Mohan Juneja: ಖ್ಯಾತ ನಟ ಮೋಹನ್​ ಜುನೇಜ ನಿಧನ; ‘ಕೆಜಿಎಫ್​’ ಚಿತ್ರದಲ್ಲಿ ಅಭಿನಯಿಸಿದ್ದ ಜನಪ್ರಿಯ ಕಲಾವಿದ ಇನ್ನಿಲ್ಲ

| Updated By: ಮದನ್​ ಕುಮಾರ್​

Updated on: May 07, 2022 | 9:10 AM

Mohan Juneja Death: ಹಿರಿಯ ಕಲಾವಿದ ಮೋಹನ್​ ಜುನೇಜ ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೇ ಮೃತಪಟ್ಟಿದ್ದಾರೆ.

Mohan Juneja: ಖ್ಯಾತ ನಟ ಮೋಹನ್​ ಜುನೇಜ ನಿಧನ; ‘ಕೆಜಿಎಫ್​’ ಚಿತ್ರದಲ್ಲಿ ಅಭಿನಯಿಸಿದ್ದ ಜನಪ್ರಿಯ ಕಲಾವಿದ ಇನ್ನಿಲ್ಲ
ಮೋಹನ್ ಜುನೇಜ
Follow us on

ಕನ್ನಡ ಚಿತ್ರರಂಗದ ಖ್ಯಾತ ನಟ ಮೋಹನ್​ ಜುನೇಜ (Mohan Juneja) ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಅವರು ಕೊನೆಯುಸಿರು ಎಳೆದರು ಎಂಬ ಮಾಹಿತಿ ಲಭ್ಯವಾಗಿದೆ. ಅವರ ನಿಧನಕ್ಕೆ (Mohan Juneja Death) ಆಪ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ನೂರಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಮೋಹನ್​ ಜುನೇಜ ಅವರು ಹಾಸ್ಯ ಪಾತ್ರಗಳ ಮೂಲಕ ಫೇಮಸ್​ ಆಗಿದ್ದರು. ‘ಕೆಜಿಎಫ್​’ ( KGF 2) ಸಿನಿಮಾದಲ್ಲೂ ಒಂದು ಪಾತ್ರ ಮಾಡಿ ಜನಮನ ಗೆದ್ದಿದ್ದರು. ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ವಾಸವಾಗಿದ್ದ ಮೋಹನ್​ ಜುನೇಜ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಆರೋಗ್ಯದಲ್ಲಿ ತೀವ್ರ ಏರುಪೇರು ಆದ ಹಿನ್ನೆಲೆಯಲ್ಲಿ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಶುಕ್ರವಾರ (ಮೇ 6) ರಾತ್ರಿ ಮೋಹನ್​ ಜುನೇಜ ನಿಧನರಾದರು.

ಯಾವ ಪಾತ್ರ ಕೊಟ್ಟರೂ ಸೈ ಎಂಬಂತಹ ಪ್ರತಿಭಾವಂತ ಕಲಾವಿದನಾಗಿದ್ದ ಮೋಹನ್​ ಜುನೇಜ ಅವರು ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಪಾತ್ರದ ಸ್ಕ್ರೀನ್​ ಟೈಮ್​ ಕೆಲವೇ ನಿಮಿಷಗಳು ಇದ್ದರೂ ಕೂಡ ಜನಮನ ಗೆಲ್ಲುವಲ್ಲಿ ಅವರು ಯಶಸ್ವಿ ಆಗುತ್ತಿದ್ದರು. ‘ಕೆಜಿಎಫ್​ 1’ ಮತ್ತು ‘ಕೆಜಿಎಫ್​ 2’ ಸಿನಿಮಾದಲ್ಲಿ ಆನಂದ್​ ಇಂಗಳಗಿಗೆ ರಾಕಿ ಭಾಯ್​ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಯಾಗಿ ಮೋಹನ್​ ಜುನೇಜ ನಟಿಸಿದ್ದರು. ‘ಗ್ಯಾಂಗ್​ ಕಟ್ಕೊಂಡು ಬರೋನು ಗ್ಯಾಂಗ್​ಸ್ಟರ್​. ಅವನು ಒಬ್ಬನೇ ಬರೋನು.. ಮಾನ್​ಸ್ಟರ್​’ ಎಂದು ಅವರು ಹೇಳಿದ ಡೈಲಾಗ್​ ಸಖತ್​ ಫೇಮಸ್​ ಆಗಿತ್ತು. ಅಂಥ ಜನಪ್ರಿಯ ನಟನ ನಿಧನದ ಸುದ್ದಿ ಕೇಳಿ ಅಭಿಮಾನಿಗಳಿಗೆ ನೋವುಂಟಾಗಿದೆ. ಮೋಹನ್​ ಜುನೇಜ ಆತ್ಮಕ್ಕೆ ಎಲ್ಲರೂ ಶಾಂತಿ ಕೋರುತ್ತಿದ್ದಾರೆ.

ಚೆಲ್ಲಾಟ, ಕೆಜಿಎಫ್​, ಜೋಗಿ ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಲ್ಲಿ ಮೋಹನ್​ ಜುನೇಜ ನಟಿಸಿದ್ದರು. ಬೇರೆ ಭಾಷೆಯ ಚಿತ್ರಗಳಲ್ಲೂ ಕೂಡ ಬಣ್ಣ ಹಚ್ಚಿದ್ದರು. ಅನೇಕ ಸೀರಿಯಲ್​ನಲ್ಲಿ ನಟಿಸುವ ಮೂಲಕವೂ ಅವರು ಜನರನ್ನು ರಂಜಿಸಿದ್ದರು. ಲಾಕ್​ಡೌನ್​ ಸಂದರ್ಭದಲ್ಲಿ ಅವರು ಜೀವನ ಕಷ್ಟಕರವಾಗಿತ್ತು. ಅವರಿಗೆ ನಟ ಉಪೇಂದ್ರ ಸಹಾಯ ಮಾಡಿದ್ದರು. ವಿಡಿಯೋ ಮೂಲಕ ಉಪೇಂದ್ರ ಅವರಿಗೆ ಮೋಹನ್​ ಜುನೇಜ ಧನ್ಯವಾದ ಅರ್ಪಿಸಿದ್ದರು.

ಇದನ್ನೂ ಓದಿ
ಹಿರಿಯ ನಟಿ ತಾರಾಗೆ ಮಾತೃ ವಿಯೋಗ; ತಾಯಿ ಪುಷ್ಪಾ ನಿಧನ
‘2 ಸ್ಟೇಟ್ಸ್​’ ನಟ ಶಿವಕುಮಾರ್​ ಸುಬ್ರಮಣಿಯಂ ಇನ್ನಿಲ್ಲ; ಮಗ ಸತ್ತು 2 ತಿಂಗಳು ಕಳೆಯೋದರಲ್ಲಿ ತಂದೆ ನಿಧನ
ಅಪ್ಪು ಹುಟ್ಟುಹಬ್ಬ ಮಾಡುವಾಗ ಕುಸಿದು ಬಿದ್ದಿದ್ದ ಅಭಿಮಾನಿ ಹೃದಯಾಘಾತದಿಂದ ಸಾವು; ಅಯ್ಯೋ ವಿಧಿಯೇ..
Breaking News: ರವಿಚಂದ್ರನ್​ ತಾಯಿ ನಿಧನ: ಪಟ್ಟಮ್ಮಾಳ್​ ವೀರಸ್ವಾಮಿ ಇನ್ನಿಲ್ಲ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:27 am, Sat, 7 May 22