‘ಮ್ಯಾಕ್ಸ್’ ಚಿತ್ರವನ್ನು ತಮಿಳಿನ ಕಲೈಪ್ಪುಲಿ ಧಾನು ಅವರು ನಿರ್ಮಿಸಿದ್ದಾರೆ. ಇವರ ಜೊತೆ ಕಿಚ್ಚ ಸುದೀಪ್ ಕೂಡ ಕೈ ಜೋಡಿಸಿದ್ದಾರೆ. ಅವರು ಹೀರೋ ಮಾತ್ರವಲ್ಲ, ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಸೋಮವಾರ (ಡಿಸೆಂಬರ್ 30) ಚಿತ್ರದ ಥ್ಯಾಂಕ್ಸ್ ಮೀಟ್ ತಂಡ ಆಚರಿಸಿಕೊಂಡಿತು. ಈ ವೇಳೆ ಸುದೀಪ್ ಅವರು ಅನೇಕ ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಮ್ಯಾಕ್ಸ್’ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬ ಬಗ್ಗೆ ಮಾತನಾಡೋಕೆ ನಿರ್ಮಾಪಕನಾಗಿ ಅವರು ನಿರಾಕರಿಸಿದ್ದಾರೆ.
‘ನಾನು ಕಲೆಕ್ಷನ್ ಬಗ್ಗೆ ಮಾತನಾಡಲ್ಲ. ನಾನು ನನ್ನ ಸಿನಿಮಾ ಎಷ್ಟು ದೊಡ್ಡದಾಗಿದೆ ಎಂದು ಹೇಳಿ ಇನ್ನೊಬ್ಬರನ್ನು ಕೆಳಗೆ ಹಾಕೋದಕ್ಕೆ ಈ ಸಭೆಗೆ ಬಂದಿಲ್ಲ. ಶೇರ್ ಎಂಬುದು ತುಂಬಾನು ವೈಯಕ್ತಿಕ. ಮೊದಲ ವಾರ ಇಷ್ಟು ಗಳಿಕೆ ಮಾಡಿದೆ ಎಂದು ಹೇಳಿ ನನ್ನನ್ನು ನಾನು ಯಾವುದೋ ಪೊಸಿಷನ್ನಲ್ಲಿ ಇಟ್ಟುಕೊಳ್ಳೋಕೆ ಇಲ್ಲಿ ಬಂದಿಲ್ಲ. ಇದು ಸಕಸ್ಸ್ ಮೀಟ್ ಅಲ್ಲ, ಥ್ಯಾಂಕ್ಸ್ ಹೇಳೋ ಮೀಟ್’ ಎಂದರು ಸುದೀಪ್.
‘ಇದು ಥ್ಯಾಂಕ್ಸ್ ಮೀಟ್ ಅಷ್ಟೇ, ಸಕ್ಸಸ್ಮೀಟ್ ಅಲ್ಲ. ತಮಿಳಿನಾಡಿನಿಂದ ಬಂದ ನಿರ್ಮಾಪಕರ ಮುಖದಲ್ಲಿ ನಗು ಕಾಣಿಸುತ್ತಿದೆ. ಅಷ್ಟು ಶೇರು ನನಗೆ ಸಿಕ್ಕಿದೆ’ ಎಂದು ಸುದೀಪ್ ಹೇಳಿದರು. ಈ ಮೂಲಕ ಅವರು ಎಲ್ಲಿಯೂ ಗಳಿಕೆ ವಿಚಾರ ರಿವೀಲ್ ಮಾಡಿಲ್ಲ.
ಇದನ್ನೂ ಓದಿ: ‘ಯುಐ’-‘ಬೇಬಿ ಜಾನ್’ ಗಳಿಕೆ ಹಿಂದಿಕ್ಕಿ ದಾಖಲೆ ಬರೆಯಲು ರೆಡಿ ಆದ ‘ಮ್ಯಾಕ್ಸ್’; ಕ್ರಿಸ್ಮಸ್ನ ರಿಯಲ್ ವಿನ್ನರ್
Sacnilk ನೀಡಿರೋ ಬಾಕ್ಸ್ ಆಫೀಸ್ ಲೆಕ್ಕಾಚಾರಗಳ ಪ್ರಕಾರ ‘ಮ್ಯಾಕ್ಸ್’ ಸಿನಿಮಾ ಆರೇ ದಿನಕ್ಕೆ ಬರೋಬ್ಬರಿ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಚಿತ್ರದ ಯಶಸ್ಸನ್ನು ತೋರಿಸುತ್ತದೆ. ಸುದೀಪ್ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದು ಸಿನಿಮಾಗೆ ಸಹಕಾರಿ ಆಗಿದೆ. ವಾರದ ಮೊದಲ ದಿನ ಸೋಮವಾರ (ಡಿಸೆಂಬರ್ 30) ಈ ಚಿತ್ರ ಬರೋಬ್ಬರಿ ಎರಡೂವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಗಳಿಕೆ ಮುಂದಿನ ದಿನಗಳಲ್ಲಿ ಹೀಗೆಯೇ ಮುಂದುವರಿಯುವ ಸೂಚನೆ ಸಿಕ್ಕಿದೆ. ಸುದೀಪ್ ಅವರು ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಯಶಸ್ಸನ್ನು ಕಂಡಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Tue, 31 December 24