ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಬಗ್ಗೆ ಸಿಗುತ್ತಿದೆ ಬಿಗ್ ಅಪ್ಡೇಟ್; ಜುಲೈ 16ಕ್ಕೆ ಟೀಸರ್
ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾಗೆ ಸಾಕಷ್ಟು ಸಮಯ ನೀಡಿದ್ದಾರೆ. ಈ ಚಿತ್ರ ಸಖತ್ ಅದ್ದೂರಿಯಾಗಿ ಮೂಡಿಬರುತ್ತಿದೆ. ಈಗಾಗಲೇ ಬಂದಿರುವ ಪ್ರೋಮೋ, ಟೀಸರ್ನಿಂದ ಕ್ರೇಜ್ ಹೆಚ್ಚಿದೆ. ಈಗ ಮತ್ತೊಂದು ಟೀಸರ್ ಬಿಡುಗಡೆಗೆ ಸಮಯ ನಿಗದಿ ಆಗಿದೆ. ಜು.16ಕ್ಕೆ ‘ಮ್ಯಾಕ್ಸ್’ ಸಿನಿಮಾದ ಹೊಸ ಟೀಸರ್ ಬರಲಿದ್ದು, ಅದರಲ್ಲಿ ಚಿತ್ರದ ರಿಲೀಸ್ ದಿನಾಂಕ ಅನೌನ್ಸ್ ಆಗುವ ನಿರೀಕ್ಷೆ ಇದೆ.
ನಟ ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಭಾರಿ ಬಜೆಟ್ನಲ್ಲಿ ಈ ಸಿನಿಮಾ ಮೂಡಿಬಂದಿದೆ. ಕಾರಣಾಂತರಗಳಿಂದ ಈ ಚಿತ್ರದ ಕೆಲಸಗಳು ತಡ ಆದವು. ಆದಷ್ಟು ಬೇಗ ‘ಮ್ಯಾಕ್ಸ್’ ಚಿತ್ರವನ್ನು ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಈಗ ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಬಗ್ಗೆ ಸುದೀಪ್ ಅವರು ಹೊಸ ಅಪ್ಡೇಟ್ ನೀಡಿದ್ದಾರೆ. ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಅವರು ಡಬಲ್ ಮಾಡಿದ್ದಾರೆ. ಜುಲೈ 16ರಂದು ಮಧ್ಯಾಹ್ನ 12.34ಕ್ಕೆ ‘ಮ್ಯಾಕ್ಸ್’ ಹೊಸ ಟೀಸರ್ ಬಿಡುಗಡೆ ಆಗಲಿದೆ.
ಕಾಲಿವುಡ್ ನಿರ್ಮಾಪಕ ಕಲೈಪುಲಿ ಎಸ್. ಧಾನು ಅವರು ‘ಮ್ಯಾಕ್ಸ್’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಿಜಯ್ ಕಾರ್ತಿಕೇಯ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಸಿನಿಮಾಗೆ ಬಹುತೇಕ ಶೂಟಿಂಗ್ ನಡೆಯಿತು. ಚಿತ್ರೀಕರಣ ಮುಗಿದ ನಂತರ ಸುದೀಪ್ ಅವರು ಆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈಗ ಹೊಸ ಟೀಸರ್ ನೋಡುವ ಸಮಯ ಹತ್ತಿರವಾಗಿದೆ.
ಇದನ್ನೂ ಓದಿ: ಚಿತ್ರರಂಗದಿಂದ ದರ್ಶನ್ ಬ್ಯಾನ್ ಆಗಬೇಕಾ? ಕಿಚ್ಚ ಸುದೀಪ್ ಹೇಳಿದ್ದಿಷ್ಟು..
ಕಳೆದ ವರ್ಷ ಕಿಚ್ಚ ಸುದೀಪ್ ಅವರ ಜನ್ಮದಿನಕ್ಕೆ ಇಂಟರೆಸ್ಟಿಂಗ್ ಟೀಸರ್ ಅನಾವರಣ ಮಾಡಲಾಗಿತ್ತು. ಅದಕ್ಕೂ ಮುನ್ನ ಬಿಡುಗಡೆ ಆಗಿದ್ದ ಪ್ರೋಮೋ ಕೂಡ ಸಖತ್ ಸದ್ದು ಮಾಡಿತ್ತು. ಇಷ್ಟೆಲ್ಲ ಕಾತರ ಮೂಡಿಸಿರುವ ಈ ಸಿನಿಮಾದಲ್ಲಿ ಸುದೀಪ್ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 16ಕ್ಕೆ ಬರಲಿರುವ ಟೀಸರ್ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.
View this post on Instagram
ಇದು ಸುದೀಪ್ ನಟನೆಯ 46ನೇ ಸಿನಿಮಾ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುವಾಗ ‘ಮ್ಯಾಕ್ಸ್’ ರಿಲೀಸ್ ಬಗ್ಗೆ ಸುದೀಪ್ ಅವರು ಸೂಚನೆ ನೀಡಿದ್ದರು. ಆಗಸ್ಟ್ ವೇಳೆಗೆ ಈ ಸಿನಿಮಾ ರಿಲೀಸ್ ಆಗಬಹುದು ಎಂದು ಅವರು ಹೇಳಿದ್ದರು. ಜು.16ರಂದು ಬರಲಿರುವ ಟೀಸರ್ನಲ್ಲಿ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಬಹಿರಂಗ ಆಗುವ ಸಾಧ್ಯತೆ ದಟ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.