‘ಬೇಕು ಅಂತ ಜಗಳ ಮಾಡ್ತಾರೆ, ಜೋಡಿ ಮಾಡ್ಕೊಂಡು ಹೈಲೈಟ್ ಆಗ್ತಾರೆ’; ಬಿಗ್ ಬಾಸ್ ಹೊಸ ಸೀಸನ್​ಗಳ ಬಗ್ಗೆ ಸುದೀಪ್ ಬೇಸರ

ಬಿಗ್ ಬಾಸ್ ಕನ್ನಡದ ಇತ್ತೀಚಿನ ಸೀಸನ್‌ಗಳಲ್ಲಿ ಸ್ಪರ್ಧಿಗಳು ಜಗಳ ಮತ್ತು ಪ್ರೀತಿ-ಪ್ರೇಮಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದರಿಂದ ಕಿಚ್ಚ ಸುದೀಪ್ ಅವರಿಗೆ ಬೇಸರವಾಗಿದೆ. ಮೊದಲ ಸೀಸನ್‌ನ ಪ್ರಾಮಾಣಿಕತೆ ಮತ್ತು ಮುಗ್ಧತೆ ಇಂದಿನ ಸೀಸನ್‌ಗಳಲ್ಲಿ ಕಾಣೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸ್ಪರ್ಧಿಗಳು ಹಿಂದಿನ ಸೀಸನ್‌ಗಳ ಗೆಲುವು ಸಾಧಿಸಿದವರನ್ನು ಅನುಕರಿಸುತ್ತಿದ್ದಾರೆ ಎಂದಿದ್ದಾರೆ.

‘ಬೇಕು ಅಂತ ಜಗಳ ಮಾಡ್ತಾರೆ, ಜೋಡಿ ಮಾಡ್ಕೊಂಡು ಹೈಲೈಟ್ ಆಗ್ತಾರೆ’; ಬಿಗ್ ಬಾಸ್ ಹೊಸ ಸೀಸನ್​ಗಳ ಬಗ್ಗೆ ಸುದೀಪ್ ಬೇಸರ
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Dec 24, 2024 | 7:31 AM

‘ಬಿಗ್ ಬಾಸ್’ ಸೀಸನ್​ಗಳು ವರ್ಷದಿಂದ ವರ್ಷ ಭಿನ್ನವಾಗಿರುತ್ತವೆ. ಎಲ್ಲಾ ಸೀಸನ್​ಗಳಲ್ಲಿ ಕಾಮನ್ ಇರುವ ವಿಚಾರ ಎಂದರೆ ಜಗಳ, ಪ್ರೀತಿ-ಪ್ರೇಮ ಇತ್ಯಾದಿ. ಅದರಲ್ಲೂ ಇತ್ತೀಚಿನ ಸೀಸನ್​ಗಳಲ್ಲಿ ಜಗಳ ಆಡೋಕೆ, ಪ್ರೀತಿ ಮಾಡೋಕೆ ಸ್ಪರ್ಧಿಗಳು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಅವರಿಗೆ ಬೇಸರ ಇದೆ. ಇದನ್ನು ಅವರು ಓಪನ್ ಆಗಿ ಹೇಳಿಕೊಂಡಿದ್ದಾರೆ. ಅವರು ಈ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾಲೆನ್​ಗೆ ನೀಡಿದ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ. ಅನುಶ್ರೀ ಅವರು ‘ಬಿಗ್ ಬಾಸ್’ ಮೊದಲ ಸೀಸನ್​ನ ಸ್ಪರ್ಧಿ ಆಗಿದ್ದರು. ಆಗಿನ ಸೀಸನ್​ಗಳಿಗೂ ಈಗಿನ ಸೀಸನ್​ಗಳಿಗೂ ಏನು ವ್ಯತ್ಯಾಸ ಎಂದು ಕೇಳಲಾಯಿತು. ಇದಕ್ಕೆ ಸುದೀಪ್ ಅವರು ನೇರ ಮಾತುಗಳಲ್ಲಿ ಉತ್ತರಿಸಿದ್ದಾರೆ. ತಮಗೆ ಅನಿಸಿದ್ದನ್ನು ಅವರು ವಿವರಿಸಿದ್ದಾರೆ.

‘ಮೊದಲ ಸೀಸನ್​ನಲ್ಲಿ ಪ್ರಾಮಾಣಿಕತೆ ಹಾಗೂ ಮುಗ್ಧತೆ ಇತ್ತು. ಏಕೆಂದರೆ ಬಿಗ್ ಬಾಸ್ ಎಂದರೆ ಏನು ಅಂತ ನಿಮಗೆ ಗೊತ್ತಿರಲಿಲ್ಲ. ಬಂದ್ರಿ ಆಡದ್ರಿ, ಹೋದ್ರಿ ಅಷ್ಟೇ. ಮೊದಲ ಸೀಸನ್ ನೋಡಿ ಎರಡನೇ ಸೀಸನ್ ಬೇರೆ ರೀತಿ ಇತ್ತು. ಎರಡನೇ ಸೀಸನ್ ನೋಡಿ ಮೂರನೇ ಸೀಸನ್ ಬೇರೆ ರೀತಿ ಆಯ್ತು. ಈಗ ಬರುವ ಸೀಸನ್​ಗಳಲ್ಲಿ ಸ್ಪರ್ಧಿಗಳು ವೇದಿಕೆ ಏರಿದಾಗ ನಾನು ನಾನಾಗಿರುತ್ತೇನೆ ಎಂದು ಹೇಳುತ್ತಾರೆ. ಆದರೆ, ಯಾರೋ ಜಗಳ ಮಾಡಿ ಗೆದ್ದಿರೋ ಸ್ಪರ್ಧಿನ ನೋಡಿ ಕಾಪಿ ಮಾಡ್ತಾರೆ. ಜೋಡಿ ಹುಡುಕಿದ್ರೆ ಬದುಕೋಕಾದು ಎಂದುಕೊಳ್ಳುತ್ತಾರೆ’ ಎಂದು ಸುದೀಪ್ ಹೇಳಿದ್ದಾರೆ.

ಇದನ್ನೂ ಓದಿ: ‘ನನಗೆ ಬಿಗ್ ಬಾಸ್ ಸರಿಯಲ್ಲ, ತಪ್ಪು ನಿರ್ಧಾರ ಮಾಡಿದೆ’: ಚೈತ್ರಾ ಕುಂದಾಪುರ ವಿಷಾದ

‘ಅರುಣ್ ಸಾಗರ್ ಅವರು ಸಾಕಷ್ಟು ಡ್ರಾಮಾಗಳನ್ನು ಮಾಡಿದರು. ಅವರು ಹೆಸರು ಗಳಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರೇಕ್ಷಕರು ಅಂದುಕೊಂಡರು. ಆದರೆ, ಅವರು ಇರೋದೆ ಹಾಗೆ. ಅವರ ಕೆಲಸನೇ ತರಲೆ ಮಾಡೋದು. ಎಲ್ಲರ ಮಾನ ಮರ್ಯಾದೆ ತೆಗೆಯೋದೆ ಅವನ ಕೆಲಸ. ಅವನು ಕೆಟ್ಟವನಲ್ಲ. ಅವನು ಮಾಡಿದಾಗ ಅದರಲ್ಲಿ ಫನ್ ಇರುತ್ತದೆ. ಒಂದೇ ರೀತಿಯ ವ್ಯಕ್ತಿತ್ವ ಬಿಗ್ ಬಾಸ್ ಗೆಲ್ಲಲ್ಲ. ಪ್ರತಿ ಬಾರಿಯೂ ಬೇರೆ ರೀತಿಯವರೇ ಗೆಲ್ಲುವವರು. ಈಗಿನ ಸ್ಪರ್ಧಿಗಳು ಜನರಲೈಸ್ ಮಾಡುತ್ತಿದ್ದಾರೆ’ ಎಂದು ಸುದೀಪ್ ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.