
ನಟ ಕಿಚ್ಚ ಸುದೀಪ್ ಹಾಗೂ ಜನಪ್ರಿಯ ನಿರ್ದೇಶಕ ಪ್ರೇಮ್ ಅವರ ಕಾಂಬಿನೇಷನ್ ಬಗ್ಗೆ ಸಿನಿಮಾ ರಂಗದಲ್ಲಿ ಭಾರೀ ನಿರೀಕ್ಷೆ ಹಾಗೂ ಕುತೂಹಲ ಮೂಡಿದೆ. ‘ದಿ ವಿಲನ್’ ಚಿತ್ರದ ಬಳಿಕ ಈ ಇಬ್ಬರೂ ದಿಗ್ಗಜರು ಮತ್ತೊಮ್ಮೆ ಒಂದಾಗುತ್ತಿದ್ದು, ಹೊಸ ಸಿನಿಮಾದ ಟೈಟಲ್ ಟೀಸರ್ ಗಾಗಿ ಶೂಟಿಂಗ್ ಆರಂಭಿಸಿದ್ದಾರೆ. ಬಿಗ್ ಬಾಸ್ 13 ಸೆಟ್ನಿಂದ ಸುದೀಪ್ ಅವರು ಫೋಟೋವೊಂದನ್ನು ಹಂಚಿಕೊಳ್ಳುವುದರ ಜೊತೆಗೆ, ಪ್ರೇಮ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಈ ಜೋಡಿಯಿಂದ ಬಂದಿದ್ದ ‘ದಿ ವಿಲನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಕಂಡಿತ್ತು. ಆ ಚಿತ್ರದ ಬಳಿಕ ಮತ್ತೆ ಈ ಕಾಂಬಿನೇಷನ್ ಒಂದಾಗುತ್ತಿರುವುದರಿಂದ, ಈ ಬಾರಿ ಇವರು ಯಾವ ರೀತಿಯ ಮ್ಯಾಜಿಕ್ ಮಾಡಲಿದ್ದಾರೆ ಎಂಬ ಕುತೂಹಲ ಕನ್ನಡಿಗರಲ್ಲಿ ಹೆಚ್ಚಾಗಿದೆ. ಸಿನಿಪ್ರಿಯರು ಈ ಹೊಸ ಪ್ರಾಜೆಕ್ಟ್ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಗಳನ್ನುಟ್ಟುಕೊಂಡಿದ್ದಾರೆ. ರೊಮ್ಯಾಂಟಿಕ್ ಹಾಗೂ ಕಾಮಿಡಿ ಶೈಲಿಯಲ್ಲಿ ಸಿನಿಮಾ ಬರಲಿದೆಯಂತೆ.
ನಟ ಕಿಚ್ಚ ಸುದೀಪ್ ಅವರು ವೃತ್ತಿಜೀವನದಲ್ಲಿ ಈಗಾಗಲೇ ಹಲವು ಬ್ಯುಸಿ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮಾರ್ಕ್’ ಸಿನಿಮಾ ಬಳಿಕ ಅವರು ‘ಬಿಲ್ಲ ರಂಗ ಭಾಷಾ’ ಚಿತ್ರದ ಕೆಲಸಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಇದರ ನಡುವೆ ಅವರು ಪ್ರೇಮ್ ಚಿತ್ರದ ಶೂಟ್ ಮಾಡಲಿದ್ದಾರೆ. ಅವರು ಈ ಹೊಸ ಸಿನಿಮಾದ ಪ್ರೋಮೋ ಶೂಟ್‌ನಲ್ಲಿ ಭಾಗಿಯಾಗಿರುವುದು ಅಭಿಮಾನಿಗಳಿಗೆ ಮತ್ತಷ್ಟು ಉತ್ಸಾಹ ತಂದಿದೆ.
ಇದನ್ನೂ ಓದಿ: ಮಂಜ ಒಬ್ಬನನ್ನೆ ಹೊರಗೆ ಕಳಿಸಿದ್ದು ನನಗೆ ಇಷ್ಟ ಆಗ್ಲಿಲ್ಲ: ಸುದೀಪ್
ಪ್ರೇಮ್ ಮತ್ತು ಸುದೀಪ್ ಅವರ ಈ ಹೊಸ ಸಿನಿಮಾದ ಟೈಟಲ್ ಟೀಸರ್ ಶೂಟಿಂಗ್ ಮುಗಿದ ಬಳಿಕ ಚಿತ್ರದ ಕುರಿತಾದ ಹೆಚ್ಚಿನ ಮಾಹಿತಿಗಳು ಹೊರಬೀಳಲಿವೆ. ಈ ದಿಗ್ಗಜರ ಹೊಸ ಮೈತ್ರಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆಗಳನ್ನು ಬರೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇನ್ನು, ಸಿನಿಮಾಗಳ ಚಿತ್ರೀಕರಣ ಹಾಗೂ ಬ್ಯುಸಿ ಶೆಡ್ಯೂಲ್ ನಡುವೆಯೂ ಕಿಚ್ಚ ಸುದೀಪ್ ಅವರು ಎಂದಿನಂತೆ ವೀಕೆಂಡ್‌ನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿ ನಿರೂಪಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.