ಶಿವಣ್ಣನ ಬಳಿ ಅವಕಾಶಕ್ಕಾಗಿ ಬೇಡಿಕೆ ಇಟ್ಟ ಟಾಲಿವುಡ್ ಹಿರಿಯ ನಟ; ಹೀರೋ ಪ್ರತಿಕ್ರಿಯೆ ಏನು?

ಟಾಲಿವುಡ್ ನಟ ಮೋಹನ್ ಬಾಬು ಅವರು ಶಿವರಾಜ್ ಕುಮಾರ್ ಜೊತೆ ನಟಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ರಾಜ್ ಕುಮಾರ್ ಜೊತೆ ನಟಿಸುವ ಅವರ ಆಸೆ ಈಡೇರದ ಕಾರಣ, ಶಿವರಾಜ್ ಕುಮಾರ್ ಜೊತೆ ನಟಿಸುವ ಆಸೆ ಹೊಂದಿದ್ದಾರೆ. ಶಿವರಾಜ್ ಕುಮಾರ್ ಅವರು ಮೋಹನ್ ಬಾಬು ಅವರಿಗೆ ವಿಲನ್ ಪಾತ್ರವಲ್ಲದೆ ವಿಶೇಷ ಪಾತ್ರ ನೀಡುವುದಾಗಿ ತಿಳಿಸಿದ್ದಾರೆ.

ಶಿವಣ್ಣನ ಬಳಿ ಅವಕಾಶಕ್ಕಾಗಿ ಬೇಡಿಕೆ ಇಟ್ಟ ಟಾಲಿವುಡ್ ಹಿರಿಯ ನಟ; ಹೀರೋ ಪ್ರತಿಕ್ರಿಯೆ ಏನು?
ಶಿವಣ್ಣ

Updated on: May 31, 2025 | 3:11 PM

ಶಿವರಾಜ್​ಕುಮಾರ್ (Shivarajkumar) ಜೊತೆ ನಟಿಸಬೇಕು ಎಂಬುದು ಅನೇಕರ ಕನಸು. ಆದರೆ, ಈ ಕನಸನ್ನು ಈಡೇರಿಸಿಕೊಳ್ಳಲು ಎಲ್ಲರಿಂದಲೂ ಸಾಧ್ಯವಾಗೋದಿಲ್ಲ. ಅವರ ಜೊತೆ ಪರಭಾಷಾ ಕಲಾವಿದರಿಗೂ ನಟಿಸಬೇಕು ಎಂದಿರುತ್ತದೆ. ಈಗ ಟಾಲಿವುಡ್​ನ ಹಿರಿಯ ನಟ ಮೋಹನ್ ಬಾಬು ಅವರು ಶಿವರಾಜ್​ಕುಮಾರ್ ಜೊತೆ ನಟಿಸುವ ಹಂಬಲ ಹೊರಹಾಕಿದ್ದಾರೆ. ವಿಶೇಷ ಎಂದರೆ ರಾಜ್​ಕುಮಾರ್ ಜೊತೆ ನಟಿಸಬೇಕು ಎಂಬುದು ಅವರ ಇಚ್ಛೆ ಆಗಿತ್ತು. ಆ ಆಸೆ ಈಡೇರಲಿಲ್ಲ. ಅವರ ಮಗನ ಜೊತೆಯಾದರೂ ನಟಿಸಬೇಕು ಎಂಬುದು ಅವರ ಕನಸು.

‘ಕಣ್ಣಪ್ಪ’ ಸಿನಿಮಾ ಜೂನ್ 27ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ‘ರಾಜ್​ಕುಮಾರ್ ದೊಡ್ಡ ಹೀರೋ. ಅವರ ಬಗ್ಗೆ ಮಾತನಾಡುವಷ್ಟು ಅರ್ಹತೆ ನನಗಿಲ್ಲ. ಅಂಬರೀಷ್, ವಿಷ್ಣುವರ್ಧನ್ ನನ್ನ ಜೊತೆ ಕ್ಲೋಸ್ ಆಗಿದ್ದರು. ಅವರು ಹೋದ ಬಳಿಕ ರಾಕ್​ಲೈನ್ ವೆಂಕಟೇಶ್ ಆಪ್ತರಾದರು’ ಎಂದು ಹಳೆಯ ಘಟನೆಯನ್ನು ಅವರು ನೆನಪಿಸಿಕೊಂಡರು.

‘ನನಗೆ ಕನ್ನಡದಲ್ಲಿ ಒಂದು ಸಿನಿಮಾ ಮಾಡಬೇಕು. ಅವಕಾಶ ಕೇಳಲು ರಾಜ್​ಕುಮಾರ್ ಮನೆಗೆ ತೆರಳಿದ್ದೆ. ಅಮ್ಮ (ಪಾರ್ವತಮ್ಮ) ಊಟ ಹಾಕಿದರು. ನಾನು ಊಟ ಮಾಡಿ ಹಾಗೆಯೇ ಬಂದೆ. ಅವಕಾಶ ಕೇಳುವ ಧೈರ್ಯ ಬರಲೇ ಇಲ್ಲ. ಹೀಗಾಗಿ, ಶಿವರಾಜ್​ಕುಮಾರ್ ಅವರೇ ನಿಮ್ಮ ಸಿನಿಮಾದಲ್ಲಿ ನಾನು ವಿಲನ್ ಆಗಿ ಮಾಡಬೇಕು. ನನಗೆ ಅವಕಾಶ ನೀಡಿ’ ಎಂದು ಶಿವರಾಜ್​ಕುಮಾರ್ ಬಳಿ ಕೇಳಿದರು.

ಇದನ್ನೂ ಓದಿ
ಟಾಲಿವುಡ್​ನಲ್ಲಿ ರೀ-ಯೂನಿಯನ್ ಸಂಭ್ರಮ; ಸ್ಯಾಂಡಲ್​ವುಡ್​ನಲ್ಲಿ ಯಾವಾಗ?
ಎಚ್​ಎಸ್​ ವೆಂಕಟೇಶ​ಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

ಶಿವರಾಜ್​ಕುಮರ್ ಅವರು ಇದಕ್ಕೆ ಒಪ್ಪಲೇ ಇಲ್ಲ. ಅವರು ಈ ವಿಚಾರದಲ್ಲಿ ಹೇಳಿದ್ದೇ ಬೇರೆ. ‘ಮೋಹನ್ ಬಾಬು ಅವರು ಸಿನಿಮಾದಲ್ಲಿ ನಟಿಸೋ ಅವಕಾಶ ಕೇಳಿದ್ದಾರೆ. ನನ್ನ ಸಿನಿಮಾದಲ್ಲಿ ವಿಲನ್ ಆಗಿ ಮಾಡೋದು ಬೇಡ. ಅವರಿಗೆ ಯಾವುದಾದರೂ ವಿಶೇಷ ಪಾತ್ರ ನೀಡುತ್ತೇನೆ. ಅವರು ನನ್ನ ಸಹೋದರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿ’ ಎಂದಿದ್ದಾರೆ.

ಇದನ್ನೂ ಓದಿ: ಕಮಲ್ ಹಾಸನ್ ವಿವಾದದ ಬಳಿಕ ಮೊದಲ ಬಾರಿಗೆ ವೇದಿಕೆ ಮೇಲೆ ಮಾತನಾಡಿದ ಶಿವಣ್ಣ

ಕಮಲ್ ಹಾಸನ್ ಅವರು ಇತ್ತೀಚೆಗೆ ವೇದಿಕೆ ಮೇಲೆ ಮಾತನಾಡುವಾಗ ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದಿದ್ದರು. ಈ ವೇಳೆ ಅಲ್ಲಿ ಶಿವರಾಜ್​ಕುಮಾರ್ ಕೂಡ ಇದ್ದರು. ಈ ಕಾರಣಕ್ಕೆ ಸಾಕಷ್ಟು ವಿವಾದ ಆಯಿತು. ಅವರು ಈ ವಿಚಾರದಲ್ಲಿ ಮೌನವಹಿಸಬಾರದಿತ್ತು ಎಂಬುದು ಅನೇಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us