ಸೆಟ್ಟೇರಿತು ಕಿಚ್ಚ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷ’; BRB ಫಸ್ಟ್ ಲುಕ್ ರಿವೀಲ್

BRB First Blood: ಕಿಚ್ಚ ಸುದೀಪ್ ಮತ್ತು ಅನುಪ್ ಭಂಡಾರಿ ಅವರ "ಬಿಲ್ಲ ರಂಗ ಬಾಷ" ಚಿತ್ರದ ಚಿತ್ರೀಕರಣ ಏಪ್ರಿಲ್ 16 ರಿಂದ ಆರಂಭವಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಇದರಲ್ಲಿ ಸುದೀಪ್ ಅವರ ಅದ್ಭುತ ನೋಟ ಗಮನ ಸೆಳೆಯುತ್ತದೆ. ಈ ಚಿತ್ರವು ದೊಡ್ಡ ಬಜೆಟ್‌ನೊಂದಿಗೆ ಕನ್ನಡ, ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸೆಟ್ಟೇರಿತು ಕಿಚ್ಚ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷ’; BRB ಫಸ್ಟ್ ಲುಕ್ ರಿವೀಲ್
ಸುದೀಪ್

Updated on: Apr 16, 2025 | 9:47 AM

ಕಿಚ್ಚ ಸುದೀಪ್ (Kichcha Sudeep) ಹಾಗೂ ಅನುಪ್ ಭಂಡಾರಿ ಅವರ ‘ಬಿಲ್ಲ ರಂಗ ಭಾಷ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸಿನಿಮಾ ಕಾರಣಾಂತರಗಳಿಂದ ವಿಳಂಬ ಆಗುತ್ತಲೇ ಇತ್ತು. ಈಗ ಸೆಟ್ ಹಾಕುವ ಕೆಲಸ ಪೂರ್ಣಗೊಂಡಿದ್ದು, ಇಂದಿನಿಂದ (ಏಪ್ರಿಲ್ 16) ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸುದೀಪ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸುದೀಪ್ ಅವರ ಲುಕ್ ಇಲ್ಲಿ ಗಮನ ಸೆಳೆದಿದೆ.

ಕಿಚ್ಚ ಸುದೀಪ್ ನಿರ್ದೇಶಕ  ಅನುಪ್ ಭಂಡಾರಿ ಜೊತೆ ಸೇರಿ ‘ಬಿಲ್ಲ ರಂಗ ಬಾಷ’ ಸಿನಿಮಾ ಮಾಡುತ್ತೇನೆ ಎಂದು ಈ ಮೊದಲೇ ಘೋಷಿಸಿದ್ದರು. ಬಜೆಟ್​ನ ಕಾರಣಕ್ಕೆ ‘ವಿಕ್ರಾಂತ್ ರೋಣ’ ಚಿತ್ರವನ್ನು ಮೊದಲು ಕೈಗೆತ್ತಿಕೊಳ್ಳಲಾಯಿತು. ಈಗ ಸುದೀಪ್ ಹಾಗೂ ನಿರ್ದೇಶಕ ಅನುಪ್ ಭಂಡಾರಿ ಅವರು ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ.

ಇದನ್ನೂ ಓದಿ
ಸುಧಾರಾಣಿಗೆ ಶಿವಣ್ಣ ಪ್ರೀತಿಯಿಂದ ಕರೆಯೋದೇನು? ಕೊನೆಗೂ ರಿವೀಲ್ ಆಯ್ತು
‘ಕೊನೆ ಉಸಿರಿನವರೆಗೂ ಐಶ್ವರ್ಯಾ ಪರವಾಗಿ ಹೋರಾಡುತ್ತೇನೆ’; ಅಮಿತಾಭ್
ರಶ್ಮಿಕಾ ಸಸ್ಯಾಹಾರಿಯೋ, ಮಾಂಸಹಾರಿಯೋ? ಈ ತರಕಾರಿ ಕಂಡರೆ ಆಗುವುದೇ ಇಲ್ಲ
ಸೋತ ಅಜಿತ್ ಚಿತ್ರಕ್ಕೆ ಶಾಕ್ ಕೊಟ್ಟ ಇಳಯರಾಜ; 5 ಕೋಟಿಗೆ ಡಿಮ್ಯಾಂಡ್

ಸುದೀಪ್ ಅವರ ಫಸ್ಟ್ ಲುಕ್ ಗಮನ ಸೆಳೆದಿದೆ. ಹಿಮ ಬೀಳುವ ಪ್ರದೇಶದಲ್ಲಿ ಸುದೀಪ್ ನಿಂತಿದ್ದಾರೆ. ಅವರ ಮೈಮೇಲೆ ನೀರಿನ ಹನಿ ಇದೆ. ಅವರು ಕನ್ನಡಕದ ರೀತಿಯ ವಸ್ತುವನ್ನು ಹಣೆಮೇಲೆ ಇಟ್ಟುಕೊಂಡಿದ್ದಾರೆ. ಕನ್ನಡಕದ ಮೇಲಿನ ಪ್ರತಿಬಿಂಬದಲ್ಲಿ ಕಟ್ಟವೊಂದಕ್ಕೆ ಬೆಂಕಿ ಬಿದ್ದಿರುವುದು ಕಂಡಿದೆ. ಸುದೀಪ್ ಹಿಂಭಾಗದಲ್ಲಿ ಕಟ್ಟವೊಂದು ಇದೆ. ಈ ಪೋಸ್ಟರ್​ ಮೂಲಕ ಏನನ್ನು ತಂಡ ಹೇಳಲು ಹೊರಟಿದೆ ಎಂಬ ಕುತೂಹಲ ಮೂಡಿದೆ.

ಈ ಮೊದಲು ‘ಬಿಆರ್​ಬಿ’ ಸಿನಿಮಾ ಬಗ್ಗೆ ಅಪ್​ಡೇಟ್ ಕೊಟ್ಟಿದ್ದ ಸುದೀಪ್ ಅವರು, ‘ಇದು ನನ್ನ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ. ಬಜೆಟ್ ಹಾಗೂ ಸಿನಿಮಾ ಮೇಕಿಂಗ್ ಎರಡೂ ವಿಚಾರದಲ್ಲೂ ಇದು ದೊಡ್ಡದೇ’ ಎಂದಿದ್ದರು. ಈ ಮೂಲಕ ಚಿತ್ರದ ಬಜೆಟ್ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಇದನ್ನೂ ಓದಿ: ದರ್ಶನ್, ಉಪೇಂದ್ರ, ಸುದೀಪ್​ಗೆ ನನ್ನ ನೆನಪಿಲ್ಲ; ಬೇಸರ ಹೊರಹಾಕಿದ್ದ ಬ್ಯಾಂಕ್ ಜನಾರ್ಧನ್

ಸುದೀಪ್ ಅವರ ‘ಮ್ಯಾಕ್ಸ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಗೆದ್ದ ಖುಷಿಯಲ್ಲಿ ಅವರು ‘ಬಿಆರ್​ಬಿ’ ಆರಂಭಿಸಿದ್ದಾರೆ. ಈ ಚಿತ್ರಕ್ಕೆ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾ ನಿರ್ಮಾಣದ ವಿಚಾರದಲ್ಲಿ ಇವರು ರಾಜಿ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ, ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:46 am, Wed, 16 April 25