
ಕಿಚ್ಚ ಸುದೀಪ್ (Sudeep) ಅವರು ಕಳೆದ ಹಲವು ವರ್ಷಗಳಿಂದ ಬಿಗ್ ಬಾಸ್ ನಡೆಸಿಕೊಡುತ್ತಾ ಬರುತ್ತಿದ್ದಾರೆ. ಈಗಾಗಲೇ 11 ಸೀಸನ್ ಪೂರ್ಣಗೊಂಡಿದ್ದು, 12ನೇ ಸೀಸನ್ ನಡೆಯುತ್ತಿದೆ. ಅವರು ಒಮ್ಮೆ ವೇದಿಕೆ ಏರಿದರೆ ಮುಗಿಯಿತು, ಯಾರ ಪರವಾಗಿಯೂ ಬ್ಯಾಟ್ ಬೀಸೋದಿಲ್ಲ. ಅವರು ಎಷ್ಟೇ ಆಪ್ತರಾಗಿದ್ದರೂ ತಪ್ಪು ಮಾಡಿದಾಗ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಈಗ ಸುದೀಪ್ ಎದುರು ‘ಗಿಲ್ಲಿ ಗೆಲ್ಲಬೇಕು’ ಎನ್ನುವ ಘೋಷಣೆ ಕೂಗಲಾಗಿದೆ.
ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಯಿತು. ಈ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವು ದಿನ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಅವರು ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಅವರ ಎದುರು ‘ಗಿಲ್ಲಿ ಗೆಲ್ಲಬೇಕು’ ಎನ್ನುವ ಬೇಡಿಕೆ ಬಂದಿದೆ.
ಸುದೀಪ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಎಲ್ಲರೂ ಕಿಚ್ಚನ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಇದ್ದರು. ಅಲ್ಲೋರ್ವ ‘ಅಣ್ಣ ಗಿಲ್ಲಿ ಗೆಲ್ಲಬೇಕು’ ಎಂದು ಕೂಗಿದ್ದಾನೆ. ಇದು ಕಿಚ್ಚನಿಗೂ ಕೇಳಿಸಿದೆ. ಕೇಳಿದರೂ ಅವರು ಕೇಳಿಸಿದಂತೆ ಇದ್ದಾರೆ. ಫಿನಾಲೆಗೆ ಕೆಲವೇ ವಾರ ಬಾಕಿದೆ. ಹೀಗಿರುವಾಗ ಅವರು ಇದಕ್ಕೆ ರಿಯಾಕ್ಟ್ ಮಾಡಿದರೆ ಬೇರೆಯದೇ ಅರ್ಥ ಪಡೆದುಕೊಳ್ಳುತ್ತದೆ. ಹೀಗಾಗಿ, ಸುದೀಪ್ ಈ ವಿಷಯದಲ್ಲಿ ಮೌನ ಕಾಪಾಡಿಕೊಂಡಿದ್ದಾರೆ.
ಈ ಬಾರಿ ಬಿಗ್ ಬಾಸ್ನಲ್ಲಿ ಗಿಲ್ಲಿ ಹೆಚ್ಚು ಹೈಲೈಟ್ ಆಗಿ ಕಾಣಿಸುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಸುದೀಪ್ ಅವರು ಈ ಮೊದಲು ವಿವರಿಸಿದ್ದರು. ‘ಗಿಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ, ಇಲ್ಲ ಎಂದು ಹೇಳಲ್ಲ. ಆದರೆ, ಉಳಿದ ಯಾರೊಬ್ಬರೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಒಬ್ಬರು ಹೈಲೈಟ್ ಆಗುತ್ತಿದ್ದಾರೆ’ ಎಂದಿದ್ದರು ಸುದೀಪ್.
ಇದನ್ನೂ ಓದಿ: ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
‘ಮಾರ್ಕ್’ ಸಿನಿಮಾ ಒಂದು ವಾರಕ್ಕೆ ಒಳ್ಳೆಯ ಗಳಿಕೆ ಮಾಡಿದೆ. ಚಿತ್ರದ ಕಲೆಕ್ಷನ್ 50 ಕೋಟಿ ರೂಪಾಯಿಯತ್ತ ಸಾಗುತ್ತಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.