ರುಕ್ಮಿಣಿ ವಸಂತ್ ಎಷ್ಟು ಚೆನ್ನಾಗಿ ಹಾಡು ಹೇಳ್ತಾರೆ ನೋಡಿ; ನೀವು ಫಿದಾ ಆಗೋದು ಪಕ್ಕಾ

Rukmini Vasanth Singing Video: ರುಕ್ಮಿಣಿ ವಸಂತ್ ಅವರು ಕನ್ನಡ ಚಲನಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿದ್ದಾರೆ. ‘ಮದರಾಸಿ’ ಚಿತ್ರದಲ್ಲಿ ಅವರು ನಟಿಸುತ್ತಾ ಇದ್ದಾರೆ. ಅವರು ಓರ್ವ ಗಾಯಕಿಯೂ ಹೌದು. ಇತ್ತೀಚೆಗೆ ಅವರ ಹಾಡುಗಳು ವೈರಲ್ ಆಗುತ್ತಿವೆ, ಅವರ ಗಾಯನ ಪ್ರತಿಭೆಯನ್ನು ಬಹಿರಂಗಪಡಿಸುತ್ತಿವೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ರುಕ್ಮಿಣಿ ವಸಂತ್ ಎಷ್ಟು ಚೆನ್ನಾಗಿ ಹಾಡು ಹೇಳ್ತಾರೆ ನೋಡಿ; ನೀವು ಫಿದಾ ಆಗೋದು ಪಕ್ಕಾ
ರುಕ್ಮಿಣಿ

Updated on: Aug 30, 2025 | 12:02 PM

ನಟಿ ರುಕ್ಮಿಣಿ ವಸಂತ್ (Rukmini Vasanth) ಒಳ್ಳೆಯ ನಟಿ ಅನ್ನೋದು ಎಲ್ಲರಿಗೂ ಗೊತ್ತು. ಅವರು ನಟನೆಯ ಮೂಲಕ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಆದರೆ, ಅವರು ಒಳ್ಳೆಯ ಸಿಂಗರ್ ಅನ್ನೋ ವಿಚಾರ ನಿಮಗೆ ಗೊತ್ತೇ? ಈ ವಿಷಯ ಅನೇಕರಿಗೆ ತಿಳಿದೇ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಹೊಸ ಪೋಸ್ಟ್ ಒಂದು ವೈರಲ್ ಆಗಿದೆ. ಇದರಲ್ಲಿ ರುಕ್ಮಿಣಿ ಅವರು ಸುಮಧುರವಾಗಿ ಹಾಡಿದ್ದಾರೆ. ಅವರ ಹಾಡು ಎಲ್ಲರ ಗಮನ ಸೆಳೆದಿದೆ.

ರುಕ್ಮಿಣಿ ವಸಂತ್ ಅವರು ‘ಮದರಾಸಿ’ ಹೆಸರಿನ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಮಾಲತಿ ಹೆಸರಿನ ಪಾತ್ರ. ಈ ಚಿತ್ರಕ್ಕೆ ಶಿವಕಾರ್ತಿಕೇಯ ಹೀರೋ. ಶಿವಕಾರ್ತಿಕೇಯ ಅವರು ಈಗಾಗಲೇ ಕಾಲಿವುಡ್​ನಲ್ಲಿ ಸಾಕಷ್ಟು ಗುರುತಿಸಿಕೊಳ್ಳುತ್ತಿದ್ದಾರೆ. ಅವರ ಜೊತೆ ನಟಿಸೋ ಅವಕಾಶ ರುಕ್ಮಿಣಿಗೆ ಸಿಕ್ಕಿದೆ. ಇದಕ್ಕಾಗಿ ರುಕ್ಮಿಣಿ ವಿವಿಧ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಹಾಡುಗಳನ್ನು ಕೂಡ ಹಾಡುತ್ತಿದ್ದಾರೆ.

ಇದನ್ನೂ ಓದಿ
ಗರ್ಲ್​ಫ್ರೆಂಡ್​ಗೆ ಮನೆ ಕೊಟ್ಟು ಬಾಡಿಗೆ ಪಡೆದ ಹೃತಿಕ್ ರೋಷನ್
ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ರಾಜ್ ಬಿ. ಶೆಟ್ಟಿ; ಕಾರಣ ಏನು?
ಧೂಳೆಬ್ಬಿಸಿದ ರಾಜ್ ಹಂಚಿಕೆ ಮಾಡ್ತಿರೋ ‘ಲೋಕಃ’ ಸಿನಿಮಾ; 9.5 ರೇಟಿಂಗ್
Bigg Boss ಟೈಟಲ್​ನಲ್ಲಿ ಹೆಚ್ಚುವರಿ G ಏಕೆ? ಸಂಖ್ಯಾಶಾಸ್ತ್ರದ ಲೆಕ್ಕಾಚಾರ

ರುಕ್ಮಿಣಿ ವಸಂತ್ ಹಾಡು

ರುಕ್ಮಿಣಿ ವಸಂತ್ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ‘ಕಡಲನು..’ ಹಾಡು ಸಾಕಷ್ಟು ಗಮನ ಸೆಳೆದಿತ್ತು. ಈ ಹಾಡನ್ನು ರುಕ್ಮಿಣಿ ಹಾಡಿದ್ದಾರೆ. ಈ ಹಾಡು ಎಲ್ಲರ ಗಮನ ಸೆಳೆದಿದೆ. ‘ರುಕ್ಮಿಣಿ ಧ್ವನಿ ಇಷ್ಟು ಮಧರುವಾಗಿದೆ ಎಂದು ನನಗೆ ಗೊತ್ತೇ ಇರಲಿಲ್ಲ’ ಎಂದು ಅನೇಕರು ಹೇಳಿದ್ದಾರೆ. ಅವರು ಇಂಗ್ಲಿಷ್ ಹಾಡನ್ನು ಕೂಡ ಹಾಡಿದ್ದು ಅದು ಗಮನ ಸೆಳೆದಿದೆ.

ಇದನ್ನೂ ಓದಿ: ಚೆನ್ನೈನಲ್ಲಿ ಮಿಂಚು ಹರಿಸಿದ ನಟಿ ರುಕ್ಮಿಣಿ ವಸಂತ್, ಅಂದಕ್ಕೆ ಸಾಟಿಯಾರು?

ರುಕ್ಮಿಣಿ ವಸಂತ್ ಅವರು ‘ಬೀರ್ಬಲ್’ ಹೆಸರಿನ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಈ ಚಿತ್ರ 2019ರಲ್ಲಿ ರಿಲೀಸ್ ಆಯಿತು. 2023ರಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಪ್ರಿಯಾ ಹೆಸರಿನ ಪಾತ್ರ ಮಾಡಿದರು. ಅಲ್ಲಿಂದ ಅವರ ಲಕ್ ಬದಲಾಯಿತು. ಸದ್ಯ ಅವರಿಗೆ ಪರಭಾಷೆಯಿಂದ ಹೆಚ್ಚು ಆಫರ್​ಗಳು ಬರುತ್ತಿವೆ. ರಿಷಬ್ ನಟನೆಯ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಅವರು ನಾಯಕಿ. ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.