ಮಿಸ್ಟರ್​ ದುಬೈ ಶಿಥಿಲ್​ ಪೂಜಾರಿ ಈಗ ‘ಕರಾವಳಿ’ ಸಿನಿಮಾದಲ್ಲಿ ವಿಲನ್​

|

Updated on: May 27, 2024 | 9:08 PM

ಕನ್ನಡ ಚಿತ್ರರಂಗಕ್ಕೆ ಹೊಸ ಖಳನಟನ ಎಂಟ್ರಿ ಆಗುತ್ತಿದೆ. ‘ಕರಾವಳಿ’ ಸಿನಿಮಾದಲ್ಲಿ ಶಿಥಿಲ್​ ಪೂಜಾರಿ ಅವರು ವಿಲನ್​ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾಗೆ ಪ್ರಜ್ವಲ್​ ದೇವರಾಜ್​ ಹೀರೋ. ಅವರ ಎದುರು ವಿಲನ್​ ಆಗಿ ಶಿಥಿಲ್​ ಪೂಜಾರಿ ಅಬ್ಬರಿಸಲಿದ್ದಾರೆ. ಈಗಾಗಲೇ ಅವರು ಮೊದಲ ಹಂತದ ಶೂಟಿಂಗ್​ ಮುಗಿಸಿದ್ದಾರೆ. ಚಿತ್ರತಂಡದಿಂದ ಅವರ ಪೋಸ್ಟರ್​ ಬಿಡುಗಡೆ ಆಗಿದೆ.

ಮಿಸ್ಟರ್​ ದುಬೈ ಶಿಥಿಲ್​ ಪೂಜಾರಿ ಈಗ ‘ಕರಾವಳಿ’ ಸಿನಿಮಾದಲ್ಲಿ ವಿಲನ್​
ಶಿಥಿಲ್​ ಪೂಜಾರಿ
Follow us on

‘ಡೈನಾಮಿಕ್​ ಪ್ರಿನ್ಸ್​’ ಪ್ರಜ್ವಲ್​ ದೇವರಾಜ್​ (Prajwal Devaraj) ನಟನೆಯ ‘ಕರಾವಳಿ’ ಸಿನಿಮಾದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಹೈಪ್​ ಚೆನ್ನಾಗಿದೆ. ಅದಕ್ಕೆ ಕಾರಣ ಆಗಿರುವುದು ಈ ಸಿನಿಮಾದ ಪಾತ್ರವರ್ಗ. ಸೆಟ್ಟೇರಿದ ದಿನದಿಂದಲೂ ಈ ಸಿನಿಮಾ ತಂಡ ಒಂದಿಲ್ಲೊಂದು ವಿಶೇಷ ಸುದ್ದಿಗಳನ್ನು ಹಂಚಿಕೊಳ್ಳುತ್ತಿದೆ. ‘ಕರಾವಳಿ’ (Karavali Movie) ಸಿನಿಮಾಗೆ ಗುರುದತ್ ಗಾಣಿಗ ಅವರು ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡ ಅವರದ್ದೇ. ಈ ಚಿತ್ರದಲ್ಲಿ ವಿಲನ್​ ಆಗಿ ಶಿಥಿಲ್​ ಪೂಜಾರಿ (Shithil Poojary) ಅವರು ನಟಿಸುತ್ತಿದ್ದಾರೆ. ಈ ಸುದ್ದಿಯನ್ನು ಚಿತ್ರತಂಡ ನೀಡಿದೆ.

‘ಕರಾವಳಿ’ ಸಿನಿಮಾದಲ್ಲಿ ಖಳನಟ ಯಾರು ಎಂಬುದನ್ನು ತಿಳಿಸಲು ಹೊಸ ಪೋಸ್ಟರ್​ ಅನಾವರಣ ಮಾಡಲಾಗಿದೆ. ಕೋಸ್ಟಲ್​ ಭಾಗದ ಕಹಾನಿ ಇರುವ ಈ ಸಿನಿಮಾದಲ್ಲಿ ಖಳನಾಗಿ ಅಬ್ಬರಿಸಲು ಮಿಸ್ಟರ್ ದುಬೈ ಟೈಟಲ್​ ಪಡೆದಿರುವ ಶಿಥಿಲ್ ಪೂಜಾರಿ ಅವರನ್ನು ಕರೆತರಲಾಗಿದೆ. ಈ ಸಿನಿಮಾದಲ್ಲಿ ಅವರು ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆ ಕಾರಣದಿಂದ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಈ ಸಿನಿಮಾದ ಪ್ರತಿ ಪಾತ್ರಧಾರಿಗಳನ್ನು ಡಿಫರೆಂಟ್​ ಆಗಿ ಪರಿಚಯಿಸಲಾಗುತ್ತಿದೆ. ಇಂದು (ಮೇ 27) ನಿರ್ದೇಶಕ ಗುರುದತ್ ಗಾಣಿಗ ಅವರು ವಿಲನ್​ ಪಾತ್ರದ ಪರಿಚಯ ಮಾಡಿಕೊಟ್ಟಿದ್ದಾರೆ. ಪ್ರಜ್ವಲ್​ ದೇವರಾಜ್​ ಎದುರು ಕಾದಾಡಲು ಶಿಥಿಲ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಮೂಲತಃ ಮಂಗಳೂರಿನ ಪ್ರತಿಭೆ. ಆದರೆ ದುಬೈನಲ್ಲಿ ನೆಲೆಸಿದ್ದಾರೆ. ‘ಕರಾವಳಿ’ ಸಿನಿಮಾಗೆ ಅವರು ಆಡಿಷನ್ ಮೂಲಕ ಸೆಲೆಕ್ಟ್​ ಆಗಿದ್ದಾರೆ.

ಶಿಥಿಲ್​ ಪೂಜಾರಿ ಅವರು ‘ಬೆಸ್ಟ್ ಎಂಟರ್​ಟೇನರ್ ದುಬೈ’, ‘ಬೆಸ್ಟ್ ಫಿಜಿಕ್​ ದುಬೈ’, ‘ಬೆಸ್ಟ್ ಪೀಪಲ್ ಚಾಯ್ಸ್ ದುಬೈ’ ಮುಂತಾದ ಟೈಟಲ್​ಗಳನ್ನು ಪಡೆದುಕೊಂಡಿದ್ದಾರೆ. ಕಟ್ಟುಮಸ್ತಾದ ದೇಹ ಹೊಂದಿರುವ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಅವರು ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ‘ಕರಾವಳಿ’ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ಪ್ರಜ್ವಲ್​ ದೇವರಾಜ್​ ಹೊಸ ಸಿನಿಮಾಗೆ ‘ಕರಾವಳಿ’ ಶೀರ್ಷಿಕೆ; ಟೀಸರ್​ ನೋಡಿ ವಾವ್​ ಎಂದ ಸಿನಿಪ್ರಿಯರು

‘ಕರಾವಳಿ’ ಚಿತ್ರದಲ್ಲಿ ಶಿಥಿಲ್ ಪೂಜಾರಿ ಅವರು ವಾಲಿ ಎಂಬ ನೆಗೆಟಿವ್ ಶೇಡ್ ಇರುವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್​ ಮುಗಿಸಿರುವ ಶಿಥಿಲ್ ಅವರು ಮತ್ತೆ 2ನೇ ಹಂತದ ಚಿತ್ರೀಕರಣದ ಸಲುವಾಗಿ ‘ಕರಾವಳಿ’ ಬಳಗವನ್ನು ಸೇರಿಕೊಳ್ಳಲಿದ್ದಾರೆ. ಶಿಥಿಲ್ ಅವರ ಫಸ್ಟ್​ ಲುಕ್ ಪೋಸ್ಟರ್​ ಗಮನ ಸೆಳೆಯುತ್ತಿವೆ. ಸೋಶಿಯಲ್​ ಮೀಡಿಯಾದಲ್ಲಿ ಅವರ ಫೋಟೋ ನೋಡಿದವರು ವಾವ್​ ಎನ್ನುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.