50ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದ ಹೀರೋಗೆ ಪೆಟ್ರೋಲ್​​ ಬಂಕ್​ನಲ್ಲಿ ಕೆಲಸ; ಕಷ್ಟ ಮೆಟ್ಟಿ ನಿಂತ ನಟ

| Updated By: ರಾಜೇಶ್ ದುಗ್ಗುಮನೆ

Updated on: May 24, 2023 | 9:23 AM

ಕೋಲ್ಕತ್ತಾದವರಾದ ಅಬ್ಬಾಸ್ ಹದಿಹರೆಯದಲ್ಲಿ ಮಾಡೆಲಿಂಗ್ ಕ್ಷೇತ್ರವನ್ನು ಪ್ರವೇಶಿಸಿದರು. ಅವರು ಹೆಚ್ಚಾಗಿ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ.

50ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದ ಹೀರೋಗೆ ಪೆಟ್ರೋಲ್​​ ಬಂಕ್​ನಲ್ಲಿ ಕೆಲಸ; ಕಷ್ಟ ಮೆಟ್ಟಿ ನಿಂತ ನಟ
ಅಬ್ಬಾಸ್ ಅಲಿ
Follow us on

ಚಿತ್ರರಂಗದಲ್ಲಿ ಏರಿಳಿತ ಸಾಮಾನ್ಯ. ಯಶಸ್ಸು ಸಿಕ್ಕಿಲ್ಲ ಎಂದರೆ ಅನೇಕರಿಗೆ ಅವಕಾಶ ಸಿಗುವುದೇ ಇಲ್ಲ. ಈಗ ತೆಲುಗು ಹೀರೋಗೆ ಹಾಗೆಯೇ ಆಗಿದೆ. ಕಡಿಮೆ ಸಮಯದಲ್ಲಿ ಸ್ಟಾರ್ ಡಮ್ ಪಡೆದವರು ಮಿರ್ಜಾ ಅಬ್ಬಾಸ್ ಅಲಿ (Mirza Abbas Ali). ಪಶ್ಚಿಮ ಬಂಗಾಳದವರಾದ ಅವರು, ಟಾಲಿವುಡ್​ನಲ್ಲಿ ಹಲವು ಸಿನಿಮಾ ಮಾಡಿದರು. ಕನ್ನಡದಲ್ಲೂ ಅವರು ನಟಿಸಿದ್ದಾರೆ. ಆದರೆ, ಈಗ ಅವರು ಚಿತ್ರರಂಗ ತೊರೆದಿದ್ದಾರೆ. ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದರು. ಪೆಟ್ರೋಲ್ ಬಂಕ್​ನಲ್ಲೂ ಅವರು ಕಾರ್ಯ ನಿರ್ವಹಿಸಿದ್ದರು.

ಕೋಲ್ಕತ್ತಾದವರಾದ ಮಿರ್ಜಾ ಅಬ್ಬಾಸ್ ಅಲಿ ಹದಿಹರೆಯದಲ್ಲಿ ಮಾಡೆಲಿಂಗ್ ಕ್ಷೇತ್ರವನ್ನು ಪ್ರವೇಶಿಸಿದರು. ಅವರು ಹೆಚ್ಚಾಗಿ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ. ಮಿರ್ಜಾ ಅಬ್ಬಾಸ್ ಅಲಿ 1996ರಲ್ಲಿ ‘ಕಾದಲ್ ದೇಶಂ’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಕನ್ನಡದ ‘ಶಾಂತಿ ಶಾಂತಿ ಶಾಂತಿ’, ‘ಹೆಲೋ’, ‘ಅಪ್ಪು ಆ್ಯಂಡ್ ಪಪ್ಪು’ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 2015ರಿಂದ ಈಚೆ ಅವರು ಸಿನಿಮಾ ಒಪ್ಪಿಕೊಂಡಿಲ್ಲ. ಕಾರಣ ಅವರು ವಿದೇಶದಲ್ಲಿದ್ದಾರೆ.

ನ್ಯೂಜಿಲೆಂಡ್​ಗೆ ತೆರಳಿದ ಅವರು ಕೆಲ ದಿನ ಪೆಟ್ರೋಲ್ ಬಂಕ್​ನಲ್ಲಿ ಪೆಟ್ರೋಲ್ ಹಾಕಿದರು. ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿದರು. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಭಾರತದಲ್ಲಿ ಓರ್ವ ನಟ ಸಿನಿಮಾಗಳಿಂದ ವಿರಾಮ ತೆಗೆದುಕೊಂಡಾಗ, ಅವರು ಏನು ಮಾಡುತ್ತಿದ್ದಾರೆ ಮತ್ತು ಎಲ್ಲಿಗೆ ಹೋಗುತ್ತಾರೆ ಎಂದು ಕಂಡುಹಿಡಿಯಲು ಪ್ರಯತ್ನ ನಡೆಯುತ್ತದೆ. ಆದರೆ ನ್ಯೂಜಿಲೆಂಡ್‌ನಲ್ಲಿ ಇದನ್ನು ನೋಡಲು ಯಾರೂ ಇಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಕೆಲಸದಲ್ಲಿ ನಿರತರಾಗಿರುತ್ತಾರೆ’ ಎಂದಿದ್ದಾರೆ ಮಿರ್ಜಾ ಅಬ್ಬಾಸ್ ಅಲಿ .

ಇದನ್ನೂ ಓದಿ: ‘ಮಾರ್ಟಿನ್’​ ಚಿತ್ರಕ್ಕೆ ವೈಭವಿ ಶಾಂಡಿಲ್ಯ ನಾಯಕಿ; ಧ್ರುವ ಸರ್ಜಾಗೆ ಜೋಡಿಯಾದ ಬಹುಭಾಷಾ ನಟಿ

ತಮ್ಮ ವೈಯಕ್ತಿಕ ಜೀವನದಲ್ಲಿನ ಏರಿಳಿತಗಳಿಂದಾಗಿ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಅವುರ ಯೋಚಿಸಿದ್ದರು. ಸದ್ಯ ಅವರು ಆತ್ಮಹತ್ಯೆಯತ್ತ ಒಲವು ತೋರುತ್ತಿರುವ ಮಕ್ಕಳ ಮನಸ್ಸನ್ನು ಬದಲಾಯಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಅವರು ವಿಶೇಷ ಕೋರ್ಸ್ ಕೂಡ ಮಾಡಿದ್ದಾರೆ. ಮಿರ್ಜಾ ಅಬ್ಬಾಸ್ ಅಲಿ ಅವರ ಪತ್ನಿ ಪ್ರಸಿದ್ಧ ವಿನ್ಯಾಸಕಿ. ಮದುವೆಯ ಸೀರೆಗಳನ್ನು ಅವರು ವಿನ್ಯಾಸ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 9:17 am, Wed, 24 May 23