Yash: ‘ಕೆಜಿಎಫ್​ 3’ ಮಾತ್ರ ನಿಮಗೆ ಉಳಿದಿರುವ ಆಯ್ಕೆ ಎಂದವರಿಗೆ ಯಶ್ ಕೊಟ್ರು ಖಡಕ್ ಉತ್ತರ

‘ನಿಮಗೆ ಉಳಿದಿರುವುದು ಕೆಜಿಎಫ್​ 3 ಮಾತ್ರ. ನೀವು ಅದನ್ನೇ ಮಾಡಬೇಕು’ ಎಂದು ಯಶ್​ಗೆ ಅನೇಕರು ಕಿವಿಮಾತು ಹೇಳಿದ್ದರಂತೆ. ಇವರಿಗೆ ಯಶ್ ತಿರುಗೇಟು ಕೊಟ್ಟಿದ್ದಾರೆ.

Yash: ‘ಕೆಜಿಎಫ್​ 3’ ಮಾತ್ರ ನಿಮಗೆ ಉಳಿದಿರುವ ಆಯ್ಕೆ ಎಂದವರಿಗೆ ಯಶ್ ಕೊಟ್ರು ಖಡಕ್ ಉತ್ತರ
ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 12, 2023 | 8:01 AM

ಒಂದು ದೊಡ್ಡ ಯಶಸ್ಸು ಸಿಕ್ಕ ನಂತರದಲ್ಲಿ ಆ ವರ್ಚಸ್ಸನ್ನು ಮುಂದುವರಿಸಿಕೊಂಡು ಹೋಗುವುದು ತುಂಬಾ ಸವಾಲಿನ ಕೆಲಸ. ಇದಕ್ಕೆ ತಾಜಾ ಉದಾಹರಣೆ ಪ್ರಭಾಸ್(Prabhas). ‘ಬಾಹುಬಲಿ’ ಸರಣಿಯಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಈ ಚಿತ್ರದಿಂದ ಅವರು ಗೆದ್ದರು. ಅವರ ಸಿನಿಮಾಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿತು. ‘ಬಾಹುಬಲಿ 2’ ಬಳಿಕ ಬಂದ ಎರಡು ಸಿನಿಮಾಗಳು ಸೋತವು. ಯಶ್​ಗೂ (Yash) ಹೀಗೆಯೇ ಆಗುತ್ತದೆ ಎಂದು ಅನೇಕರು ಹೇಳಿದ್ದಿದೆ. ಇದಕ್ಕೆ ಯಶ್ ಖಡಕ್ ಆಗಿ ಉತ್ತರಿಸಿದ್ದಾರೆ.

ಯಶ್ ‘ಕೆಜಿಎಫ್ 2’ ಮೂಲಕ ಯಶಸ್ಸು ಕಂಡಿದ್ದಾರೆ. ಅವರ ಮುಂದಿನ ಸಿನಿಮಾ ‘ಕೆವಿಎನ್​ ಪ್ರೊಡಕ್ಷನ್​’ ಜತೆ ಎಂಬ ವಿಚಾರ ರಿವೀಲ್ ಆಗಿದೆ. ಆದರೆ, ನಿರ್ದೇಶಕರು ಯಾರು ಎಂಬುದು ಇನ್ನೂ ಘೋಷಣೆ ಆಗಿಲ್ಲ. ಹೀಗಿರುವಾಗಲೇ ಯಶ್​ಗೆ ಅನೇಕರು ಅನೇಕ ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ‘ನಿಮಗೆ ಉಳಿದಿರುವುದು ಕೆಜಿಎಫ್​ 3 ಮಾತ್ರ. ನೀವು ಅದನ್ನೇ ಮಾಡಬೇಕು’ ಎಂದು ಯಶ್​ಗೆ ಅನೇಕರು ಕಿವಿಮಾತು ಹೇಳಿದ್ದರಂತೆ. ಇವರಿಗೆ ಯಶ್ ತಿರುಗೇಟು ಕೊಟ್ಟಿದ್ದಾರೆ. ಒಂದು ಕಡೆ ಸೆಟಲ್ ಆಗಿ ಕೆಲಸ ಮಾಡುವ ವ್ಯಕ್ತಿ ನಾನಲ್ಲ ಎಂದಿದ್ದಾರೆ.

ಇದನ್ನೂ ಓದಿ
Image
Radhika Pandit: ಯಶ್​​ಗಿಂತ ರಾಧಿಕಾ ಪಂಡಿತ್ ಎಷ್ಟು ವರ್ಷ ದೊಡ್ಡವರು? ಇಲ್ಲಿದೆ ಮಾಹಿತಿ
Image
Yash Birthday: ಬರ್ತ್​ಡೇಗೂ ಮೊದಲು ಅಭಿಮಾನಿಗಳ ಭೇಟಿ ಮಾಡಿದ ಯಶ್; ಇದಕ್ಕಿದೆ ಕಾರಣ
Image
Yash Birthday: ‘ಕ್ಷಮಿಸಿ, ಹುಟ್ಟುಹಬ್ಬಕ್ಕೆ ನಿಮ್ಮ ಜತೆ ಇರಲು ಆಗುತ್ತಿಲ್ಲ’: ಅಭಿಮಾನಿಗಳಿಗೆ ಯಶ್​ ಪತ್ರ
Image
Yash: ನಟ ಯಶ್​ ಅವರನ್ನು ಭೇಟಿ ಮಾಡಿದ ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್​, ಕೃನಾಲ್ ಪಾಂಡ್ಯ

ಸಂದರ್ಶನ ಒಂದರಲ್ಲಿ ಮಾತನಾಡಿರುವ ಯಶ್​, ‘ಜನರು ಈಗಲೂ ಕೇಳುತ್ತಾರೆ. ಹೊಸ ಸಿನಿಮಾ ಘೋಷಿಸಲು ಇಷ್ಟೊಂದು ಸಮಯ ಏಕೆ ತೆಗೆದುಕೊಳ್ಳುತ್ತಿದ್ದೀರಿ? ನೀವು ಮುಂದೇನು ಮಾಡುತ್ತೀರಿ? ನನ್ನ ಪ್ರಕಾರ ನಿಮಗೆ ಉಳಿದಿರೋದು ಕೆಜಿಎಫ್ 3 ಮಾತ್ರ. ಗಡ್ಡ ತೆಗೆದರೆ ಜನರು ನಿಮ್ಮನ್ನು ಹೇಗೆ ಒಪ್ಪಿಕೊಳ್ಳುತ್ತಾರೆ? ಈ ರೀತಿಯ ಪ್ರಶ್ನೆಗಳು, ಮಾತುಗಳು ನನ್ನ ಗೆಳೆಯರ ವಲಯದಿಂದಲೇ ಬಂದಿದೆ’ ಎಂದಿದ್ದಾರೆ ಯಶ್.

‘ನಿಮ್ಮಿಂದ ಏನು ಮಾಡಲು ಸಾಧ್ಯ? ಇದೇ ಕೊನೆಯೇ​? ಎಂದು ಕೇಳುತ್ತಾರೆ. ಅದು ನಿಮಗೆ ಇರಬಹುದು. ಗೆದ್ದಿರುವುದನ್ನು ನಿಭಾಯಿಸುವುದಕ್ಕಿಂತ ಹೊಸದನ್ನು ಗೆಲ್ಲುವುದು ನನಗಿಷ್ಟ. ಎಗ್ಸೈಟ್​ಮೆಂಟ್ ಕೊಡುವ ಕೆಲಸವನ್ನು ನಾನು ಮಾಡುತ್ತೇನೆ. ಹೋರಾಡುತ್ತ ಮೃತಪಟ್ಟರೆ ನನಗೇನೂ ಬೇಸರ ಇಲ್ಲ. ಆದರೆ, ಹೋರಾಡುತ್ತಿದ್ದೇನಲ್ಲ ಅದು ಮುಖ್ಯ’ ಎಂದು ಯಶ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ