ಸೆಟ್ಟೇರಿತು ‘ಮೆಜೆಸ್ಟಿಕ್​ 2’ ಸಿನಿಮಾದ ನಾಯಕನ ಹೊಸ ಚಿತ್ರ ‘ಲವ್ ಈಸ್ ಲೈಫ್’

‘ಲವ್ ಈಸ್ ಲೈಫ್’ ಸಿನಿಮಾಗೆ ‘ಮೆಜೆಸ್ಟಿಕ್​ 2’ ಖ್ಯಾತಿಯ ಭರತ್‌ ಕುಮಾರ್ ಹೀರೋ ಆಗಿ ನಟಿಸುತ್ತಿದ್ದಾರೆ. ಅವರಿಗೆ ನಟಿ ಮಿಷಲ್ ಜೋಡಿ ಆಗಿದ್ದಾರೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಸಿನಿಮಾಗೆ ಇತ್ತೀಚೆಗೆ ಮುಹೂರ್ತ ಮಾಡಲಾಗಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. ಚಿತ್ರತಂಡದ ಬಗ್ಗೆ ಇಲ್ಲಿದೆ ವಿವರ..

ಸೆಟ್ಟೇರಿತು ‘ಮೆಜೆಸ್ಟಿಕ್​ 2’ ಸಿನಿಮಾದ ನಾಯಕನ ಹೊಸ ಚಿತ್ರ ‘ಲವ್ ಈಸ್ ಲೈಫ್’
‘ಲವ್​ ಈಸ್​ ಲೈಫ್’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Aug 30, 2024 | 8:24 PM

‘ಮೆಜೆಸ್ಟಿಕ್​’ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲದೇ, ‘ಮೆಜೆಸ್ಟಿಕ್​ 2’ ಸಿನಿಮಾ ಕೂಡ ಬರುತ್ತಿದೆ. ಈ ಚಿತ್ರಕ್ಕೆ ಭರತ್​ ಕುಮಾರ್​ ಹೀರೋ ಆಗಿದ್ದಾರೆ. ‘ಮೆಜೆಸ್ಟಿಕ್​ 2’ ಸಿನಿಮಾದ ಚಿತ್ರೀಕರಣ ಇನ್ನೂ ಮುಕ್ತಾಯ ಆಗಿಲ್ಲ. ಅದರ ಶೂಟಿಂಗ್​ ಮುಗಿಯುವುದಕ್ಕೂ ಮುನ್ನವೇ ಭರತ್​ ಅವರ ಇನ್ನೊಂದು ಸಿನಿಮಾ ಸೆಟ್ಟೇರಿದೆ. ಈ ಸಿನಿಮಾಗೆ ‘ಲವ್ ಈಸ್ ಲೈಫ್’ ಎಂದು ಶೀರ್ಷಿಕೆ ಇಡಲಾಗಿದೆ. ಭರತ್‌ ಕುಮಾರ್ ಮತ್ತು ಮಿಷಲ್ ಅವರು ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸುತ್ತಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ‘ಲವ್ ಈಸ್ ಲೈಫ್’ ಚಿತ್ರಕ್ಕೆ ಮುಹೂರ್ತ ಮಾಡಲಾಯಿತು.

ಜಿ.ಡಿ. ಸಂತೋಷ್‌ ಕುಮಾರ್ ಮತ್ತು ಎನ್. ಹನುಮಂತಪ್ಪ ಅವರು ಅಂಬಿಗಾ ಕ್ರಿಯೇಶನ್ಸ್ ಮೂಲಕ ‘ಲವ್ ಈಸ್ ಲೈಫ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಿ. ಶಿವರಾಜ್ ಅವರ ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ‘ಹೀರೋ ಪಾತ್ರಕ್ಕೆ ಭರತ್ ಅವರೇ ಸೂಕ್ತ ಎನಿಸಿತು. ಅವರಲ್ಲಿ ಇರುವ ಪ್ರತಿಭೆಯನ್ನು ಹೊರತೆಗೆಯುವ ಪ್ರಯತ್ನವನ್ನು ಮಾಡುತ್ತೇನೆ. ಇದನ್ನು ಸವಾಲಾಗಿ ತೆಗೆದುಕೊಂಡಿದ್ದು, ಸಾಬೀತು ಮಾಡಿ ತೋರಿಸ್ತೀನಿ’ ಎಂದು ನಿರ್ದೇಶಕರು ಹೇಳಿದ್ದಾರೆ.

ಜಿ. ಶಿವರಾಜ್ ಅವರು 14 ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. 3 ತಿಂಗಳು ಸಮಯ ತೆಗೆದುಕೊಂಡು ಸ್ಕ್ರಿಪ್ಟ್ ಸಿದ್ಧ ಮಾಡಿಕೊಂಡಿದ್ದೇನೆ. ಇದು ಡಿಫರೆಂಟ್​ ಲವ್​ ಸ್ಟೋರಿ. ಈ ರೀತಿಯೂ ಲವ್ ಮಾಡಬಹುದಾ ಎಂದು ಅನಿಸುವ ಸಿನಿಮಾವಿದು. ಶೃಂಗೇರಿಯಲ್ಲಿ ಸೆಪ್ಟೆಂಬರ್​ 9ರಿಂದ ಶೂಟಿಂಗ್​ ಶುರು ಮಾಡಿ, ಒಂದೇ ಹಂತದಲ್ಲಿ ಪೂರ್ಣಗೊಳಿಸುವ ಐಡಿಯಾ ಇದೆ. ಒಂದು ಒಂಟಿ ಮನೆಯ ಹುಡುಕಾಟ ನಡೆದಿದೆ’ ಎಂದು ಜಿ. ಶಿವರಾಜ್ ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಮೊದಲ ಸಿನಿಮಾ ‘ಮೆಜೆಸ್ಟಿಕ್’ನ ನಿರ್ಮಾಪಕರು ಹೇಳಿದ್ದು ಒಂದೇ ಮಾತು

‘ನಾನು ಈ ಸಿನಿಮಾದಲ್ಲಿ ಲವರ್‌ಬಾರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ನಟನೆ ತೋರಿಸಲು ಈ ಸಿನಿಮಾದಲ್ಲಿ ಅವಕಾಶ ಇದೆ. ನನ್ನ ಪಾತ್ರ ಬಹಳ ಹೈಲೈಟ್ ಆಗುತ್ತದೆ. ಒಂದು ಟ್ವಿಸ್ಟ್​ ಕೂಡ ಇದೆ’ ಎಂದು ನಟ ಭರತ್ ಕುಮಾರ್ ಹೇಳಿದರು. ನಿರ್ಮಾಪಕ ಸಂತೋಷ್‌ ಕುಮಾರ್ ಮಾತನಾಡಿ, ‘ಮೊದಲಿಂದಲೂ ನನಗೆ ಸಿನಿಮಾ ಮೇಲೆ ಆಸಕ್ತಿ. ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯ್ತು’ ಎಂದರು. ನಾಗೇಂದ್ರ ಅರಸ್, ಅಮಿತ್, ಪೂಜಾ ಗೌಡ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ನಟಿ ಮಿಷಲ್ ಅವರಿಗೆ ಇದು ಮೊದಲ ಸಿನಿಮಾ. ಇದರಲ್ಲಿ ಅವರು ಶ್ರೀಮಂತ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಇಂಥ ಪಾತ್ರ ಸಿಕ್ಕಿದ್ದಕ್ಕೆ ಬಹಳ ಖುಷಿ ಆಯಿತು’ ಎಂದು ಅವರು ಹೇಳಿದ್ದಾರೆ. ಎ.ಟಿ. ರವೀಶ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ 5 ಹಾಡುಗಳು ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಎಂ.ಬಿ. ಅಳ್ಳೀಕಟ್ಟಿ ಅವರು ಕ್ಯಾಮೆರಾ ಕೆಲಸ ವಹಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ