ಕಿಚ್ಚ ಸುದೀಪ್ ಕಾಲೆಳೆದ ರೀತಿಗೆ ನಾಚಿ ನೀರಾದ ಹಾಸ್ಯ ನಟ ಯೋಗಿ ಬಾಬು

ಕಿಚ್ಚ ಸುದೀಪ್ ಅವರು 'ಮಾರ್ಕ್' ಸಿನಿಮಾದ ಶೂಟಿಂಗ್ ವೇಳೆ ನಟ ಯೋಗಿ ಬಾಬು ಅವರ ಬ್ಯುಸಿ ವೇಳಾಪಟ್ಟಿಯನ್ನು ಹಾಸ್ಯಮಯವಾಗಿ ಕಾಲೆಳೆದರು. ಯೋಗಿ ಬಾಬು 'ಇನ್ಸ್ಟಾಲ್ಮೆಂಟ್'ನಲ್ಲಿ ಚಿತ್ರೀಕರಣಕ್ಕೆ ಬರುತ್ತಿದ್ದರು ಎಂದು ಸುದೀಪ್ ಹೇಳಿದ್ದು ನಗೆ ತರಿಸಿದೆ. ಪ್ರಸ್ತುತ ತಮಿಳಿನಲ್ಲಿ ಅತ್ಯಂತ ಬೇಡಿಕೆಯ ನಟನಾಗಿರುವ ಯೋಗಿ ಬಾಬು ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದನ್ನು ಸುದೀಪ್ ಅವರ ಮಾತುಗಳು ಸೂಚಿಸುತ್ತವೆ.

ಕಿಚ್ಚ ಸುದೀಪ್ ಕಾಲೆಳೆದ ರೀತಿಗೆ ನಾಚಿ ನೀರಾದ ಹಾಸ್ಯ ನಟ ಯೋಗಿ ಬಾಬು
ಸುದೀಪ್-ಯೋಗಿ ಬಾಬು
Edited By:

Updated on: Jan 03, 2026 | 7:40 AM

ಕಿಚ್ಚ ಸುದೀಪ್ (Kichcha Sudeep) ಅವರು ‘ಮಾರ್ಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆಯನ್ನು ಮೀರಿ ಸಿನಿಮಾ ಯಶಸ್ಸು ಕಂಡಿದೆ ಎಂದರೂ ತಪ್ಪಾಗಲಾರದು. ಈ ಸಿನಿಮಾದಲ್ಲಿ ತಮಿಳು ನಟ ಯೋಗಿ ಬಾಬು ಕೂಡ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಸುದೀಪ್ ಮಾತನಾಡುವಾಗ ಯೋಗಿ ಬಾಬು ಅವರನ್ನು ಹೊಗಳಿದರು.

ಯೋಗಿ ಬಾಬು ಅವರು ಸ್ಟಾರ್ ಹೀರೋಗಳಿಗಿಂತ ಬ್ಯುಸಿ ಎಂದರೂ ತಪ್ಪಾಗಲಾರದು. ಅವರು ಹಲವು ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸುತ್ತಿರುತ್ತಾರೆ. ‘ಮಾರ್ಕ್’ ಚಿತ್ರದಲ್ಲಿ ಅವರು ಬಣ್ಣ ಹಚ್ಚಿದ್ದರು. ಅವರು ಹಂತ ಹಂತವಾಗಿ ಸಿನಿಮಾ ಶೂಟ್​ಗೆ ಬಂದಿದ್ದರಂತೆ. ಈ ಬಗ್ಗೆ ಸುದೀಪ್ ಮಾತನಾಡಿದ್ದರು.

‘ನಮ್ಮ ಸೆಟ್​​​ನಲ್ಲಿ ಬ್ಯುಸಿ ಹೀರೋ ಎಂದರೆ ಅದು ಯೋಗಿ ಬಾಬು. ನಮ್ಮ ಸೆಟ್​​ನಲ್ಲಿ ಒಂದು ಕಾಲು, ಮತ್ತೊಂದು ಸೆಟ್​​​ನಲ್ಲಿ ಮತ್ತೊಂದು ಕಾಲಿತ್ತು. ಅವರು ಇನ್​​ಸ್ಟಾಲ್​​ಮೆಂಟ್ ಅಲ್ಲಿ ನಟಿಸಿದ್ದಾರೆ. ವಾಹನ ಖರೀದಿ ಮಾಡ್ತೀರಾ. ಹಣವನ್ನು ಮಾತ್ರ ಇನ್​​ಸ್ಟಾಲ್​ಮೆಂಟ್​​ನಲ್ಲಿ ಕಟ್ಟೋದು ತಾನೆ? ವಾಹನ ಇನ್​​ಸ್ಟಾಲ್​​ಮೆಂಟ್​​ನಲ್ಲಿ ಬರುತ್ತಾ’ ಎಂದು ಪ್ರಶ್ನೆ ಮಾಡಿದ್ದಾರೆ ಸುದೀಪ್.

‘ಪ್ಯಾಕಪ್ ಎಂದು ಹೇಳುತ್ತಿದ್ದರು. ಇನ್ನೇನು ಸೆಟ್​​ನಿಂದ ಹೋಗಬೇಕು, ಯೋಗಿ ಅವರು ಬಂದಿದ್ದಾರೆ ಶೂಟ್ ಮಾಡಬೇಕು ಎಂದು ನಿರ್ದೇಶಕರು ಹೇಳುತ್ತಿದ್ದರು. ಅವರು ನಮ್ಮ ಆಸ್ತಿ. ಇಡೀ ತಂಡ ಚೆನ್ನಾಗಿ ಕೆಲಸ ಮಾಡಿದೆ’ ಎಂದು ಸುದೀಪ್ ಅವರು ಹೇಳಿದ್ದರು.

ಇದನ್ನೂ ಓದಿ:  ‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್

ಯೋಗಿ ಬಾಬು ತಮಿಳಿನ ಖ್ಯಾತ ನಾಮರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮಿಳಿನ ಬಹುತೇಕ ಸ್ಟಾರ್​ ಗಳ ಜೊತೆ ನಟಿಸಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.