‘ಲವ್​ ಮಾಕ್ಟೇಲ್​ 3’ ಕೂಡ ಬರುತ್ತಾ? ಗೆದ್ದ ಖುಷಿಯಲ್ಲಿ ಡಾರ್ಲಿಂಗ್​ ಕೃಷ್ಣ ನೀಡಿದ ಉತ್ತರ ಇಲ್ಲಿದೆ..

ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಜೋಡಿಗೆ ‘ಲವ್​ ಮಾಕ್ಟೇಲ್​ 2’ ಸಿನಿಮಾದಿಂದ ಗೆಲವು ಸಿಕ್ಕಿದೆ. ಎಲ್ಲ ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

‘ಲವ್​ ಮಾಕ್ಟೇಲ್​ 3’ ಕೂಡ ಬರುತ್ತಾ? ಗೆದ್ದ ಖುಷಿಯಲ್ಲಿ ಡಾರ್ಲಿಂಗ್​ ಕೃಷ್ಣ ನೀಡಿದ ಉತ್ತರ ಇಲ್ಲಿದೆ..
ಡಾರ್ಲಿಂಗ್ ಕೃಷ್ಣ
Edited By:

Updated on: Feb 12, 2022 | 9:42 AM

ಡಾರ್ಲಿಂಗ್​ ಕೃಷ್ಣ (Darling Krishna) ಅವರು ನಿರ್ದೇಶನದಲ್ಲಿ ಎರಡನೇ ಬಾರಿಯೂ ಗೆದ್ದಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದ ‘ಲವ್​ ಮಾಕ್ಟೇಲ್​ 2’ (Love Mocktail 2) ಸಿನಿಮಾ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಫೆ.11ರಂದು ಈ ಚಿತ್ರ ಬಿಡುಗಡೆ ಆಗಿದೆ. ಒಂದು ದಿನ ಮೊದಲೇ, ಅಂದರೆ ಫೆ.10ರ ರಾತ್ರಿ ನಡೆದ ಪೇಯ್ಡ್​ ಪ್ರೀಮಿಯರ್​ ಕೂಡ ಹೌಸ್​ ಆಗಿದ್ದು ಕೃಷ್ಣ ಸಂತಸಕ್ಕೆ ಕಾರಣ ಆಗಿದೆ. ಮಿಲನಾ ನಾಗರಾಜ್​ ಅವರು ಕೂಡ ಈ ಸಿನಿಮಾದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ‘ಲವ್​ ಮಾಕ್ಟೇಲ್​ 3’ (Love Mocktail 3) ಕೂಡ ಬರುತ್ತಾ ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡಿದೆ. ಅದಕ್ಕೆ ಕೃಷ್ಣ ಉತ್ತರಿಸಿದ್ದಾರೆ. ‘ನಿರ್ದೇಶಕನಾಗಿ ನನಗೆ ಜವಾಬ್ದಾರಿ ಜಾಸ್ತಿ ಆಗಿದೆ. ‘ಲವ್​ ಮಾಕ್ಟೇಲ್​ 3’ ಬರುತ್ತೆ ಅಂತ ಜನರೇ ಹೇಳುತ್ತಿದ್ದಾರೆ. ಯಾಕೆಂದರೆ ‘ಲವ್ ಮಾಕ್ಟೇಲ್​ 2’ ಚಿತ್ರದ ಕ್ಲೈಮ್ಯಾಕ್ಸ್​ ಆ ರೀತಿ ಇದೆ. ಅದರ ಬಗ್ಗೆಯೂ ಯೋಚನೆ ಮಾಡುತ್ತಿದ್ದೇನೆ. ಇನ್ನೂ ಕಥೆ ಮುಂದುವರಿಸಲು ಸಾಕಷ್ಟು ವಿಷಯಗಳ ಇವೆ. ಸದ್ಯಕ್ಕೆ ‘ಪಾರ್ಟ್​ 2’ ರಿಲೀಸ್ ಆಗಿದೆ. ಅದನ್ನು ಜನರು ಎಷ್ಟರಮಟ್ಟಿಗೆ ಒಪ್ಪಿಕೊಳ್ಳುತ್ತಾರೆ ಎಂಬುದರ ಮೇಲೆ ಮುಂದಿನದ್ದನ್ನು ನಿರ್ಧಾರ ಮಾಡುತ್ತೇನೆ’ ಎಂದು ಡಾರ್ಲಿಂಗ್​ ಕೃಷ್ಣ ಹೇಳಿದ್ದಾರೆ.

ಈ ಕುರಿತು ಮಿಲನಾ ನಾಗರಾಜ್​ ಕೂಡ ಮಾತನಾಡಿದ್ದಾರೆ. ‘ನನ್ನ ತಲೆಯಲ್ಲಿ ‘ಲವ್​ ಮಾಕ್ಟೇಲ್​ 3’ ಬಗ್ಗೆ ಆಲೋಚನೆ ಇಲ್ಲ. ಕೃಷ್ಣ ಅದರ ಸ್ಕ್ರಿಪ್ಟ್​ ಬರೆಯಲು ಶುರುಮಾಡಿದರೆ ನೋಡಬೇಕು. ಈಗ ‘ಲವ್​ ಮಾಕ್ಟೇಲ್​ 2’ ನೋಡಿದ ಅಭಿಮಾನಿಗಳು ‘ಪಾರ್ಟ್​ 3’ ಮಾಡಿ ಅಂತ ಬೇಡಿಕೆ ಇಡುತ್ತಿದ್ದಾರೆ. ಏನು ಮಾಡಬೇಕು ಎಂಬುದು ಕೃಷ್ಣ ಅವರ ನಿರ್ಧಾರಕ್ಕೆ ಬಿಟ್ಟಿದ್ದು. ಕೃಷ್ಣ ಅವರ ನಿರ್ದೇಶನ ಮತ್ತು ನನ್ನ ನಿರ್ಮಾಣದಲ್ಲಿ ಒಂದು ಹೊಂದಾಣಿಕೆ ಸಾಧ್ಯವಾಗಿದೆ. ಹಾಗಾಗಿ ಬೇರೆಯವರ ಚಿತ್ರವನ್ನು ನಿರ್ಮಾಣ ಮಾಡಲು ಧೈರ್ಯ ಬರುವುದಿಲ್ಲ. ಕೃಷ್ಣ ಅವರ ಜೊತೆಯಲ್ಲೇ ಮುಂದಿನ ಸಿನಿಮಾ ನಿರ್ಮಾಣ ಮಾಡುತ್ತೇನೆ’ ಎಂದು ಮಿಲನಾ ನಾಗರಾಜ್​ ಹೇಳಿದ್ದಾರೆ.

‘ಲವ್​ ಮಾಕ್ಟೇಲ್​ 2’ ಸಿನಿಮಾದ ಹಾಡುಗಳಿಗೆ ನಕುಲ್​ ಅಭ್ಯಂಕರ್​ ಸಂಗೀತ ನೀಡಿದ್ದಾರೆ. ಮಿಲನಾ ನಾಗರಾಜ್​ ಮತ್ತು ಡಾರ್ಲಿಂಗ್​ ಕೃಷ್ಣ ಜೊತೆಯಲ್ಲಿ ರೇಚಲ್​ ಡೇವಿಡ್​, ರಚನಾ ಇಂದರ್​, ಖುಷಿ, ಅಭಿಲಾಷ್​, ಸುಷ್ಮಿತಾ ಗೌಡ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ:

Love Mocktail 2 Review: ಮತ್ತಷ್ಟು ಲವ್​, ಮತ್ತಷ್ಟು ರಂಜನೆ, ಮತ್ತೆ ಮಿಲನಾ; ಅಂತ್ಯವಾಗಿದ್ದ ಕಥೆಗೆ ಸಿಕ್ಕಿದೆ ಹೊಸ ಆದಿ

‘ಲವ್​ ಮಾಕ್ಟೇಲ್​ 2’ ನಟಿ ಸುಷ್ಮಿತಾ ಮದುವೆ; ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಂಕಿ