ನಟಿ ಮೇಘಾ ಶೆಟ್ಟಿ ಬರ್ತ್​​ಡೇಗೆ ಸಿಕ್ತು ಎರಡೆರಡು ಗಿಫ್ಟ್​

ಮೇಘಾ ಶೆಟ್ಟಿ ಅವರಿಗೆ ಸೋಶೀಯಲ್​ ಮೀಡಿಯಾದಲ್ಲಿ ಬರ್ತ್​ಡೇ ವಿಶ್​ಗಳು ಬರುತ್ತಿವೆ. ಅವರ ಫ್ಯಾನ್ಸ್ ನಟಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.

ನಟಿ ಮೇಘಾ ಶೆಟ್ಟಿ ಬರ್ತ್​​ಡೇಗೆ ಸಿಕ್ತು ಎರಡೆರಡು ಗಿಫ್ಟ್​
ಮೇಘಾ ಶೆಟ್ಟಿ
Edited By:

Updated on: Aug 04, 2022 | 3:48 PM

ನಟಿ ಮೇಘಾ ಶೆಟ್ಟಿ (Megha Shetty) ಅವರು ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಫೇಮಸ್. ಅವರು ನಟಿಸುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ (Jothe Jotheyali Serial) ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದೆ. ಇದರ ಜತೆಗೆ ಅವರು ಚಿತ್ರರಂಗದಲ್ಲೂ ಬ್ಯುಸಿ ಇದ್ದಾರೆ. ಗಣೇಶ್ ನಟನೆಯ ‘ತ್ರಿಬಲ್​ ರೈಡಿಂಗ್​’ ಹಾಗೂ ‘ಆಪರೇಷನ್ ಲಂಡನ್ ಕೆಫೆ’ ಚಿತ್ರಕ್ಕೆ ಮೇಘಾ ಶೆಟ್ಟಿ ನಾಯಕಿ. ಇಂದು (ಆಗಸ್ಟ್ 4) ಮೇಘಾ ಶೆಟ್ಟಿ ಬರ್ತ್​ಡೇ. ಆ ಪ್ರಯುಕ್ತ ಎರಡೂ ಸಿನಿಮಾ ತಂಡಗಳು ಹೊಸ ಪೋಸ್ಟರ್ ಬಿಡುಗಡೆ ಮಾಡಿವೆ. ಈ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಲಾಗಿದೆ.

‘ತ್ರಿಬಲ್​ ರೈಡಿಂಗ್’ಗೆ ಮೂವರು ನಾಯಕಿಯರು. ಮೇಘಾ ಜತೆಗೆ ರಚನಾ ಇಂದರ್, ಅದಿತಿ ಪ್ರಭುದೇವ ಕೂಡ ನಟಿಸುತ್ತಿದ್ದಾರೆ. ಸಾಧು ಕೋಕಿಲ, ಕುರಿ ಪ್ರತಾಪ್​, ರವಿಶಂಕರ್, ರಂಗಾಯಣ ರಘು ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಮಹೇಶ್​ ಗೌಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. ವೈ.ಎಂ. ರಾಮ್​ಗೋಪಾಲ್​ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರ ತಂಡದವರು ಇಂದು ಮೇಘಾ ಶೆಟ್ಟಿ ಅವರ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮೇಘಾ ಶೆಟ್ಟಿ ಅವರು ಕೋಟ್ ಹಾಕಿದ್ದು, ಡಾಕ್ಟರ್​ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

‘ಆಪರೇಷನ್​ ಲಂಡನ್ ಕೆಫೆ’ ಚಿತ್ರದಲ್ಲಿ ಮೇಘಾ ಶೆಟ್ಟಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಲೆ ತುಂಬಾ ಮಲ್ಲಿಗೆ ಮುಡಿದು ಡಿ ಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕವೀಶ್ ಶೆಟ್ಟಿ ಹೀರೋ. ‘ಆಪರೇಷನ್​ ಲಂಡನ್ ಕೆಫೆ’ ಚಿತ್ರಕ್ಕೆ ಸಡಗರ ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ ಮತ್ತು ಮರಾಠಿಯ ದೀಪಕ್ ರಾಣೆ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕೊನೆಯ ಹಂತದ ಚಿತ್ರೀಕರಣ ಬಾಕಿ ಇದೆ.

ಇದನ್ನೂ ಓದಿ
‘ಬಿಗ್​ ಬಾಸ್​’ ಮಾಹಿತಿ ಲೀಕ್ ಆಗದಂತೆ ನೋಡಿಕೊಳ್ಳಲು ಹೊಸ ತಂತ್ರ; ಇನ್ಮುಂದೆ ಆಗಲ್ಲ ಸೋರಿಕೆ?
ಸೋಶಿಯಲ್ ಮೀಡಿಯಾದಲ್ಲಿ ಕ್ಯೂಟ್ ಫೋಟೋ ಹಂಚಿಕೊಂಡು ಗಮನ ಸೆಳೆದ ನಟಿ ಮೇಘಾ ಶೆಟ್ಟಿ
Jothe Jotheyali Serial Song: 3 ಕೋಟಿ ಬಾರಿ ವೀಕ್ಷಣೆ ಕಂಡ ‘ಜೊತೆ ಜೊತೆಯಲಿ’ ಧಾರಾವಾಹಿ ಹಾಡು
‘ಜೊತೆ ಜೊತೆಯಲಿ’ ಧಾರಾವಾಹಿಯ ಗೆಲುವಿನ ಸೂತ್ರವೇನು? ನಟಿ ಮೇಘಾ ಶೆಟ್ಟಿ ವಿವರಿಸಿದ್ದು ಹೀಗೆ

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಕ್ಯೂಟ್ ಫೋಟೋ ಹಂಚಿಕೊಂಡು ಗಮನ ಸೆಳೆದ ನಟಿ ಮೇಘಾ ಶೆಟ್ಟಿ

ಮೇಘಾ ಶೆಟ್ಟಿ ಅವರಿಗೆ ಸೋಶೀಯಲ್​ ಮೀಡಿಯಾದಲ್ಲಿ ಬರ್ತ್​ಡೇ ವಿಶ್​ಗಳು ಬರುತ್ತಿವೆ. ಅವರ ಫ್ಯಾನ್ಸ್ ನಟಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಅನೇಕರು ನೆಚ್ಚಿನ ನಟಿಯ ಫೋಟೋವನ್ನು ಪೋಸ್ಟ್​ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.