9 ಕೋಟಿ ರೂ.ಗೆ ಮಾರಾಟ ಆಯ್ತು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಆಡಿಯೋ ಹಕ್ಕು

|

Updated on: Jan 06, 2024 | 1:06 PM

‘ಮಾರ್ಟಿನ್’ ಚಿತ್ರದ ಆಡಿಯೋ ಹಕ್ಕು ಒಂಭತ್ತು ಕೋಟಿ ರೂಪಾಯಿಗೆ ಮಾರಾಟವಾಗಿದೆ. ಜನಪ್ರಿಯ ಆಡಿಯೋ ಸಂಸ್ಥೆ ‘ಸರೆಗಮ..’ ‘ಮಾರ್ಟಿನ್’ ಚಿತ್ರದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ.

9 ಕೋಟಿ ರೂ.ಗೆ ಮಾರಾಟ ಆಯ್ತು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಆಡಿಯೋ ಹಕ್ಕು
ಧ್ರುವ ಸರ್ಜಾ
Follow us on

ನಟ ಧ್ರುವ ಸರ್ಜಾ (Druva Sarja) ಅವರ ನಟನೆಯ ‘ಪೊಗರು’ ಸಿನಿಮಾ 2021ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಅವರ ಯಾವ ಚಿತ್ರವೂ ರಿಲೀಸ್ ಆಗಿಲ್ಲ. ಈ ಕಾರಣಕ್ಕೆ ಅವರ ನಟನೆಯ ‘ಮಾರ್ಟಿನ್’ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈಗಾಗಲೇ ಟೀಸರ್ ಮೂಲಕ ಸಿನಿಮಾ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ ಎಂಬ ಸೂಚನೆ ಪ್ರೇಕ್ಷಕರಿಗೆ ಸಿಕ್ಕಿದೆ. ಈ ಚಿತ್ರದ ಆಡಿಯೋ ಹಕ್ಕು 9 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂದು ತಿಳಿದು ಬಂದಿದೆ.

ಉದಯ್ ಕೆ. ಮೆಹ್ತಾ ಅವರು ‘ವಾಸವಿ ಎಂಟರ್ ಪ್ರೈಸಸ್’ ಬ್ಯಾನರ್ ಅಡಿಯಲ್ಲಿ ‘ಮಾರ್ಟಿನ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಎ.ಪಿ. ಅರ್ಜುನ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಧ್ರುವ ಸರ್ಜಾ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದು, ಚಿತ್ರದ ಆಡಿಯೋ ಹಕ್ಕು ಒಂಭತ್ತು ಕೋಟಿ ರೂಪಾಯಿಗೆ ಮಾರಾಟವಾಗಿದೆ. ಜನಪ್ರಿಯ ಆಡಿಯೋ ಸಂಸ್ಥೆ ‘ಸರೆಗಮ..’ ‘ಮಾರ್ಟಿನ್’ ಚಿತ್ರದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ.

ಆಡಿಯೋ ಹಕ್ಕು ದೊಡ್ಡ ಮಟ್ಟಕ್ಕೆ ಮಾರಾಟ ಆದ ಬಗ್ಗೆ ನಿರ್ಮಾಪಕ ಉದಯ್ ಸಂತಸ ವ್ಯಕ್ತಪಡಿಸಿದ್ದಾರೆ. ‘ನನಗೆ ತಿಳಿದಂತೆ ಇಷ್ಟು ದೊಡ್ಡ ಮೊತ್ತಕ್ಕೆ ಯಾವ ಸಿನಿಮಾದ ಆಡಿಯೋ ಹಕ್ಕೂ ಮಾರಾಟ ಆಗಿಲ್ಲ. ಈ ವಿಚಾರ ನಮಗೆ ಖುಷಿ ತಂದಿದೆ’ ಎಂದಿದ್ದಾರೆ ಅವರು. ಎಲ್ಲಾ ಹಾಡುಗಳು ಮಣಿ ಶರ್ಮ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿವೆ. ರವಿ ಬಸ್ರೂರ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಂಡಿದೆ. ಸದ್ಯ ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.

ಇದನ್ನೂ ಓದಿ: ಧ್ರುವ ಸರ್ಜಾಗೆ ಬರ್ತ್​ಡೇ ಸಂಭ್ರಮ; ಹುಟ್ಟುಹಬ್ಬದ ದಿನ ಅಣ್ಣನ ಕೊನೆಯ ಸಿನಿಮಾ ನೋಡಲಿದ್ದಾರೆ ‘ಮಾರ್ಟಿನ್’

‘ಮಾರ್ಟಿನ್’ ರಿಲೀಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. ಇವರ ಕಾಂಬಿನೇಷನ್​ ಬಗ್ಗೆ ಅಭಿಮಾನಿಗಳಿಗೆ ಕಾತುರ ಹೆಚ್ಚಿದೆ. ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. ಕೆ.ಎಂ.ಪ್ರಕಾಶ್ ಸಂಕಲ ಇದೆ. ತಂಡದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಚಿಕ್ಕಣ್ಣ, ಅನ್ವೇಶಿ ಜೈನ್, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ರೋಹಿತ್, ನವಾಬ್ ಶಾ ಮೊದಲಾದವರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ