
ಕಿಚ್ಚ ಸುದೀಪ್ (Sudeep) ಅವರು ಒಳ್ಳೆಯ ನಟ ಅನ್ನೋದು ಬಹುತೇಕರಿಗೆ ಗೊತ್ತಿದೆ. ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಹೊಸ ಸಿನಿಮಾ ‘ಬಿಲ್ಲ ರಂಗ ಭಾಷ’ ಬಗ್ಗೆ ನಿರೀಕ್ಷೆ ಇದೆ. ಹೀಗಿರುವಾಗಲೇ ಅವರ ಹಳೆಯ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಕಿಚ್ಚ ಸುದೀಪ್ ಹಾಗೂ ರಾಜೇಶ್ ಕೃಷ್ಣನ್ ಹಾಡಿನ ಜುಗಲ್ಬಂದಿ ವಿಡಿಯೋ ಕೂಡ ಒಂದು. ಈ ವಿಡಿಯೋನ ಎಲ್ಲರೂ ಇಷ್ಟಪಟ್ಟಿದ್ದಾರೆ.
ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಅವರು ‘ಸರಿಗಮಪ’ ವೇದಿಕೆ ಮೇಲೆ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸೀಸನ್ನಲ್ಲಿ ಇವರ ಕಾಂಬೋ ಮುಂದುವರಿದಿದೆ. ಈ ಮೊದಲು ಕೂಡ ಈ ಮೂವರು ಇದ್ದರು. ಈ ಮೊದಲು ಸರಿಗಮಪ ವೇದಿಕೆ ಮೇಲೆ ಬಂದಿದ್ದ ಸುದೀಪ್ ಅವರು ಇವರ ಜೊತೆ ಹಾಡಿನ ಜುಗಲ್ ಬಂದಿ ಮಾಡಿದ್ದರು.
ಸುದೀಪ್ ಹಾಗೂ ರಾಜೇಶ್ ಕೃಷ್ಣನ್ ಅವರು ಒಟ್ಟಾಗಿ ಕುಳಿತು, ‘ಇವಳಾ ಮುಗುಳು ನಗೆ..’ ಹಾಡನ್ನು ಹಾಡಿದ್ದರು. ಈ ಹಾಡು ಗಮನ ಸೆಳೆಯಿತು. ಈ ವಿಡಿಯೋ ಈಗ ವೈರಲ್ ಆಗಿದೆ. ಸುದೀಪ್ ಧ್ವನಿಗೆ ಅನೇಕರು ಮಾರು ಹೋಗಿದ್ದರು. ಅವರು ಒಳ್ಳೆಯ ಗಾಯಕರೂ ಹೌದು ಎಂದು ಅನೇಕರು ಒಪ್ಪಿಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲೂ ಸುದೀಪ್ ಅವರು ‘ಸರಿಗಮಪ’ ವೇದಿಕೆ ಮೇಲೆ ಬಂದಿದ್ದರು ಮತ್ತು ಕುಟುಂಬ ಕೂಡ ಆ ಸಂದರ್ಭದಲ್ಲಿ ಹಾಜರಿ ಹಾಕಿತ್ತು. ಈ ವೇಳೆ ಅವರ ಮಗಳು ಅದ್ಭುತವಾಗಿ ಹಾಡು ಹೇಳುವ ಮೂಲಕ ಎಲ್ಲರ ಗಮನ ಸೆಳೆದರು.
ಇದನ್ನೂ ಓದಿ: ಸುದೀಪ್ ಫೀಮೇಲ್ ಫ್ಯಾನ್ಸ್ ನೋಡಿ ಕಂಗಾಲಾಗಿದ್ದ ಪತ್ನಿ ಪ್ರಿಯಾ
ಸುದೀಪ್ ಅವರು ಸದ್ಯ ‘ಬಿಲ್ಲ ರಂಗ ಭಾಷ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ. ‘ಮ್ಯಾಕ್ಸ್’ ಸಿನಿಮಾ ಹಿಟ್ ಆದ ಬಳಿಕ ಸುದೀಪ್ ಒಪ್ಪಿಕೊಂಡ ಮುಂದಿನ ಚಿತ್ರ ಇದು ಎನ್ನುವ ಕಾರಣಕ್ಕೂ ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.