AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2 Update: ಈ ತಿಂಗಳಾಂತ್ಯದಲ್ಲಿ ಕೆಜಿಎಫ್ ತಂಡದಿಂದ ಬಿಗ್ ಸರ್​ಪ್ರೈಸ್

KGF 2: ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟರಲ್ಲಾಗಲೇ ಕೆಜಿಎಫ್-2 ಥಿಯೇಟರ್​ಗೆ ಅಪ್ಪಳಿಸಬೇಕಿತ್ತು. ಇದೀಗ ಕೊರೋನಾ ಕಾರಣದಿಂದ ಚಿತ್ರತಂಡದ ಸಂಪೂರ್ಣ ಲೆಕ್ಕಚಾರಗಳು ತಲೆಕೆಳಗಾಗಿದ್ದು, ಇದಾಗ್ಯೂ ಚಿತ್ರ ಮಂದಿರದಲ್ಲೇ ಕೆಜಿಎಫ್ 2 ಅನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

KGF Chapter 2 Update: ಈ ತಿಂಗಳಾಂತ್ಯದಲ್ಲಿ ಕೆಜಿಎಫ್ ತಂಡದಿಂದ ಬಿಗ್ ಸರ್​ಪ್ರೈಸ್
Kgf 2
TV9 Web
| Edited By: |

Updated on: Jul 27, 2021 | 9:11 PM

Share

ಸಪ್ತಸಾಗರದಾಚೆಗೂ ಸಖತ್ ಸೌಂಡ್ ಮಾಡಿದ್ದ ಕೆ.ಜಿ.ಎಫ್ (KGF 2) ಚಿತ್ರ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ರಾಖಿ ಭಾಯ್​ಯಿಂದಲ್ಲ ಬದಲಾಗಿ ಖಡಕ್ ವಿಲನ್ ಅಧೀರನಿಂದ ಎಂಬುದು ವಿಶೇಷ. ಹೌದು, ಇದೇ ತಿಂಗಳಾಂತ್ಯದಲ್ಲಿ ಕೆಜಿಎಫ್ ಚಿತ್ರತಂಡದಿಂದ ಬಿಗ್ ಸರ್​ಪ್ರೈಸ್​ವೊಂದು ಸಿಗಲಿದೆ. ಇದೇ ತಿಂಗಳ 29 ರಂದು ಅಧೀರ ಅವತಾರಿ ನಟ ಸಂಜಯ್ ದತ್ (Sanjay Dutt) 62ನೇ ವಸಂತಕ್ಕೆ ಕಾಲಿಡಲಿದ್ದಾರೆ. ಕಳೆದ ವರ್ಷ ಸಂಜು ಬಾಬಾ ಅವರ ಹುಟ್ಟುಹಬ್ಬದಂದು ರಗಡ್ ಲುಕ್ ಅನಾವರಣಗೊಳಿಸಿ ಸರ್​ಪ್ರೈಸ್ ನೀಡಿದ್ದ ನಿರ್ದೇಶಕ ಪ್ರಶಾಂತ್ ನೀಲ್, ಈ ಬಾರಿ ಟೀಸರ್​ವೊಂದನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿ ಬರುತ್ತಿದೆ.

ಈ ಹಿಂದೆ ಪ್ರಶಾಂತ್ ನೀಲ್, ‘ಅಧೀರ’ ಪಾತ್ರದ ಪೋಸ್ಟರ್ ಹಾಗೂ ಸಣ್ಣ ವಿಡಿಯೋ ತುಣುಕು ಪ್ರದರ್ಶಿಸಿ ಕೆಜಿಎಫ್ (KGF Chapter 2) ಚಿತ್ರತಂಡ ಸಿನಿಪ್ರಿಯರ ಕುತೂಹಲಕ್ಕೆ ಕಿಚ್ಚು ಹಚ್ಚಿದ್ದರು. ಅಷ್ಟೇ ಅಲ್ಲದೆ ಚಾಪ್ಟರ್​ 1 ರಲ್ಲಿ ಅಧೀರನ ಉಂಗುರವನ್ನು ತೋರಿಸುವ ಮೂಲಕ ಕುತೂಹಲಕಾರಿ ಕ್ಲೈಮ್ಯಾಕ್ಸ್​ ಸೃಷ್ಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದರು. ಇದಾಗ್ಯೂ ಕಳೆದ ಎರಡು ವರ್ಷಗಳಿಂದ ಅಧೀರನ ಕೌರ್ಯತೆಯನ್ನು ಪ್ರಶಾಂತ್ ನೀಲ್ ಎಲ್ಲೂ ತೋರಿಸಿರಲಿಲ್ಲ. ಇದೀಗ ಜುಲೈ 29 ರಂದು ಅಧೀರನ ಮತ್ತೊಂದು ಮುಖ ಅನಾವರಣಗೊಳಿಸಲಿದ್ದಾರೆ ಎನ್ನಲಾಗುತ್ತಿದೆ.

ಕೆಜಿಎಫ್ ಚಾಪ್ಟರ್-2ನಲ್ಲಿ ಅಧೀರನಿಗಾಗಿ ವಿಶೇಷ ಹಾಡೊಂದನ್ನು ಸಂಯೋಜಿಸಲಾಗಿದ್ದು, ಈ ಹಾಡಿನ ಸಣ್ಣ ಟೀಸರ್​ನ ಮೂಲಕ ಸಂಜು ಬಾಬಾನಿಗೆ ಬರ್ತ್​ಡೇ ಗಿಫ್ಟ್ ನೀಡಲು ಪ್ರಶಾಂತ್ ನೀಲ್ ಅ್ಯಂಡ್ ಟೀಮ್ ಪ್ಲ್ಯಾನ್ ಹಾಕಿಕೊಂಡಿದೆ ಎನ್ನಲಾಗಿದೆ. ಅದರಂತೆ ಜುಲೈ 29 ರಂದು ಕೆಜಿಎಫ್ ಚಿತ್ರದ ಹಾಡಿನ ತುಣುಕು ಅಥವಾ ಭರ್ಜರಿ ಹಿನ್ನೆಲೆ ಸಂಗೀತದೊಂದಿಗೆ ಅಧೀರನ ಅವತಾರ ದರ್ಶನವಾಗಲಿದೆ.

ಕೆಜಿಎಫ್ ಚಾಪ್ಟರ್-2 (KGF Chapter 2) ಚಿತ್ರದ ಬಹುತೇಕ ಕೆಲಸಗಳು ಮುಗಿದಿದೆ. ಅದರಲ್ಲೂ ಯಶ್-ಸಂಜಯ್ ದತ್ ಕಾಂಬಿನೇಷನ್​ನಲ್ಲಿರುವ ದೃಶ್ಯಗಳು ಕಂಪ್ಲೀಟ್ ಆಗಿವೆ. ಇನ್ನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಾಗೂ ಹಾಡೊಂದರ ದೃಶ್ಯಗಳ ಚಿತ್ರೀಕರಣ ಮಾತ್ರ ಉಳಿದಿವೆ. ಹಾಗೆಯೇ ಸಂಜಯ್ ದತ್ ಪಾತ್ರದ ಡಬ್ಬಿಂಗ್ ಕೆಲಸಗಳು ಬಾಕಿ ಉಳಿದಿದ್ದು, ಇದನ್ನೂ ಕೂಡ ಶೀಘ್ರದಲ್ಲೇ ಮುಗಿಸಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟರಲ್ಲಾಗಲೇ ಕೆಜಿಎಫ್-2 ಥಿಯೇಟರ್​ಗೆ ಅಪ್ಪಳಿಸಬೇಕಿತ್ತು. ಇದೀಗ ಕೊರೋನಾ ಕಾರಣದಿಂದ ಚಿತ್ರತಂಡದ ಸಂಪೂರ್ಣ ಲೆಕ್ಕಚಾರಗಳು ತಲೆಕೆಳಗಾಗಿದ್ದು, ಇದಾಗ್ಯೂ ಚಿತ್ರ ಮಂದಿರದಲ್ಲೇ ಕೆಜಿಎಫ್ 2 ಅನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ. ಇನ್ನು ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ನೂರರಷ್ಟು ಅವಕಾಶ ಸಿಕ್ಕ ಬಳಿಕವಷ್ಟೇ ಕೆಜಿಎಫ್-2 ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟಿಸುವ ಇರಾದೆಯಲ್ಲಿದೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್.

ಇದನ್ನೂ ಓದಿ: Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ

ಇದನ್ನೂ ಓದಿ: Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ