ನಟ ಕಿಚ್ಚ ಸುದೀಪ್ (Kichcha Sudeep) ಅವರು ‘ವಿಕ್ರಾಂತ್ ರೋಣ’ ರಿಲೀಸ್ ಆದ ಬಳಿಕ ಹಲವು ಕಥೆಗಳನ್ನು ಕೇಳಿದ್ದಾರೆ. ಆ ಪೈಕಿ ‘Kichcha 46’ ಪ್ರಾಜೆಕ್ಟ್ನ ಕೆಲಸಗಳು ಭರದಿಂದ ಸಾಗುತ್ತಿವೆ. ಈಗ ಹೊಸದೊಂದು ಸುದ್ದಿ ಕೇಳಿಬಂದಿದೆ. ನಿರ್ದೇಶಕ ಆರ್. ಚಂದ್ರು (R. Chandru) ಜೊತೆ ಸುದೀಪ್ ಅವರು ಕೈ ಜೋಡಿಸಲಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಬರಲಿದೆ. ಇಂಟರೆಸ್ಟಿಂಗ್ ವಿಚಾರ ಏನೆಂದರೆ, ಈ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ವಿಜಯೇಂದ್ರ ಪ್ರಸಾದ್ (Vijayendra Prasad) ಅವರು ಸಾಥ್ ನೀಡಿದ್ದಾರೆ. ಹಾಗಾಗಿ ಈ ಪ್ರಾಜೆಕ್ಟ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ‘ಆರ್.ಸಿ. ಸ್ಟುಡಿಯೋಸ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ. ಕಿಚ್ಚ ಸುದೀಪ್ ಅವರ ಜನ್ಮದಿನದ ಹೊಸ್ತಿಲಿನಲ್ಲಿ ಈ ಸುದ್ದಿ ಸಿಕ್ಕಿದೆ. ಸೆಪ್ಟೆಂಬರ್ 2ರಂದು ಸುದೀಪ್ ಅವರು ಅಭಿಮಾನಿಗಳ ಜೊತೆ ಸಂಭ್ರಮದಿಂದ ಬರ್ತ್ಡೇ ಆಚರಿಸಿಕೊಳ್ಳಲಿದ್ದಾರೆ.
ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಚಿತ್ರರಂಗದಲ್ಲಿ ಬಹುಬೇಡಿಕೆಯ ಕಥೆಗಾರನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಆರ್. ಚಂದ್ರು ಅವರು ಸ್ಕ್ರಿಪ್ಟ್ ತೋರಿಸಿದ್ದಾರೆ. ಅಲ್ಲದೇ, ಒಂದಷ್ಟು ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಆ ಕಾರಣದಿಂದ ಕಿಚ್ಚ ಸುದೀಪ್ ಮತ್ತು ಆರ್. ಚಂದ್ರು ಕಾಂಬಿನೇಷನ್ನ ಈ ಹೊಸ ಸಿನಿಮಾ ಬಗ್ಗೆ ಹೈಪ್ ಸೃಷ್ಟಿ ಆಗುವಂತಾಗಿದೆ. ಆರ್. ಚಂದ್ರು ನಿರ್ದೇಶಿಸಿದ ‘ಕಬ್ಜ’ ಸಿನಿಮಾದಲ್ಲೂ ಸುದೀಪ್ ಅವರು ಒಂದು ಪಾತ್ರ ಮಾಡಿದ್ದರು. ಈಗ ಅವರಿಬ್ಬರು ಮತ್ತೆ ಒಟ್ಟಾಗಿ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ.
ಇದನ್ನೂ ಓದಿ: ‘ಕಿಚ್ಚನಿಗೆ ಒಂದು ಅಚ್ಚರಿ ಕಾದಿದೆ’: ಸುದೀಪ್ ಬರ್ತ್ಡೇಗೂ ಮುನ್ನ ಸಿಹಿ ಸುದ್ದಿ ನೀಡಿದ ಪತ್ನಿ ಪ್ರಿಯಾ
ಕನ್ನಡ ಚಿತ್ರರಂಗದಲ್ಲಿ ಆರ್. ಚಂದ್ರು ಅವರು ವಿಶೇಷ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಲವ್ಸ್ಟೋರಿ, ಅಂಡರ್ವರ್ಲ್ಡ್.. ಹೀಗೆ ಎಲ್ಲ ಬಗೆಯ ಸಿನಿಮಾಗಳನ್ನು ಅವರು ಮಾಡಿದ್ದಾರೆ. ಅವರ ‘ಕಬ್ಜ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ಆ ಸಿನಿಮಾ ಬಳಿಕ ಚಂದ್ರು ಅವರು ಸುದೀಪ್ ಜೊತೆ ಕೈ ಜೋಡಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಇದನ್ನೂ ಓದಿ: ಆಕಾಶದಲ್ಲಿನ ನಕ್ಷತ್ರಕ್ಕೆ ಕಿಚ್ಚ ಸುದೀಪ್ ಹೆಸರು; ಹುಟ್ಟುಹಬ್ಬದ ಹೊಸ್ತಿಲಲ್ಲಿ ಹೀಗೊಂದು ಗೌರವ
ಸುದೀಪ್ ಅವರ ಸಂಪೂರ್ಣ ಗಮನ ಈಗ ‘Kichcha 46’ ಸಿನಿಮಾದ ಮೇಲಿದೆ. ಆ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಬರ್ತ್ಡೇ ಪ್ರಯುಕ್ತ ಟೈಟಲ್ ರಿವೀಲ್ ಆಗಲಿದೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಹುಟ್ಟುಹಬ್ಬದ ಪ್ರಯುಕ್ತ ಸುದೀಪ್ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ. ಆ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:44 pm, Fri, 1 September 23