AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆಯಿಂದಲೇ ‘ಫಾದರ್’ ಸಿನಿಮಾದ ಥೀಮ್ ವಿಡಿಯೋ ಬಿಡುಗಡೆ ಮಾಡಿಸಿದ ಆರ್. ಚಂದ್ರು

ನಿರ್ದೇಶಕ ಆರ್. ಚಂದ್ರು ನಿರ್ಮಾಪಕನಾಗಿಯೂ ಸಕ್ರಿಯವಾಗಿದ್ದಾರೆ. ಅವರ ನಿರ್ಮಾಣದಲ್ಲಿ ‘ಫಾದರ್’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದ ಥೀಮ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ತಂದೆಯಿಂದಲೇ ಆರ್​. ಚಂದ್ರ ಇದನ್ನು ಬಿಡುಗಡೆ ಮಾಡಿಸಿದ್ದಾರೆ. ‘ಫಾದರ್’ ಸಿನಿಮಾದಲ್ಲಿ ಪ್ರಕಾಶ್ ರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ತಂದೆ-ಮಗನ ಪಾತ್ರಗಳನ್ನು ಮಾಡಿದ್ದಾರೆ.

ತಂದೆಯಿಂದಲೇ ‘ಫಾದರ್’ ಸಿನಿಮಾದ ಥೀಮ್ ವಿಡಿಯೋ ಬಿಡುಗಡೆ ಮಾಡಿಸಿದ ಆರ್. ಚಂದ್ರು
Father Movie Team
ಮದನ್​ ಕುಮಾರ್​
|

Updated on: Dec 31, 2025 | 5:18 PM

Share

‘ಆರ್‌.ಸಿ. ಸ್ಟುಡಿಯೋಸ್‌’ ಮೂಲಕ ‘ಫಾದರ್’ ಸಿನಿಮಾ (Father Movie) ನಿರ್ಮಾಣ ಆಗುತ್ತಿದೆ. ಆರ್. ಚಂದ್ರು ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಬಿಡುಗಡೆಗೆ ಈ ಚಿತ್ರ ಸಿದ್ಧವಾಗಿದೆ. ಈಗ ‘ಫಾದರ್’ ಸಿನಿಮಾದ ಥೀಮ್ ವಿಡಿಯೋ ರಿಲೀಸ್ ಮಾಡಲಾಗಿದೆ. ಸಿನಿಮಾದ ಕಥಾವಸ್ತುವಿಗೆ ತಕ್ಕಂತೆಯೇ ಚಂದ್ರು (R, Chandru) ಅವರು ತಂದೆ ರಾಮಣ್ಣ ಅವರಿಂದಲೇ ಈ ಸಿನಿಮಾದ ಥೀಮ್ ವಿಡಿಯೋ ಬಿಡುಗಡೆ ಮಾಡಿಸಿದರು. ಈ ಚಿತ್ರದಲ್ಲಿ ಪ್ರಕಾಶ್ ರಾಜ್, ಡಾರ್ಲಿಂಗ್ ಕೃಷ್ಣ (Darling Krishna), ಅಮೃತಾ ಅಯ್ಯಂಗಾರ್ ಮುಂತಾದವರು ನಟಿಸಿದ್ದಾರೆ.

ನಿರ್ದೇಶಕ ರಾಜ್‌ ಮೋಹನ್‌ ಅವರು ‘ಫಾದರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇದೊಂದು ಎಮೋಷನಲ್ ಸಿನಿಮಾ ಆಗಿರಲಿದೆ. ಅಪ್ಪ-ಮಗನ ಬಾಂಧವ್ಯದ ಕಥೆ ಈ ಚಿತ್ರದಲ್ಲಿ ಇರಲಿದೆ. ‘ಟಗರು ಪಲ್ಯ’ ಖ್ಯಾತಿಯ ನಾಗಭೂಷಣ ಅವರು ಕೂಡ ಈ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದಾರೆ.

ಮೈಸೂರು, ಧರ್ಮಸ್ಥಳ, ಮಂಗಳೂರು, ಬೆಂಗಳೂರು ಮತ್ತು ವಾರಾಣಸಿಯಲ್ಲಿ ‘ಫಾದರ್’ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ಸುಜ್ಞಾನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ನಕುಲ್‌ ಅಭ್ಯಂಕರ್ ಅವರು ಸಂಗೀತ ನೀಡಿದ್ದಾರೆ. ‘ಎಲ್ಲರಿಗೂ ಒಳ್ಳೆಯದಾಗಲಿ. ಫಾದರ್ ಸಿನಿಮಾ ಚೆನ್ನಾಗಿ ಹಿಟ್ ಆಗಲಿ. ಎಲ್ಲ ಭಾಷೆಯ ಜನರು ಇದನ್ನು ನೋಡಲಿ. ಕಥೆ ಚೆನ್ನಾಗಿದೆ’ ಎಂದು ಆರ್. ಚಂದ್ರು ತಂದೆ ರಾಮಣ್ಣ ಅವರು ಹೇಳಿದರು.

‘ಫಾದರ್’ ಚಿತ್ರದ ಥೀಮ್ ವಿಡಿಯೋ:

ಈ ವೇಳೆ ಡಾರ್ಲಿಂಗ್ ಕೃಷ್ಣ ಅವರು ಮಾತನಾಡಿದರು. ‘ಈ ರೀತಿಯ ಕಥೆ ಬಹಳ ಅಪರೂಪ. ಒಮ್ಮೆ ಕೇಳಿದ ತಕ್ಷಣ ವಾವ್ ಎನಿಸಿತು. ತಂದೆ-ಮಗನ ಎಮೋಷನ್ ಮೀರಿದ ಹಲವು ಅಂಶಗಳು ಈ ಚಿತ್ರದಲ್ಲಿ ಇವೆ. ಇದನ್ನು ನಾನು ಮಾಡಬಹುದಾ ಅಂತ ಭಯ ಆಗಿತ್ತು. ಕ್ಲೈಮ್ಯಾಕ್ಸ್​​ನಲ್ಲಿ ಆ ರೀತಿಯ ಅಂಶಗಳು ಇವೆ. ಈ ರೀತಿಯ ಕಥೆಯನ್ನು ನಾನು ಎಲ್ಲಿಯೂ ಕೇಳಿಲ್ಲ. ನಿರ್ದೇಶಕರು ಇಂತಹ ಒಂದು ಒಳ್ಳೆಯ ಕಥೆಯನ್ನು ಬರೆದಿದ್ದಕ್ಕೆ ಧನ್ಯವಾದಗಳು’ ಎಂದು ಡಾರ್ಲಿಂಗ್ ಕೃಷ್ಣ ಹೇಳಿದರು.

ಇದನ್ನೂ ಓದಿ: ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್

ಆರ್. ಚಂದ್ರ ಕೂಡ ಈ ವೇಳೆ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡರು. ‘ಸದಭಿರುಚಿಯ ಸಿನಿಮಾಗಳನ್ನು ಜನರು ಇಷ್ಟಪಟ್ಟು ನೋಡುತ್ತಾರೆ. ಎಲ್ಲರಿಗೂ ತಂದೆಯ ಮಹತ್ವನ್ನು ಥೀಮ್ ವಿಡಿಯೋದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಸಾಕಷ್ಟು ವಿಷಯ ಇದೆ. ನಿರ್ದೇಶಕ ರಾಜ್ ಮೋಹನ್ ಅವರು ತುಂಬ ಚೆನ್ನಾಗಿ ಕಥೆ ಬರೆದಿದ್ದಾರೆ. ಅವರು ಒಂದು ಲೈನ್ ಹೇಳಿದಾಗಲೇ ನನಗೆ ಇಷ್ಟ ಆಗಿತ್ತು’ ಎಂದು ಆರ್​. ಚಂದ್ರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.