AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಮುಹೂರ್ತ: ಬಿಗ್​ಬಾಸ್ ಗೌತಮಿ ಜಾಧವ್ ಬೆಳ್ಳಿ ತೆರೆಗೆ ರೀ ಎಂಟ್ರಿ

Gouthamii Jadav movie: ಬಿಗ್​ಬಾಸ್​​ನಿಂದ ಹೊರಬಂದವರು, ಬಿಗ್​​ಬಾಸ್​​ನಲ್ಲಿ ದೊರೆತ ಜನಪ್ರಿಯತೆಯನ್ನು ಬಳಸಿಕೊಂಡು, ಅದನ್ನು ಉಳಿಸಿಕೊಂಡು ಹೋಗಲು ಬೇರೆ ಬೇರೆ ಪ್ರಾಜೆಕ್ಟ್​ಗಳಿಗೆ ಕೈ ಹಾಕುತ್ತಾರೆ. ಸದಾ ಟ್ರೆಂಡಿಂಗ್​​ನಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಆದರೆ ಬಿಗ್​ಬಾಸ್​​ನಿಂದ ಬಂದ ಬಳಿಕ ಗೌತಮಿ ಜಾಧವ್ ಯಾವುದೇ ಹೊಸ ಘೋಷಣೆಗಳನ್ನು ಮಾಡಿರಲಿಲ್ಲ. ಇದೀಗ ಗೌತಮಿಯವರು ಏಕಾ-ಏಕಿ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ಸಿನಿಮಾ ಮುಹೂರ್ತ: ಬಿಗ್​ಬಾಸ್ ಗೌತಮಿ ಜಾಧವ್ ಬೆಳ್ಳಿ ತೆರೆಗೆ ರೀ ಎಂಟ್ರಿ
Gawthami Jadhav
ಮಂಜುನಾಥ ಸಿ.
|

Updated on: Aug 30, 2025 | 3:05 PM

Share

ಗೌತಮಿ ಜಾಧವ್ ಎಂದೊಡನೆ ‘ಸತ್ಯ’ ಧಾರಾವಾಹಿ ನೆನಪಾಗುತ್ತದೆ. ‘ಸತ್ಯ’ ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು. ಆ ಧಾರಾವಾಹಿ ಅವರಿಗೆ ದೊಡ್ಡ ಹೆಸರು ಗಳಿಸಿಕೊಟ್ಟಿತು. ‘ಸತ್ಯ’ ಮಾತ್ರವಲ್ಲದೆ ಇನ್ನೂ ಕೆಲ ಧಾರಾವಾಹಿಗಳಲ್ಲಿ ಗೌತಮಿ ನಟಿಸಿದ್ದರೂ ಸಹ ಅವರಿಗೆ ದೊಡ್ಡ ಹೆಸರು ಗಳಿಸಿಕೊಟ್ಟಿದ್ದು ಮಾತ್ರ ‘ಸತ್ಯ’ ಧಾರಾವಾಹಿಯೇ. ಕಳೆದ ಬಿಗ್​ಬಾಸ್ ಸೀಸನ್​​ನಲ್ಲಿಯೂ ಸಹ ಗೌತಮಿ ಜಾಧವ್ ಭಾಗವಹಿಸಿದ್ದರು. ಹಲವು ವಾರಗಳ ಕಾಲ ಮನೆಯಲ್ಲಿದ್ದ ಅವರು ಆಟದಿಂದ ಗಮನ ಸೆಳೆದರು.

ಗೌತಮಿ ಜಾಧವ್ ಒಳ್ಳೆಯ ನಟಿ. ಈ ಹಿಂದೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಅವರಿಗೆ ಸಿನಿಮಾಗಳಲ್ಲಿ ದೊಡ್ಡ ಯಶಸ್ಸು ಧಕ್ಕಿಲ್ಲ. ವಿಶೇಷವೆಂದರೆ ಒಂದು ತಮಿಳು ಸಿನಿಮಾನಲ್ಲಿಯೂ ಸಹ ಗೌತಮಿ ಜಾಧವ್ ನಟಿಸಿದ್ದಾರೆ ಆದರೆ ನಿರೀಕ್ಷಿತ ಗೆಲುವು ಅವರಿಗೆ ಧಕ್ಕಿಲ್ಲ. ಇದೀಗ ಗೌತಮಿ ಜಾಧವ್ ಮತ್ತೆ ದೊಡ್ಡ ಪರದೆಗೆ ರೀ ಎಂಟ್ರಿ ನೀಡಿದ್ದಾರೆ. ಅವರ ಹೊಸ ಸಿನಿಮಾದ ಮುಹೂರ್ತ ಇದೀಗ ನೆರವೇರಿದೆ.

ಬಿಗ್​ಬಾಸ್​​ನಿಂದ ಹೊರಬಂದವರು, ಬಿಗ್​​ಬಾಸ್​​ನಲ್ಲಿ ದೊರೆತ ಜನಪ್ರಿಯತೆಯನ್ನು ಬಳಸಿಕೊಂಡು, ಅದನ್ನು ಉಳಿಸಿಕೊಂಡು ಹೋಗಲು ಬೇರೆ ಬೇರೆ ಪ್ರಾಜೆಕ್ಟ್​ಗಳಿಗೆ ಕೈ ಹಾಕುತ್ತಾರೆ. ಸದಾ ಟ್ರೆಂಡಿಂಗ್​​ನಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಆದರೆ ಬಿಗ್​ಬಾಸ್​​ನಿಂದ ಬಂದ ಬಳಿಕ ಗೌತಮಿ ಜಾಧವ್ ಯಾವುದೇ ಹೊಸ ಘೋಷಣೆಗಳನ್ನು ಮಾಡಿರಲಿಲ್ಲ. ಇದೀಗ ಗೌತಮಿಯವರು ಏಕಾ-ಏಕಿ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:ಹೊಸ ಸಿನಿಮಾ ಘೋಷಣೆ ಮಾಡಿದ ನಟಿ ಗೌತಮಿ ಜಾಧವ್ 

ಗೌತಮಿ ನಟಿಸುತ್ತಿರುವ ಸಿನಿಮಾದ ಹೆಸರು ‘ಮಂಗಳಾಪುರಂ’. ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಗೌತಮಿ, ‘ಆಸ್ತಿಕರ ನಾಡಿಗೆ ನಾಸ್ತಿಕ‌ನ ಮಡದಿ ಸುಕನ್ಯಾಳಾಗಿ ಬರುತ್ತಿದ್ದೇನೆ.. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದಿದ್ದರು. ‘ಮಂಗಳಾಪುರಂ’ ಸಿನಿಮಾದ ತಮ್ಮ ಕ್ಯಾರೆಕ್ಟರ್ ಪೋಸ್ಟರ್ ಅನ್ನು ಸಹ ನಟಿ ಗೌತಮಿ ಹಂಚಿಕೊಂಡಿದ್ದರು. ಇದೀಗ ಮೂಡುಬಿದಿರೆಯಲ್ಲಿ ಸಿನಿಮಾದ ಮುಹೂರ್ತ ನಡೆದಿದ್ದು ಶೂಟಿಂಗ್ ಸಹ ಶುರುವಾಗಿದೆ.

‘ಮಂಗಳಾಪುರಂ’ ಸಿನಿಮಾನಲ್ಲಿ ರಿಷಿ, ಅಭಿಮನ್ಯು ಕಾಶೀನಾಥ್, ವೈಜನಾಥ್ ಬಿರಾದರ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತುಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ರಂಜಿತ್ ರಾಜ್ ಸುವರ್ಣ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಪ್ರಸನ್ನ ತಂತ್ರಿ ಮೂಡುಬಿದಿರೆ ಮತ್ತು ರಾಮ್ ಪ್ರಸಾದ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ