ಸುದೀಪ್ ಬರ್ತ್​ಡೇ: ಮನೆ ಎದುರು ಫ್ಯಾನ್ಸ್ ಸಂಭ್ರಮಾಚರಣೆ ನೋಡಿ ಕೈ ಮುಗಿದು ಧನ್ಯವಾದ ಹೇಳಿದ ಕಿಚ್ಚ

ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಕಿಚ್ಚ ಸುದೀಪ್ ಮನೆ ಇದೆ. ಮಧ್ಯರಾತ್ರಿ ಇಲ್ಲಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳು ಸುದೀಪ್​ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

ಸುದೀಪ್ ಬರ್ತ್​ಡೇ: ಮನೆ ಎದುರು ಫ್ಯಾನ್ಸ್ ಸಂಭ್ರಮಾಚರಣೆ ನೋಡಿ ಕೈ ಮುಗಿದು ಧನ್ಯವಾದ ಹೇಳಿದ ಕಿಚ್ಚ
Edited By:

Updated on: Sep 02, 2022 | 10:40 AM

ಕಿಚ್ಚ ಸುದೀಪ್ (Kichcha Sudeep) ಅವರು ಇಂದು (ಸೆಪ್ಟೆಂಬರ್ 2) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸುದೀಪ್​ಗೆ ನಾನಾ ಕಡೆಗಳಿಂದ ಬರ್ತ್​ಡೇ ವಿಶ್ ಬರುತ್ತಿದೆ. ವಿವಿಧ ಊರುಗಳಲ್ಲಿ ಸುದೀಪ್​ ಫೋಟೋ ಹಾಗೂ ಕಟೌಟ್ ಹಾಕಿ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಸುದೀಪ್ ಹೆಸರಲ್ಲಿ ಒಳ್ಳೆಯ ಕೆಲಸ ನಡೆಯುತ್ತಿದೆ. ಸುದೀಪ್ ಮನೆಯ ಎದುರು ಮಧ್ಯರಾತ್ರಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಫ್ಯಾನ್ಸ್ ಸಂಭ್ರಮ ಮುಗಿಲುಮುಟ್ಟಿತ್ತು. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾಟ ಜೋರಾಗಿತ್ತು. ಈ ಕಾರಣದಿಂದ ಕಿಚ್ಚನ ಬರ್ತ್​ಡೇ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಬರ್ತ್​​ಡೇ ಜೋರಾಗಿದೆ.

ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಕಿಚ್ಚ ಸುದೀಪ್ ಮನೆ ಇದೆ. ಮಧ್ಯರಾತ್ರಿ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳು ಸುದೀಪ್​ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಫ್ಯಾನ್ಸ್​ ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಮನೆಯಿಂದ ಹೊರ ಬಂದು ಅಭಿಮಾನಿಗಳಿಗೆ ಸುದೀಪ್ ಧನ್ಯವಾದ ಹೇಳಿದ್ದಾರೆ. ಅಭಿಮಾನಿಗಳಿಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ ಸುದೀಪ್.

ಇದನ್ನೂ ಓದಿ
ಏಕಾಏಕಿ ಹೊಸ ಪ್ರಾಜೆಕ್ಟ್​ ಘೋಷಿಸಿ, ಸೆ.4ಕ್ಕೆ ಟ್ರೇಲರ್ ರಿಲೀಸ್ ಎಂದ ರಶ್ಮಿಕಾ; ರೋಹಿತ್, ಗಂಗೂಲಿಗೇನು ಕೆಲಸ?
Kichcha Sudeep: ‘ಬಾದ್​​ಶಾ’ ಸುದೀಪ್​ಗೆ ಬರ್ತ್​ಡೇ ಸಂಭ್ರಮ; ಇಷ್ಟು ಯಂಗ್ ಆಗಿ ಕಾಣುವ ಕಿಚ್ಚನಿಗೆ ವಯಸ್ಸೆಷ್ಟು?
ಒಡಿಶಾದ ಬೀಚ್​ನಲ್ಲಿ ಅರಳಿತು ಕಿಚ್ಚ ಸುದೀಪ್​ ಮರಳು ಶಿಲ್ಪ; ಇಲ್ಲಿವೆ ಫೋಟೋಗಳು
ಕಿಚ್ಚ ಸುದೀಪ್ ಬರ್ತ್​​ಡೇಗೆ ಶುರುವಾಯ್ತು ಕೌಂಟ್​ಡೌನ್​; ಶಿವಣ್ಣ ಅನಾವರಣ ಮಾಡಿದ ಕಾಮನ್ ಡಿಪಿ ಹೇಗಿದೆ ನೋಡಿ

ಕಿಚ್ಚ ಸುದೀಪ್ ಅವರು ಹೊರ ಬರುತ್ತಿದ್ದಂತೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ನೆಚ್ಚಿನ ನಾಯಕ ನಟನನ್ನು ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಾಚಣೆ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಎಂಬ ಕಾರಣಕ್ಕೆ ಪೊಲೀಸರು ನಟನ ಮನೆಯ ಬಳಿ ಭಾರೀ ಭದ್ರತೆ ಕೈಗೊಂಡಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಬ್ಯಾರೆಕೇಡ್ ಅಳವಡಿಸಲಾಗಿತ್ತು. ‘ವಿಕ್ರಾಂತ್ ರೋಣ’ ಚಿತ್ರದ ಹಾಡಿಗೆ ಅಭಿಮಾನಿಗಳು ಡ್ಯಾನ್ಸ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸುದೀಪ್​ಗೆ ಬರ್ತ್​ಡೇ ವಿಶ್ ಬರುತ್ತಿದೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸುದೀಪ್​ ಜನ್ಮದಿನಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ. ಸುದೀಪ್ ನಟಿಸುತ್ತಿರುವ ‘ಕಬ್ಜ’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್ ಬರ್ತ್​​ಡೇಗೆ ಶುರುವಾಯ್ತು ಕೌಂಟ್​ಡೌನ್​; ಶಿವಣ್ಣ ಅನಾವರಣ ಮಾಡಿದ ಕಾಮನ್ ಡಿಪಿ ಹೇಗಿದೆ ನೋಡಿ

ಕಿಚ್ಚ ಸುದೀಪ್ ಅವರು ‘ವಿಕ್ರಾಂತ್​ ರೋಣ’ ಚಿತ್ರದ ಬಳಿಕ ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂಬ ಕುತೂಹಲ ಫ್ಯಾನ್ಸ್ ಬಳಿ ಇದೆ. ಅವರ ಮುಂದಿನ ಚಿತ್ರದ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾದು ಕೂತಿದ್ದಾರೆ. ಆ ಬಗ್ಗೆ ಅಪ್​ಡೇಟ್ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಇಂದು ಆ ಬಗ್ಗೆ ಏನಾದರೂ ಹೊಸ ಘೋಷಣೆ ಆಗಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.

Published On - 7:52 am, Fri, 2 September 22