AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮನ ಹುಟ್ಟುಹಬ್ಬಕ್ಕೆ ಜಗಮೆಚ್ಚುವ ಕಾರ್ಯ ಆರಂಭಿಸಿದ ಕಿಚ್ಚ

Kichcha Sudeep movies: ಸುದೀಪ್ ಅವರು ತಾಯಿಯ ಅಗಲಿಕೆಯ ನೋವಿನಿಂದ ಇನ್ನೂ ಸಂಪೂರ್ಣವಾಗಿ ಹೊರಬಂದಂತಿಲ್ಲ. ಇತ್ತೀಚೆಗಷ್ಟೆ ತಮ್ಮ ಹುಟ್ಟುಹಬ್ಬದ ಬಗ್ಗೆ ಹಾಕಿಕೊಂಡಿದ್ದ ಪೋಸ್ಟ್​​ನಲ್ಲಿಯೂ ಸಹ ಇದು ನನ್ನ ತಾಯಿ ಇಲ್ಲದ ಮೊದಲ ಹುಟ್ಟುಹಬ್ಬ ಎಂದು ನೋವಿನಿಂದಲೇ ಬರೆದಿದ್ದರು. ಇಂದು ಸುದೀಪ್ ಅವರ ತಾಯಿಯವರು ಹುಟ್ಟಿದ ದಿನ. ಈ ದಿನದಂದು ಜಗ ಮೆಚ್ಚುವ ಕಾರ್ಯವೊಂದನ್ನು ಸುದೀಪ್ ಪ್ರಾರಂಭಿಸಿದ್ದಾರೆ.

ಅಮ್ಮನ ಹುಟ್ಟುಹಬ್ಬಕ್ಕೆ ಜಗಮೆಚ್ಚುವ ಕಾರ್ಯ ಆರಂಭಿಸಿದ ಕಿಚ್ಚ
Sudeep
ಮಂಜುನಾಥ ಸಿ.
|

Updated on:Aug 30, 2025 | 5:25 PM

Share

‘ಅರಸನಾದರೇನು ತಾಯಿಗೆ ಮಗನೆ’ ಎಂಬ ಮಾತಿದೆ. ಅಂತೆಯೇ ಎಂಥಹಾ ಸ್ಟಾರ್ ನಟನಾರದೇನು, ಅಮ್ಮನ ಎದುರು ಮಂಡಿ ಊರದೇ ಇರಲಾರರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸುದೀಪ್ ಅವರ ತಾಯಿ ಸರೋಜಾ ನಿಧನ ಹೊಂದಿದರು. ಅಮ್ಮ ಅಗಲಿಕೆಗೆ ವರ್ಷವಾಗುತ್ತಾ ಬಂದಿದೆ. ಆದರೆ ಸುದೀಪ್​ ಅವರು ಇನ್ನೂ ಆ ನೋವಿನಿಂದ ಹೊರಬಂದಿಲ್ಲ. ಹಾಗೆಂದು ನೋವಿನಲ್ಲಿ ಕೊರಗುತ್ತಾ ಕೂತಿಲ್ಲ ಸಹ. ಇಂದು (ಆಗಸ್ಟ್ 30) ಸುದೀಪ್ ಅವರ ತಾಯಿಯ ಹುಟ್ಟುಹಬ್ಬ. ಅವರಿಲ್ಲದ ಮೊದಲ ಹುಟ್ಟುಹಬ್ಬವಿದು, ಈ ದಿನದಂದು ಜಗಮೆಚ್ಚು ಕಾರ್ಯ ಒಂದಕ್ಕೆ ಸುದೀಪ್ ಕೈ ಹಾಕಿದ್ದಾರೆ.

ಸುದೀಪ್ ಅವರ ತಾಯಿ ಸುಜಾತ ಅವರ ಜನ್ಮ ದಿನ ಇಂದು (ಆಗಸ್ಟ್ 30). ಸುದೀಪ್ ಅವರು ತಾಯಿಯವರ ನೆನಪಿಗಾಗಿ ಸಾಮಾಜಿಕ ಕಾರ್ಯವೊಂದಕ್ಕೆ ಕೈ ಹಾಕಿದ್ದಾರೆ. ಸುದೀಪ್ ಅವರ ತಾಯಿಯವರ ಹುಟ್ಟುಹಬ್ಬದ ಪ್ರಯುಕ್ತ ಗಿಡಗಳನ್ನು ನೆಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್​ನ ವತಿಯಿಂದ ಇಂದು ಸುದೀಪ್ ಅವರ ತಾಯಿಯ ನೆನಪಿಗಾಗಿ ಗಿಡಗಳನ್ನು ನೆಡಲಾಯ್ತು. ಈ ಕಾರ್ಯಕ್ಕೆ ಸ್ವತಃ ಸುದೀಪ್ ಉದ್ಘಾಟನೆ ಮಾಡಿದರು. ಸುದೀಪ್ ಹಾಗೂ ಅವರ ಕುಟುಂಬದವರು ಸೇರಿಕೊಂಡು ತೆಂಗಿನ ಗಿಡವೊಂದನ್ನು ನೆಟ್ಟರು.

‘ಅಮ್ಮನ ಹೆಜ್ಜೆಗೆ ಹಸಿರ ಹೆಜ್ಜೆ’ ಎಂದು ಈ ಹಸಿರು ಕ್ರಾಂತಿ ಕಾರ್ಯಕ್ಕೆ ಹೆಸರು ನೀಡಲಾಗಿದೆ. ಸುದೀಪ್ ಅವರ ತಾಯಿಯವರ ಹೆಸರಿನಲ್ಲಿ ಈ ಮಹತ್ ಕಾರ್ಯವನ್ನು ಸುದೀಪ್ ಅವರು ಮುಂದುವರೆಸಿಕೊಂಡು ಹೋಗಲಿದ್ದಾರೆ. ತಾಯಿಯವರ ನೆನಪಿನಲ್ಲಿ ಹಲವಾರು ಗಿಡಗಳನ್ನು ನೆಡಲಿದ್ದಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್​ ಈ ಸಮಾಜ ಮುಖಿ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗಲಿದೆ.

ಇದನ್ನೂ ಓದಿ:ಮತ್ತೆ ರಿಲೀಸ್ ಆಗ್ತಿದೆ ಸುದೀಪ್ ನಟನೆಯ ‘ವಿಷ್ಣುವರ್ಧನ’

ಸುದೀಪ್ ಅವರು ತಾಯಿಯ ಅಗಲಿಕೆಯ ನೋವಿನಿಂದ ಇನ್ನೂ ಸಂಪೂರ್ಣವಾಗಿ ಹೊರಬಂದಂತಿಲ್ಲ. ಇತ್ತೀಚೆಗಷ್ಟೆ ತಮ್ಮ ಹುಟ್ಟುಹಬ್ಬದ ಬಗ್ಗೆ ಹಾಕಿಕೊಂಡಿದ್ದ ಪೋಸ್ಟ್​​ನಲ್ಲಿಯೂ ಸಹ ಇದು ನನ್ನ ತಾಯಿ ಇಲ್ಲದ ಮೊದಲ ಹುಟ್ಟುಹಬ್ಬ ಎಂದು ನೋವಿನಿಂದಲೇ ಬರೆದಿದ್ದರು. ಬಿಗ್​ಬಾಸ್ ಶೋನಲ್ಲಿಯೂ ಸಹ ಸುದೀಪ್ ಅವರು ತಾಯಿಯವರನ್ನು ಹಲವಾರು ಬಾರಿ ನೆನಪು ಮಾಡಿಕೊಂಡಿದ್ದರು.

ಸುದೀಪ್ ಪ್ರಸ್ತುತ ಅನುಪ್ ಭಂಡಾರಿ ನಿರ್ದೇಶನದ ‘ಬಿಲ್ಲಾ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಕೆಆರ್​​ಜಿ ಪ್ರೊಡಕ್ಷನ್​​ನ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಒಂದು ತಮಿಳು ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಬಿಗ್​​ಬಾಸ್ ಹೊಸ ಸೀಸನ್ ಸಹ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Sat, 30 August 25