KGF Chapter 2: ಯಶ್​ ನಟನೆಯ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್​ ಬಗ್ಗೆ ಮಹತ್ವದ ಘೋಷಣೆ ಮಾಡಿದ ಪ್ರಶಾಂತ್ ನೀಲ್

|

Updated on: Jul 06, 2021 | 5:42 PM

KGF Chapter 2 Release Date: ಕೆಜಿಎಫ್​-2 ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ. ಅಲ್ಲದೆ, ಇದರ ಮೇಲೆ ನಿರೀಕ್ಷೆ ಕೂಡ ಹೆಚ್ಚಿದೆ. ಹೀಗಾಗಿ, ಈ ಕೆಜಿಎಫ್​ 2 ನಿರ್ಮಾಪಕರು ತರಾತುರಿಯಲ್ಲಿ ಸಿನಿಮಾ ರಿಲೀಸ್​ ಮಾಡುವ ನಿರ್ಧಾರಕ್ಕೆ ಬರುವುದಿಲ್ಲ ಎನ್ನಲಾಗಿತ್ತು. ಈಗ ಹಾಗೆಯೇ ಆಗಿದೆ.

KGF Chapter 2: ಯಶ್​ ನಟನೆಯ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್​ ಬಗ್ಗೆ ಮಹತ್ವದ ಘೋಷಣೆ ಮಾಡಿದ ಪ್ರಶಾಂತ್ ನೀಲ್
ವಿಜಯ್​ ಕಿರಗಂದೂರು- ಯಶ್​- ಪ್ರಶಾಂತ್​ ನೀಲ್​
Follow us on

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇನ್ನು ಕೇವಲ 10 ದಿನಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತೆರೆಕಾಣಬೇಕಿತ್ತು. ಆದರೆ, ಈಗ ಚಿತ್ರಮಂದಿರಗಳು ತೆರೆಯದ ಕಾರಣ ಅದು ಸಾಧ್ಯವಾಗುತ್ತಿಲ್ಲ. ಪ್ರಶಾಂತ್​ ನೀಲ್​ ನಿರ್ದೇಶನ ಇರುವ, ಯಶ್​ ಮುಖ್ಯಭೂಮಿಕೆ ನಿರ್ವಹಿಸರುವ ಈ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಒಂದನ್ನು ಪ್ರಶಾಂತ್​ ನೀಲ್​ ನೀಡಿದ್ದಾರೆ. ಈ ಘೋಷಣೆಯಿಂದ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ಉಂಟಾಗಿದೆ.

ಕೆಜಿಎಫ್​-2 ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ. ಅಲ್ಲದೆ, ಇದರ ಮೇಲೆ ನಿರೀಕ್ಷೆ ಕೂಡ ಹೆಚ್ಚಿದೆ. ಹೀಗಾಗಿ, ಈ ಕೆಜಿಎಫ್​ 2 ನಿರ್ಮಾಪಕರು ತರಾತುರಿಯಲ್ಲಿ ಸಿನಿಮಾ ರಿಲೀಸ್​ ಮಾಡುವ ನಿರ್ಧಾರಕ್ಕೆ ಬರುವುದಿಲ್ಲ ಎನ್ನಲಾಗಿತ್ತು. ಈಗ ಹಾಗೆಯೇ ಆಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಶಾಂತ್ ನೀಲ್​, ಕೆಜಿಎಫ್​ 2 ರಿಲೀಸ್​ ದಿನಾಂಕ ಮುಂದೂಡುತ್ತಿರುವುದನ್ನು ಖಚಿತಪಡಿಸಿದ್ದಾರೆ.

‘ಸಿನಿಮಾ ಹಾಲ್​ನಲ್ಲಿ ಗ್ಯಾಂಗ್​ಸ್ಟರ್​ಗಳು ತುಂಬಿರುವಾಗ ಮಾತ್ರ ಮಾನ್​ಸ್ಟರ್​ ಬರುತ್ತಾನೆ. ಅವನು ಬರೋ ಹೊಸ ಡೇಟ್​ ಶೀಘ್ರದಲ್ಲೇ ಘೋಷಣೆ ಮಾಡಲಿದ್ದೇವೆ’ ಎಂದಿದ್ದಾರೆ ಪ್ರಶಾಂತ್​ ನೀಲ್​. ಕೊವಿಡ್​ ಕಾರಣದಿಂದ ಸಿನಿಮಾ ಹಾಲ್​ಗಳನ್ನು ಕರ್ನಾಟಕದಲ್ಲಿ ಮುಚ್ಚಲಾಗಿದೆ. ಸಿನಿಮಾ ಹಾಲ್​ ತೆರೆಯೋಕೆ ಸಂಪೂರ್ಣ ಅವಕಾಶ ಸಿಕ್ಕ ನಂತರವೇ ಕೆಜಿಎಫ್​ 2 ರಿಲೀಸ್​ ಆಗಲಿದೆ.

ಇನ್ನು, ಕೆಜಿಎಫ್​ 2 ಸೆಪ್ಟೆಂಬರ್ 9ರಂದು ಸಿನಿಮಾ ತೆರೆಗೆ ಬರಲಿದೆ ಎನ್ನುವ ಮಾತು ಹರಿದಾಡಿದೆ. ಆದರೆ, ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಇಂದು ಕೂಡ ಪ್ರಶಾಂತ್​ಆ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಕೆಜಿಎಫ್​ 2ನಲ್ಲಿ ಯಶ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಶ್ರೀನಿಧಿ ಶೆಟ್ಟಿ ಚಿತ್ರದ ನಾಯಕಿ. ಈ ಸಿನಿಮಾದಲ್ಲಿ ಬಾಲಿವುಡ್​ ಸ್ಟಾರ್​ ನಟ ಸಂಜಯ್​ ದತ್​ ಮುಖ್ಯ ವಿಲನ್​ ಆಗಿ ನಟಿಸಿದ್ದಾರೆ. ಕೆಜಿಎಫ್​-2 ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಹೊಸ ದಾಖಲೆ ಮಾಡುವ ಸಾಧ್ಯತೆ ಇದೆ. ಸದ್ಯ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್​ ನಡೆಯುತ್ತಿದೆ.

ಇದನ್ನೂ ಓದಿ: ‘ಕೆಜಿಎಫ್​’ ನಿರ್ಮಾಪಕ ವಿಜಯ್​ ಕಿರಗಂದೂರು ಹೇಳಿದ ಮಾತಿನಿಂದ ಮುಗಿಯಿತು ‘ಕಿರಿಕ್​ ಪಾರ್ಟಿ’ ವಿವಾದ

Published On - 5:35 pm, Tue, 6 July 21