AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ನಟಿ ತಾರಾಗೆ ಮಾತೃ ವಿಯೋಗ; ತಾಯಿ ಪುಷ್ಪಾ ನಿಧನ

Tara Mother Pushpa Passes Away: ಹಿರಿಯ ನಟಿ ತಾರಾರವರ ತಾಯಿ ಪುಷ್ಪಾ ವಿಧಿವಶರಾಗಿದ್ದಾರೆ. ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ ಅವರಿಗೆ 76 ವರ್ಷ ವಯಸ್ಸಾಗಿತ್ತು.

ಹಿರಿಯ ನಟಿ ತಾರಾಗೆ ಮಾತೃ ವಿಯೋಗ; ತಾಯಿ ಪುಷ್ಪಾ ನಿಧನ
ತಾರಾ ಅನುರಾಧ ಅವರ ತಾಯಿ ಪುಷ್ಪಾ (ಸಂಗ್ರಹ ಚಿತ್ರ)
TV9 Web
| Edited By: |

Updated on:Apr 27, 2022 | 7:43 PM

Share

ಹಿರಿಯ ನಟಿ ತಾರಾರವರ (Tara Anuradha) ತಾಯಿ ಪುಷ್ಪಾ (Pushpa) ವಿಧಿವಶರಾಗಿದ್ದಾರೆ. ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ ಅವರಿಗೆ 76 ವರ್ಷ ವಯಸ್ಸಾಗಿತ್ತು. ತಾರಾ ಜೊತೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ತಾಯಿ ಪುಷ್ಪಾ, ಶೂಟಿಂಗ್‌ ವೇಳೆ ವಾಂತಿಯಿಂದ ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಪುಷ್ಪಾ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಅವರು ನಿಧನರಾಗಿದ್ದಾರೆ.

ಜೆ.ಪಿ.ನಗರದ ತಾರಾ ಮನೆಯಲ್ಲೇ ಅವರ ತಾಯಿಯೂ ಕೂಡ ವಾಸವಿದ್ದರು. 1986ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ತಾರಾ ಅವರಿಗೆ ತಾಯಿ ಬೆನ್ನೆಲುಬಾಗಿ ನಿಂತಿದ್ದರು. ವಿವಿಧ ಪಾತ್ರಗಳ ಮೂಲಕ ಗಮನಸೆಳೆದ ತಾರಾಗೆ ಅವರ ತಾಯಿ ಸಂಪೂರ್ಣ ಬೆಂಬಲ ನೀಡಿದ್ದಲ್ಲದೇ, ವೃತ್ತಿ ಜೀವನಕ್ಕೆ ಸಹಕಾರ ನೀಡಿದ್ದರು. ತಾರಾ ಅವರೊಂದಿಗೆ ಪುಷ್ಪಾರೂ ಚಿತ್ರೀಕರಣವಾಗುವ ಸ್ಥಳಕ್ಕೆ ತೆರಳಿ ಸಾಥ್ ನೀಡುತ್ತಿದ್ದರು. ಆದರೆ ಇದೀಗ ನಟಿಗೆ ಮಾತೃ ವಿಯೋಗವಾಗಿದೆ.

ಇದನ್ನೂ ಓದಿ: Kichcha Sudeep: ‘ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್’; ಹಿಂದಿ ರಾಷ್ಟ್ರಭಾಷೆ ಎಂದ ಅಜಯ್ ದೇವಗನ್​ಗೆ ಕಿಚ್ಚ ಸುದೀಪ್ ಪ್ರತ್ಯುತ್ತರ

Published On - 7:36 pm, Wed, 27 April 22

ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು
ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು
ರೊಮಾರಿಯೊ ಶೆಫರ್ಡ್​ಗೆ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ
ರೊಮಾರಿಯೊ ಶೆಫರ್ಡ್​ಗೆ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ
ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ
ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ