ಮೋಕ್ಷಿತಾ ಪೈ ಜೊತೆ ರ‍್ಯಾಪಿಡ್ ಫೈಯರ್; ಎಲ್ಲಾ ಪ್ರಶ್ನೆಗಳಿಗೆ ಓಪನ್ ಉತ್ತರ ಕೊಟ್ಟ ನಟಿ
ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಪಾಲ್ಗೊಂಡ ನಂತರ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಜೀವನದ ಬದಲಾವಣೆಗಳು, ಮುಂಬರುವ ಚಿತ್ರ ‘ಮಿಡಲ್ ಕ್ಲಾಸ್ ರಾಮಾಯಣ’ ಮತ್ತು ಬಿಗ್ ಬಾಸ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ರ‍್ಯಾಪಿಡ್ ಫೈಯರ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಮೋಕ್ಷಿತಾ ಪೈ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಆಗಿ ಗಮನ ಸೆಳೆದಿದ್ದಾರೆ. ಅವರ ಖ್ಯಾತಿ ಈಗ ಸಾಕಷ್ಟು ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಖ್ಯಾತಿ ಹೆಚ್ಚಾಗಿದೆ. ಬಿಗ್ ಬಾಸ್ಗೆ ಬಂದ ಬಳಿಕ ಅವರ ಬಗೆಗಿನ ಒಂದಷ್ಟು ವಿಚಾರಗಳು ರಿವೀಲ್ ಆದವು. ಆದಾಗ್ಯೂ ಅವರ ಇಷ್ಟದ ಕೆಲವು ವಿಚಾರಗಳನ್ನು ಅವರು ರಿವೀಲ್ ಮಾಡಿಲ್ಲ. ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಂದರ್ಶನದಲ್ಲಿ ಇದಕ್ಕೆ ಉತ್ತರ ನೀಡಿದ್ದಾರೆ.
ಮೋಕ್ಷಿತಾ ಪೈ ನಟನೆಯ ‘ಮಿಡಲ್ ಕ್ಲಾಸ್ ರಾಮಾಯಣ’ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಮೋಕ್ಷಿತಾ ಅವರು ಗ್ಲಾಮರ್ ಅವತಾರ ಬಿಟ್ಟು ಡಿ ಗ್ಲಾಮ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಶನದ ವೇಳೆ ಅವರು ರ‍್ಯಾಪಿಡ್ ಫೈಯರ್ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ನೀವು ಮುಂಜಾನೆ ಎದ್ದ ತಕ್ಷಣ ಏನ್ ಮಾಡ್ತೀರಾ?:
ಎದ್ದತಕ್ಷಣ ಎರಡು ಗ್ಲಾಸ್ ಬಿಸಿನೀರು ಹಾಗೂ ಗ್ರೀನ್ ಟೀ ಕುಡಿಯುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ಗ್ರೀನ್ ಟೀ ಸಿಗ್ತಾ ಇರಲಿಲ್ಲ. ಹೀಗಾಗಿ, ಬಿಸಿನೀರು ಕುಡಿಯುತ್ತಿದ್ದೆ.
ಮೊದಲಿದ್ದ ಲೈಫ್ಗೂ ಬಿಗ್ ಬಾಸ್ ಬಳಿಕದ ಲೈಫ್ಗೂ ಏನು ವ್ಯತ್ಯಾಸ:
ಬಿಗ್ ಬಾಸ್ ಹೋಗೋ ಮೊದಲು ಪಾರು ಎನ್ನುತ್ತಿದ್ದರು. ಈಗ ನನ್ನ ಮೋಕ್ಷಿತಾ ಎಂದು ಮಾತನಾಡಿಸುತ್ತಾರೆ.
ನಿಮ್ಮಿಷ್ಟದ ಒಂದು ತಿಂಡಿ:
ನಮ್ಮ ಅಮ್ಮ ಮಾಡೋ ಎಲ್ಲಾ ಅಡುಗೆಗಳೂ ಇಷ್ಟ.
ನಿಮ್ಮಿಷ್ಟದ ಒಂದು ಸಿನಿಮಾ:
ನನಗೆ ಪುನೀತ್ ರಾಜ್ಕುಮಾರ್ ನಟನೆಯ ‘ಆಕಾಶ್’ ತುಂಬಾ ಇಷ್ಟ. ಸಾಕಷ್ಟು ಬಾರಿ ಆ ಸಿನಿಮಾ ನೋಡಿದ್ದೇನೆ.
ಬಿಗ್ ಬಾಸ್ ಬಳಿಕ ನೀವು ಜೀವನ ನೋಡೋ ರೀತಿಯಲ್ಲಿ ಬದಲಾಗಿದ್ಯಾ?:
ಮೊದಲು ಹಲವು ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿದ್ದೆ. ಹೇಳಿದರೆ ಬೇಸರ ಆಗುತ್ತದೆ ಎಂದುಕೊಳ್ಳುತ್ತಿದ್ದೆ. ಆದರೆ, ಈಗ ಅದನ್ನು ಬದಲಿಸಿಕೊಂಡಿದ್ದೇನೆ. ಏನೇ ಇದ್ದರೂ ಓಪನ್ ಆಗಿ ಹೇಳುತ್ತೇನೆ.
ಖುಷಿ ಆದಾಗ ನೆನಪಾಗೋ ಒಬ್ಬ ವ್ಯಕ್ತಿ:
ನನ್ನ ಫ್ಯಾಮಿಲಿ
ನಿಮ್ಮಿಷ್ಟದ ಸಾಂಗ್:
ಬಿಗ್ ಬಾಸ್ನಲ್ಲಿ ನಾನು ಹೇಳುತ್ತಿದ್ದ ಸಾಂಗ್.
ನಿಮ್ಮಿಷ್ಟದ ಐಸ್ಕ್ರೀಂ:
ನನಗೆ ಐಸ್ಕ್ರೀಂ ಇಷ್ಟವಿಲ್ಲ.
ವೆಕೇಶನ್ ಸ್ಪಾಟ್:
ನನಗೆ ಲಾಂಗ್ ರೈಡ್ ಇಷ್ಟ. ಕೂರ್ಗ್ ಸಖತ್ ಇಷ್ಟದ ಜಾಗ.
ಇತ್ತೀಚೆಗೆ ನೋಡಿದ ಸಿನಿಮಾ:
‘ಮ್ಯಾಕ್ಸ್’ ಸಿನಿಮಾ ನೋಡಿದೆ, ಇಷ್ಟ ಆಗಿದೆ.