‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ಸದ್ಯ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ಈಗಾಗಲೇ ಮೂರು ಹಾಡುಗಳು ರಿಲೀಸ್ ಆಗಿವೆ. ಈಗ ಈ ಚಿತ್ರದ ನಾಲ್ಕನೇ ಸಾಂಗ್ ರಿಲೀಸ್ ಆಗಿದೆ. ‘ಗುಮ್ಮಾ ಬಂದ ಗುಮ್ಮಾ..’ ಲಿರಿಕಲ್ ಸಾಂಗ್ (Gumma Banda Gumma Lyrical Video) ಇಂದು (ಜುಲೈ 21) ಬೆಳಗ್ಗೆ 11 ಗಂಟೆಗೆ ಬಿಡುಗಡೆ ಆಗಿದೆ. ನಟ ಸುದೀಪ್, ನಿರ್ದೇಶಕ ಅನೂಪ್ ಭಂಡಾರಿ ಅವರು ಈ ಹಾಡನ್ನು ಶೇರ್ ಮಾಡಿಕೊಂಡಿದ್ದಾರೆ.
‘ವಿಕ್ರಾಂತ್ ರೋಣ’ ಚಿತ್ರತಂಡ ಮೊಟ್ಟ ಮೊದಲ ಬಾರಿಗೆ ರಿಲೀಸ್ ಮಾಡಿದ ಸಾಂಗ್ ‘ರಾ ರಾ ರಕ್ಕಮ್ಮ..’. ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಲಿರಿಕಲ್ ಸಾಂಗ್ ಸೂಪರ್ ಹಿಟ್ ಆಯಿತು. ಇದರ ಸಿಗ್ನೇಚರ್ ಸ್ಟೆಪ್ ಸಖತ್ ವೈರಲ್ ಆಗಿದೆ. ಇದಾದ ಬಳಿಕ ‘ರಾಜಕುಮಾರಿ..’ ಹೆಸರಿನ ಮೆಲೋಡಿ ಸಾಂಗ್ ಬಿಡುಗಡೆ ಮಾಡಲಾಯಿತು. ನಂತರ ರಿಲೀಸ್ ಆಗಿದ್ದು ‘ಹೇ ಫಕೀರಾ..’ ಹಾಡು. ನಿರೂಪ್ ಭಂಡಾರಿ ಪಾತ್ರವನ್ನು ಈ ಹಾಡು ಪರಿಚಯಿಸಿದೆ. ಈಗ ‘ಗುಮ್ಮಾ ಬಂದ ಗುಮ್ಮಾ..’ ಹಾಡು ಬಿಡುಗಡೆಗೆ ಆಗಿ ಗಮನ ಸೆಳೆಯುತ್ತಿದೆ.
‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರು ನೀಡಿರುವ ಹಾಡುಗಳು ಸಾಕಷ್ಟು ಗಮನ ಸೆಳೆದಿವೆ. ಸಾಂಗ್ಗಳಿಂದ ಚಿತ್ರದ ಮೈಲೇಜ್ ಹೆಚ್ಚಿದ ಸಾಕಷ್ಟು ಉದಾಹರಣೆ ಇದೆ. ಈಗ ಹಾಡುಗಳ ಮೂಲಕ ‘ವಿಕ್ರಾಂತ್ ರೋಣ’ ಸಾಕಷ್ಟು ಗಮನ ಸೆಳೆಯುತ್ತಿದೆ.
The theme of #VR
THE DEVIL’S FURY – Gumma Banda Gumma – https://t.co/6fApOCAQZ7#VRonJuly28 @KicchaSudeep @JackManjunath @AJANEESHB @SingerHarshikaD @deepakmuziblue @ramjowrites #palanibharathi #santhoshvarma @TSeries @LahariMusic #VikrantRona #VRin3D
— Anup Bhandari (@anupsbhandari) July 21, 2022
‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಜಾಕ್ ಮಂಜು ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಹೀಗಾಗಿ, ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 3ಡಿ ಅವತರಣಿಕೆಯಲ್ಲಿ ಸಿನಿಮಾ ಹೇಗೆ ಮೂಡಿ ಬಂದಿದೆ ಎಂಬ ಕುತೂಹಲ ಫ್ಯಾನ್ಸ್ಗಳದ್ದು.
ಕ್ಷಮೆ ಕೇಳಿದ ಸುದೀಪ್
ಸುದೀಪ್ ಅವರಿಗೆ ಅನಾರೋಗ್ಯ ಕಾಡಿದೆ. ಮಳೆಯಲ್ಲಿ ನೆನೆದ ಕಾರಣ ಅವರಿಗೆ ಜ್ವರ ಬಂದಿದೆ. ಹೀಗಾಗಿ, ಅವರು ಕೆಲ ರಾಜ್ಯಗಳಿಗೆ ಪ್ರಚಾರಕ್ಕೆ ತೆರಳಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಪರ ರಾಜ್ಯದ ಮಾಧ್ಯಮ ಮಿತ್ರರ ಬಳಿ ಸುದೀಪ್ ಕ್ಷಮೆ ಕೇಳಿದ್ದಾರೆ. ಜುಲೈ 22ರಿಂದ ಮತ್ತೆ ಅವರು ಪ್ರಚಾರ ಕಾರ್ಯದಲ್ಲಿ ಭಾಗಿ ಆಗಲಿದ್ದಾರೆ.
Apologies to all my media frnzz frm Chennai,Kochi & Hydarabad, for having canceled the press meet & event. I have Been Unwell. Feeling much better & shall resume travel again. IHoping to Reschedule to a sooner date.
Looking forward to meeting u all.
?
Love & Regards,
Kichcha❤️— Kichcha Sudeepa (@KicchaSudeep) July 21, 2022
ಸುದೀಪ್ ಮಾಡಿದ ಟ್ವೀಟ್..