಚಿಗೆದ್ದು ವಾಗ್ವಾದ ನಡೆಸಿದ್ದು, ನಂತರ ತಾಂತ್ರಿಕ ಸಮಸ್ಯೆ ಎಂದು ಚಿತ್ರಮಂದಿರ ಕಾರಣ ನೀಡಿದೆ. ಬಳಿಕ ಒಂದು ಗಂಟೆ ತಡವಾಗಿ ‘ಕೆಜಿಎಫ್ 2’ ಪ್ರದರ್ಶನ ಆರಂಭವಾಗಿದೆ.
ಬಳ್ಳಾರಿ: ನಸುಕಿನ ಜಾವ 3:45ಕ್ಕೆ ಜಿಲ್ಲೆಯಲ್ಲಿ KGF-2 ತೆರೆಕಂಡಿದೆ. ಚಿತ್ರ ನೋಡಲು ಪೇಕ್ಷಕರು ಮುಗಿಬಿದ್ದಿದ್ದು, ನೂಕಾಟ, ಲಾರಿ ಪ್ರಹಾರ ನಡೆದಿದೆ. ಬಳ್ಳಾರಿಯ ಶಿವ, ಗಂಗಾ, ನಟರಾಜ, ಉಮಾ, ರಾಘವೇಂದ್ರ ಚಿತ್ರಮಂದಿರದಲ್ಲಿ ಚಿತ್ರ ತೆರೆಗೆ ಬಂದಿದ್ದು, ಪೇಕ್ಷಕರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಎಲ್ಲಾ ಶೋಗಳು ಹೌಸ್‌ಫುಲ್ ಆಗಿವೆ.
ಗಾಂಧೀನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಕೆಜಿಎಫ್ -2 ಅಬ್ಬರ ಜೋರಾಗಿದೆ. ಭೂಮಿಕ, ತ್ರಿವೇಣಿ, ಅನುಪಮ ಸೇರಿದಂತೆ ಕೆಜಿ ರಸ್ತೆಯ ಕೆಲವು ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಭೂಮಿಕಾ ಚಿತ್ರಂಮದಿರದಲ್ಲಿ ಈಗಾಗಲೇ 4 ಘಂಟೆಗೆ ಶೋ ನಡೆದಿದೆ. ಪ್ಯಾನ್ ಇಂಡಿಯಾ ಸಿನಿಮಾವಾದ್ದರಿಂದ ಬೆಂಗಳೂರಿನಲ್ಲಿ ಬೇರೆ ಭಾಷೆಗಳಲ್ಲೂ ಚಿತ್ರ ರಿಲೀಸ್ ಆಗಿದೆ.
ಚಿಕ್ಕಬಳ್ಳಾಪುರದಲ್ಲಿ ಚಿತ್ರದ ರಿಲೀಸ್ ಹಿನ್ನೆಲೆಯಲ್ಲಿ ಅಭಿಮಾನಿಗಳು ಭರ್ಜರಿ ಸಂಭ್ರಮ ನಡೆಸಿದ್ದಾರೆ. ವಾಣಿ ಚಿತ್ರಮಂದಿರದ ಬಳಿ ಪಟಾಕಿ ಸಿಡಿಸಿ, ತಮಟೆ ಬಾರಿಸಿ ನೆಚ್ಚಿನ ನಟನ ಚಿತ್ರವನ್ನು ಸ್ವಾಗತಿಸಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ಚಿತ್ರ ನೋಡಲು ಅಭಿಮಾನಿಗಳು ರಾತ್ರಿ 10ರಿಂದಲೇ ಸರದಿಯಲ್ಲಿ ನಿಂತಿದ್ದಾರೆ. ಮುಂಜಾನೆ 4.15ಕ್ಕೆ ಪ್ರದರ್ಶನ ಆರಂಭವಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಶ್ರಮವಹಿಸುತ್ತಿದ್ದಾರೆ.
ದುಬೈನಲ್ಲೂ ಕೆಜಿಎಫ್ ಅಬ್ಬರ ಜೋರಾಗಿದೆ. ಮೊದಲ ದಿನ ಫಸ್ಟ್ ಶೋ ನೋಡಿ ರಾಕಿಭಾಯ್ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಯಶ್ ಆಕ್ಷನ್ ಅನ್ನು ದುಬೈ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಕನ್ನಡ ಸಿನಿಮಾ ನೂರು ವರ್ಷಕ್ಕೆ ಮೈಲ್ ಸ್ಟೋನ್ ಕೆಜಿಎಫ್ ಎಂದು ಚಿತ್ರವನ್ನು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಬಿಡುಗಡೆ ವೇಳೆ ಕೋಲಾರದ ಭವಾನಿ ಚಿತ್ರಮಂದಿರದ ಒಳಗೆ ಪೇಪರ್ ಬ್ಲಾಸ್ಟರ್ ಸಿಡಿಸಿಲು ಚಿತ್ರಮಂದಿರದವರು ನಿರಾಕರಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ತಂದಿರುವ ಪೇಪರ್ ಬ್ಲಾಸ್ಟರ್ಗಳನ್ನು ಹೊಡೆಯಲು ಸ್ವಚ್ಛತೆಯ ಕಾರಣದಿಂದ ಅವಕಾಶ ನಿರಾಕರಿಸಲಾಗಿದೆ.
ಕರ್ನಾಟಕದಲ್ಲಿ ಕೆಜಿಎಫ್ 2 550ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನವಾಗಲಿದೆ. ಮೊದಲ ದಿನ 2500 ರಿಂದ 3000 ಶೋ ಸಾಧ್ಯತೆ ಇದ್ದು, ಆಲ್ಮೋಸ್ಟ್ ಎಲ್ಲಾ ಶೋಗಳು ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನಲ್ಲಿ 1000ಕ್ಕು ಹೆಚ್ಚು ಶೋ ಪ್ರದರ್ಶನವಾಗಲಿದೆ. ಭಾರತದಲ್ಲಿ 6000 ಸ್ಕ್ರೀನ್ನಲ್ಲಿ ಚಾಪ್ಟರ್ 2 ರಿಲೀಸ್ ಆಗಲಿದ್ದು, ವಿಶ್ವಾದ್ಯಂತ 10000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ಯುಎಸ್ನಲ್ಲೇ 1000 ಸ್ಕ್ರೀನ್ನಲ್ಲಿ ಕೆಜಿಎಫ್ ತೆರೆಕಾಣುತ್ತಿದೆ. ತಮಿಳುನಾಡಿನಲ್ಲಿ 350 ಸ್ಕ್ರೀನ್, ಕೇರಳ 400 ಸ್ಕ್ರೀನ್, ಆಂಧ್ರ- ತೆಲಂಗಾಣದಲ್ಲಿ ಸಾವಿರ ಸ್ಕ್ರಿನ್ಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಈಗಾಗಲೇ ಫ್ಯಾನ್ಸ್ ಶೋ ಮುಗಿದಿದ್ದು ರಾಕಿಭಾಯ್ ದರ್ಶನ ಕಂಡು ಫ್ಯಾನ್ಸ್ ಸಂಭ್ರಮಿಸಿದ್ದಾರೆ.
ಸುಮಾರು 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ‘ಕೆಜಿಎಫ್ 2’ ರಿಲೀಸ್ ಆಗುತ್ತಿದೆ. ಭಾರತದಲ್ಲಿ 6000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದ್ದು, ರಾಜ್ಯದ 550ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಮಧ್ಯರಾತ್ರಿಯಿಂದಲೇ ಹಲವೆಡೆ ಕೆಜಿಎಫ್-2 ಶೋ ಆರಂಭವಾಗಿದ್ದು, ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೆ ಗ್ರ್ಯಾಂಡ್ ವೆಲ್‌ಕಂ ಸಿಕ್ಕಿದೆ. ‘ಕೆಜಿಎಫ್-2’ 40 ಲಕ್ಷ ಟಿಕೆಟ್ಸ್ ಸೋಲ್ಡ್ ಔಟ್ ಆಗಿದ್ದು, ರಾಜ್ಯದಲ್ಲಿ ‘ಕೆಜಿಎಫ್-2’ ಎಲ್ಲಾ ಶೋಗಳು ಹೌಸ್‌ಫುಲ್ ಆಗಿವೆ. ಡಾ.ಪುನೀತ್ ರಾಜ್‌ಕುಮಾರ್‌ಗೆ ಸ್ಪೆಷಲ್ ಸಾಂಗ್ ಟ್ರಿಬ್ಯೂಟ್ ಮಾಡಲಾಗಿದ್ದು, ಥಿಯೇಟರ್‌ಗಳಲ್ಲಿ ಅಭಿಮಾನಿಗಳು ಖುಷ್ ಆಗಿದ್ದಾರೆ. 5 ಭಾಷೆಗಳಲ್ಲಿ 70 ದೇಶಗಳಲ್ಲಿ ‘ಕೆಜಿಎಫ್-2’ ರಿಲೀಸ್ ಆಗಿದೆ.
‘ಕೆಜಿಎಫ್ ಚಾಪ್ಟರ್ 2’ ರಿಲೀಸ್ ಆಗಿದೆ. ಟ್ವಿಟರ್ನಲ್ಲಿ ಜನರು ಚಿತ್ರದ ಬಗ್ಗೆ ದೊಡ್ಡ ಮಟ್ಟದಲ್ಲಿ ಪಾಸಿಟಿವ್ ಮಾತುಗಳನ್ನು ಆಡುತ್ತಿದ್ದಾರೆ. ಅಲ್ಲದೇ ಪ್ರಶಾಂತ್ ನೀಲ್, ಯಶ್, ಸಂಜಯ್ ದತ್ ಕಾಂಬಿನೇಷನ್ಗೆ ಫಿದಾ ಆಗಿದ್ದಾರೆ. ‘ಕೆಜಿಎಫ್ 2’ ಮೊದಲಾರ್ಧ ಹೇಗಿದೆ? ಟಿವಿ9 ಡಿಜಿಟಲ್ ವಿಮರ್ಶೆ ಇಲ್ಲಿದೆ.
ಬರಹ: KGF Chapter 2 First Half Review: ಹೇಗಿದೆ ‘ಕೆಜಿಎಫ್ ಚಾಪ್ಟರ್ 2’ ಮೊದಲಾರ್ಧ? ಅಬ್ಬರಿಸಿದ ಯಶ್
Published On - 7:30 am, Thu, 14 April 22