ಸಿನಿಪ್ರಿಯರಿಗೆ ಹಬ್ಬ; ಈ ವಾರ ರಿಲೀಸ್ ಆಗ್ತಿರೋ ಸಿನಿಮಾಗಳ ಸಂಖ್ಯೆ ಕೇಳಿದ್ರೆ ಅಚ್ಚರಿ ಗ್ಯಾರಂಟಿ

|

Updated on: Aug 14, 2024 | 12:50 PM

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ 8 ನಾಯಕಿಯರು ಇದ್ದಾರೆ ಎನ್ನಲಾಗಿದೆ. ಆ ಬಗ್ಗೆ ಪೋಸ್ಟರ್​ನಲ್ಲಿ ಮಾಹಿತಿ ನೀಡಲಾಗಿದೆ. ಗಣೇಶ್ ಅವರಿಗೆ ಒಂದು ದೊಡ್ಡ ಮಟ್ಟದ ಯಶಸ್ಸಿನ ಅಗತ್ಯತೆ ಇದೆ. ಈ ಚಿತ್ರದ ಮೂಲಕ ಅವರು ಇದನ್ನು ನಿರೀಕ್ಷೆ ಮಾಡುತ್ತಿದ್ದಾರೆ.

ಸಿನಿಪ್ರಿಯರಿಗೆ ಹಬ್ಬ; ಈ ವಾರ ರಿಲೀಸ್ ಆಗ್ತಿರೋ ಸಿನಿಮಾಗಳ ಸಂಖ್ಯೆ ಕೇಳಿದ್ರೆ ಅಚ್ಚರಿ ಗ್ಯಾರಂಟಿ
ಈ ವಾರದ ಸಿನಿಮಾಗಳು
Follow us on

ವಿಶೇಷ ದಿನಗಳಲ್ಲಿ ಸಿನಿಮಾಗಳನ್ನು ರಿಲೀಸ್ ಮಾಡಲು ಫ್ಯಾನ್ಸ್ ಕಾದಿರುತ್ತಾರೆ. ಅದೇ ರೀತಿ ಆಗಸ್ಟ್ 15ಕ್ಕೆ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕನ್ನಡ, ಹಿಂದಿ ಭಾಷೆಗಳಲ್ಲಿ ಹಲವು ಸಿನಿಮಾಗಳು ಬಿಡುಗಡೆ ಕಾಣುತ್ತಿವೆ. ಇವುಗಳ ಜೊತೆಗೆ ಮತ್ತೊಂದಷ್ಟು ಚಿತ್ರಗಳು ರಿಲೀಸ್ ಆಗಲಿವೆ. ಕನ್ನಡದಲ್ಲಿ ಕಳೆದ ವಾರ ಕೆಲವು ಸಿನಿಮಾಗಳು ಬಿಡುಗಡೆ ಆಗಿದ್ದು, ಈ ಚಿತ್ರಗಳ ಜೊತೆ ಸ್ಪರ್ಧೆಗೆ ಇಳಿಯುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕೃಷ್ಣಂ ಪ್ರಣಯ ಸಖಿ

ಕಲಾವಿದರು: ಗಣೇಶ್, ಮಾಳವಿಕಾ ನಾಯರ್, ಶರಣ್ಯಾ ಶೆಟ್ಟಿ, ಶಶಿಕುಮಾರ್, ರಂಗಾಯಣ ರಘು ಹಾಗೂ ಇತರರು.

ನಿರ್ದೇಶನ: ಶ್ರೀನಿವಾಸ ರಾಜು.

ನಿರ್ಮಾಣ: ಪ್ರಶಾಂತ್ ಜಿ ರುದ್ರಪ್ಪ.

ಸಂಗೀತ ಸಂಯೋಜನೆ: ಅರ್ಜುನ್ ಜನ್ಯ

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ 8 ನಾಯಕಿಯರು ಇದ್ದಾರೆ ಎನ್ನಲಾಗಿದೆ. ಆ ಬಗ್ಗೆ ಪೋಸ್ಟರ್​ನಲ್ಲಿ ಮಾಹಿತಿ ನೀಡಲಾಗಿದೆ. ಗಣೇಶ್ ಅವರಿಗೆ ಒಂದು ದೊಡ್ಡ ಮಟ್ಟದ ಯಶಸ್ಸಿನ ಅಗತ್ಯತೆ ಇದೆ. ಈ ಚಿತ್ರದ ಮೂಲಕ ಅವರು ಇದನ್ನು ನಿರೀಕ್ಷೆ ಮಾಡುತ್ತಿದ್ದಾರೆ.

ವಿಶೇಷತೆ: ಕೃಷ್ಣಂ ಪ್ರಣಯ ಸಖಿ ಸಿನಿಮಾದ ‘ದ್ವಾಪರ..’ ಹಾಡು ಗಮನ ಸೆಳೆಯಿತು. ಈ ಚಿತ್ರದ ಹಾಡುಗಳು ಮೆಚ್ಚುಗೆ ಪಡೆದವು. ಈ ಕಾರಣಕ್ಕೆ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿಲ್ಲ. ಹಾಡಿನ ಮೂಲಕವೇ ಸಿನಿಮಾ ಬಗ್ಗೆ ನಿರೀಕ್ಷೆ ಮೂಡುವಂತೆ ಆಗಿದೆ.

ಗೌರಿ

ಕಲಾವಿದರು: ಸಮರ್ಜಿತ್ ಲಂಕೇಶ್, ಸಾನ್ಯಾ ಐಯ್ಯರ್, ರಾಜೀವ್ ಪಿಳ್ಳೈ, ಪ್ರಿಯಾಂಕಾ ಉಪೇಂದ್ರ, ಅಕುಲ್ ಬಾಲಾಜಿ.

ನಿರ್ದೇಶನ, ನಿರ್ಮಾಣ: ಇಂದ್ರಜಿತ್ ಲಂಕೇಶ್

ಇಂದ್ರಜಿತ್ ಲಂಕೇಶ್ ಅವರು ನಿರ್ದೇಶನ ಮಾಡುತ್ತಿರುವ ‘ಗೌರಿ’ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅವರಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಹಲವು ವಿಶೇಷತೆಗಳು ಇವೆ. ಈ ಚಿತ್ರದ ಮೂಲಕ ಇಂದ್ರಜಿತ್ ಮಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಹಿರಿತೆರೆಯಲ್ಲಿ ಸಾನ್ಯಾ ಅಯ್ಯರ್​ಗೆ ಇದು ಮೊದಲ ಅನುಭವ. ಇಂದ್ರಜಿತ್ ಅವರು ತಮ್ಮ ಸಹೋದರಿ ಗೌರಿ ಹೆಸರನ್ನೇ ಈ ಚಿತ್ರಕ್ಕೆ ಇಟ್ಟಿರೋದು ಮತ್ತೊಂದು ವಿಶೇಷ.

ಭೀಮ ಚಿತ್ರ

ಕಳೆದ ವಾರ ರಿಲೀಸ್ ಆದ ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಗಮನ ಸೆಳೆಯುತ್ತಿದೆ. ಈಗಾಗಲೇ ಚಿತ್ರಮಂದಿರದಲ್ಲಿ ಭೀಮ ಸಿನಿಮಾ ತನ್ನನ್ನು ತಾನು ಸಾಬೀತು ಮಾಡಿಕೊಂಡಿದೆ. ಹೀಗಾಗಿ, ಈ ವಾರ ರಿಲೀಸ್ ಆಗಲಿರುವ ಸಿನಿಮಾಗಳ ಜೊತೆ ಈ ಚಿತ್ರ ಸ್ಪರ್ಧೆ ಮಾಡಲಿದೆ.

ಇದನ್ನೂ ಓದಿ: ‘ಮಗನಿಗೆ ಇಂದಲ್ಲ ನಾಳೆ ಯಶಸ್ಸು ಸಿಗುತ್ತದೆ’; ಇಂದ್ರಜಿತ್ ಲಂಕೇಶ್ ಭರವಸೆ

ಪರಭಾಷೆ..

ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ತಮಿಳಿನಲ್ಲಿ ವಿಕ್ರಮ್ ನಟನೆಯ ‘ತಂಗಳಾನ್’ ರಿಲೀಸ್ ಆಗುತ್ತಿದೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’, ಶ್ರದ್ಧಾ ಕಪೂರ್ ಹಾಗೂ ರಾಜ್​ಕುಮಾರ್ ರಾವ್ ನಟನೆಯ ‘ಸ್ತ್ರೀ 2’, ಜಾನ್ ಅಬ್ರಹಾಂ ನಟನೆಯ ‘ವೇದಾ’ ಸಿನಿಮಾಗಳು ಬಿಡುಗಡೆ ಕಾಣುತ್ತಿವೆ. ತೆಲುಗಿನಲ್ಲಿ ರಾಮ್ ಪೋತಿನೇನಿ ನಟನೆಯ ‘ಡಬಲ್ ಇಸ್ಮಾರ್ಟ್’ ಹಾಗೂ ರವಿತೇಜಾ ನಟನೆಯ ‘ಮಿಸ್ಟರ್ ಬಚ್ಚನ್- ದಿ ಓನ್ಲಿ ಹೋಪ್’ ಸಿನಿಮಾಗಳು ಸ್ಪರ್ಧೆಗೆ ಇಳಿಯಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.