Kotigobba 3: ಕೋಟಿಗೊಬ್ಬ 3 ಮಾರ್ನಿಂಗ್ ಫ್ಯಾನ್ಸ್ ಶೋ ಕ್ಯಾನ್ಸಲ್, ಚಿತ್ರ ಮಂದಿರಗಳ ಮುಂದೆ ಅಭಿಮಾನಿಗಳ ಆಕ್ರೋಶ
ಮುಂಜಾನೇ 7 ಗಂಟೆಗಿದ್ದ ಫ್ಯಾನ್ಸ್ ಶೋ ಕ್ಯಾನ್ಸಲ್ ಆಗಿದೆ. ಇದರಿಂದ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಸಿನಿಮಾ ಮಂದಿರಗಳ ಮುಂದೆ ಡಿಸ್ಟ್ರಿಬ್ಯೂಟರ್ಸ್ಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು: ದಸರಾ ಸಂಭ್ರಮ ಹೆಚ್ಚಿಸಲು ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್(Kiccha Ssudeep) ಅಭಿನಯದ ಕೋಟಿಗೊಬ್ಬ 3(Kotigobba 3) ಇಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಆದ್ರೆ ಮುಂಜಾನೇ 7 ಗಂಟೆಗಿದ್ದ ಫ್ಯಾನ್ಸ್ ಶೋ ಕ್ಯಾನ್ಸಲ್ ಆಗಿದೆ. ಇದರಿಂದ ಕಿಚ್ಚನ ಅಭಿಮಾನಿಗಳು(Sudeep Fans) ರೊಚ್ಚಿಗೆದ್ದಿದ್ದಾರೆ. ಸಿನಿಮಾ ಮಂದಿರಗಳ ಮುಂದೆ ಡಿಸ್ಟ್ರಿಬ್ಯೂಟರ್ಸ್ಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಶುರುವಾಗ ಬೇಕಿದ್ದ ಶೋ ಕ್ಯಾನ್ಸಲ್ ಆಗಿದ್ದು ಇಂದು 10 ಘಂಟೆ ನಂತರ ಫಸ್ಟ್ ಶೂ ಆರಂಭವಾಗಲಿದೆ.
ಅಕ್ಟೋಬರ್ 14ರ(ಇಂದು) ಮುಂಜಾನೆ ಅಭಿಮಾನಿಗಳಿಗಾಗಿ ಏರ್ಪಡಿಸಿದ್ದ ವಿಷೇಶ ಪ್ರದರ್ಶನ ನೋಡಲು ಕಿಚ್ಚನ ಅಭಿಮಾನಿಗಳು ಚಿತ್ರ ಮಂದಿರಗಳ ಮುಂದೆ ನೆರೆದಿದ್ದು ಥಿಯೇಟರ್ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. 7 ಗಂಟೆ ಆಗುತ್ತಿದ್ದಂತೆ ಕೋಟಿಗೊಬ್ಬ 3 ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ಆದ್ರೆ ತಾಂತ್ರಿಕ ಕಾರಣಗಳಿಂದಾಗಿ ಮಾರ್ನಿಂಗ್ ಶೋ ಕ್ಯಾನ್ಸಲ್ ಆಗಿದೆ. ಶೋ ಕ್ಯಾನ್ಸಲ್ ಮಾಡಿರುವುದಾಗಿ ಚಿತ್ರಮಂದಿರದ ಆಡಳಿತ ಮಂಡಳಿ ಮಂದಿರಗಳ ಮುಂದೆ ಬೋರ್ಡ್ ಹಾಕಿದೆ. ಆನ್ ಲೈನ್ ಮೂಲಕ ಅಮೌಂಟ್ ರೀಫಂಡ್ ಮಾಡುವುದಾಗಿ ತಿಳಿಸಿದೆ. ನೆಚ್ಚಿನ ನಟನ ಸಿನಿಮಾ ನೋಡದೆ ಬೇಸರದಿಂದ ಅಭಿಮಾನಿಗಳು ಆಚೆ ನಿಂತಿದ್ದು ಕೆಲ ಅಭಿಮಾನಿಗಳು ಡಿಸ್ಟ್ರಿಬ್ಯೂಟರ್ಸ್ಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಮಾಗಡಿ ರಸ್ತೆಯ ಪ್ರಸನ್ನ, ಅವಳ ಹಳ್ಳಿಯ ವೆಂಕಟೇಶ್ವರ ಥಿಯೇಟರ್ ಸೇರಿದಂತೆ ಬೆಂಗಳೂರಿನ ಹಲವು ಚಿತ್ರ ಮಂದಿರಗಳಲ್ಲಿ ಅಭಿಮಾನಿಗಳಿಗಾಗಿ ಆಯೋಜನೆಗೊಂಡಿದ್ದ ಮಾರ್ನಿಂಗ್ ಶೋ ರದ್ದಾಗಿದೆ. 300ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಕೋಟಿಗೊಬ್ಬ 3 ರಿಲೀಸ್ ಆಗ್ತಿದೆ. ಮಾರ್ನಿಂಗ್ ಶೋ ರದ್ದಾದ ಹಿನ್ನೆಲೆಯಲ್ಲಿ 10 ಗಂಟೆಯ ಶೋಗಾಗಿ ಅಭಿಮಾನಿಗಳು ಕಾಯುತ್ತ ಚಿತ್ರ ಮಂದಿರಗಳ ಮುಂದೆ ನಿಂತಿದ್ದಾರೆ.
ಕೋಟಿಗೊಬ್ಬ 3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಕೆರಳಿದ ಅಭಿಮಾನಿಗಳು ಕೋಟಿಗೊಬ್ಬ 3 ಸಿನಿಮಾ ಬೆಳಗ್ಗೆ ಶೋ ರದ್ದಾಗಿದ್ದರ ಕುರಿತು, ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಸೂರಪ್ಪ ಬಾಬುಗೆ ಅಭಿಮಾನಿಗಳು ವಾರ್ನಿಂಗ್ ಮಾಡಿದ್ದು, ಸ್ಟಾರ್ ಸಿನಿಮಾ ಮಾಡಿ ಹೀಗೆ ಮಾಡಿದ್ರೆ ಅವರೆಂಥ ನಿರ್ಮಾಪಕರು ಎಂದು ಕಿಡಿಕಾರಿದ್ಧಾರೆ. ವಿಷ್ಣುವರ್ಧನ್ ಅವರಿಗೂ ಸೂರಪ್ಪ ಬಾಬು ಹೀಗೆಯೇ ತೊಂದರೆ ಕೊಟ್ಟಿದ್ದರು ಎಂದು ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ‘ಕೋಟಿಗೊಬ್ಬ 3’ ಮತ್ತು ದುನಿಯಾ ವಿಜಯ್ ‘ಸಲಗ’ ನೋಡೋಕೆ ಇಲ್ಲಿವೆ ಕಾರಣ
Published On - 7:02 am, Thu, 14 October 21