ನಾನಿಗೆ ಕನ್ನಡ ಪಾಠ ಮಾಡಿದ ಶ್ರೀನಿಧಿ ಶೆಟ್ಟಿ; ಎಷ್ಟು ಕ್ಯೂಟ್ ನೋಡಿ

ನಾನಿ ಅವರು ತೆಲುಗು ನಟರಾಗಿದ್ದರೂ ಕನ್ನಡದ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಅವರೊಂದಿಗಿನ ಸ್ನೇಹ, ಹಾಗೂ ಶ್ರೀನಿಧಿ ಶೆಟ್ಟಿಯವರೊಂದಿಗೆ 'ಹಿಟ್ 3' ಚಿತ್ರದಲ್ಲಿ ನಟಿಸಿರುವುದು ಇದಕ್ಕೆ ಕಾರಣ. ಶ್ರೀನಿಧಿ ಅವರು ಕನ್ನಡ ಪಾಠ ಮಾಡಿಕೊಟ್ಟಿದ್ದು, 'ಬೊಂಬೆ ಹೇಳುತೈತೆ' ಹಾಡನ್ನು ಹಾಡಿದ್ದು ವೈರಲ್ ಆಗಿದೆ.

ನಾನಿಗೆ ಕನ್ನಡ ಪಾಠ ಮಾಡಿದ ಶ್ರೀನಿಧಿ ಶೆಟ್ಟಿ; ಎಷ್ಟು ಕ್ಯೂಟ್ ನೋಡಿ
ಶ್ರೀನಿಧಿ ಶೆಟ್ಟಿ-ನಾನಿ

Updated on: Apr 28, 2025 | 7:34 AM

ನಟ ನಾನಿ (Nani) ಅವರು ತೆಲುಗು ಹೀರೋ ಆದರೂ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಇದಕ್ಕೆ ಕಾರಣ ಅವರಿಗೆ ಇಲ್ಲಿರೋ ಗೆಳೆಯರ ಬಳಗ. ಸುದೀಪ್ ಕುಟುಂಬದ ಜೊತೆ ಅವರು ಒಳ್ಳೆಯ ಫ್ರೆಂಡ್​ಶಿಪ್ ಹೊಂದಿದ್ದಾರೆ. ಪುನೀತ್ ಜೊತೆಗೂ ಅವರಿಗೆ ಒಳ್ಳೆಯ ಗೆಳೆತನ ಇತ್ತು. ಈಗ ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದ ಅವರಿಗೆ ಕನ್ನಡದ ಮೇಲೆ ವಿಶೇಷ ಗೌರವ ಬಂದಿದೆ. ಸಂದರ್ಶನ ಒಂದರಲ್ಲಿ ಶ್ರೀನಿಧಿ ಶೆಟ್ಟಿ ಅವರು ನಾನಿಗೆ ಕನ್ನಡ ಪಾಠ ಮಾಡಿದ್ದಾರೆ.

ಶ್ರೀನಿಧಿ ಶೆಟ್ಟಿ ಹಾಗೂ ನಾನಿ ‘ಹಿಟ್ 3’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಮೇ 1ರಂದು ಸಿನಿಮಾ ತೆರೆಮೇಲೆ ಬರುತ್ತಿದೆ. ಈ ಚಿತ್ರದ ಬಗ್ಗೆ ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಪ್ರಚಾರಕ್ಕೆ ನಾನಿ ಹಾಗೂ ಶ್ರೀನಿಧಿ ಅನೇಕ ಕಡೆಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಅನೇಕ ಟಿವಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಈ ರೀತಿ ಸಂದರ್ಶನ ನೀಡುವ ವೇಳೆ ಕನ್ನಡದಲ್ಲಿ ನಾನಿ ಮಾತನಾಡಿದ್ದಾರೆ.

ಇದನ್ನೂ ಓದಿ
ಮುಂಜಾನೆ ಎದ್ದು ತಮ್ಮದೇ ಮೂತ್ರ ಕುಡಿಯುತ್ತಾರೆ ನಟ ಪರೇಶ್ ರಾವಲ್
ಅಪ್ಪಾಜಿಯೇ ದಾರಿ ಹಾಕಿಕೊಟ್ಟರು, ಎಲ್ಲರೂ ಪಾಲಿಸುತ್ತಿದ್ದಾರೆ: ಶಿವಣ್ಣ
ಮೆಗಾಸ್ಟಾರ್ ಚಿರಂಜೀವಿ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ಮರು ಬಿಡುಗಡೆ
20 ವರ್ಷಗಳ ಪ್ರಯತ್ನದ ಬಳಿಕ ಕೊನೆಗೂ ಸಿಕ್ತು ‘3 ಇಡಿಯಟ್ಸ್’ ಶಾಲೆಗೆ ಮಾನ್ಯತೆ

‘ನನ್ನ ಪ್ರೀತಿಯ ಶಮೀರಾ (ಆ್ಯಂಕರ್) ನಾನು ನಿನ್ನನ್ನು, ತುಂಬಾ ಪ್ರೀತಿಸುತ್ತೇನೆ’ ಎಂದು ನಾನಿಗೆ ಶ್ರೀನಿಧಿ ಶೆಟ್ಟಿ ಹೇಳಿಕೊಟ್ಟಿದ್ದಾರೆ. ಇದನ್ನೇ ನಾನಿ ಅವರು ಹೇಳಿದ್ದಾರೆ. ಇದನ್ನು ಕೇಳಿ ಆ್ಯಂಕರ್ ಅವರು ನಾಚಿ ನೀರಾಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಇನ್ನು, ಪುನೀತ್ ರಾಜ್​ಕುಮಾರ್ ಅವರ ನಟನೆಯ ‘ರಾಜಕುಮಾರ’ ಚಿತ್ರದ ‘ಬೊಂಬೆ ಹೇಳುತೈತೆ..’ ಹಾಡು ಸೂಪರ್ ಹಿಟ್ ಆಗಿತ್ತು. ಈ ಹಾಡನ್ನು ನಾನಿ ಅವರು ಈ ಸಂದರ್ಶನದಲ್ಲಿ ಹಾಡಿದ್ದಾರೆ. ಈ ಸಂದರ್ಭದ ಕ್ಲಿಪ್ ಕೂಡ ವೈರಲ್ ಆಗಿದೆ. ನಾನಿ ಅವರ ಕನ್ನಡ ಪ್ರೇಮಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ತೆಲುಗು ಸ್ಟಾರ್ ನಟನ ಸಿನಿಮಾಗೆ ಧ್ವನಿಯಾದ ಸುದೀಪ್ ಮಗಳು ಸಾನ್ವಿ

‘ಹಿಟ್’ ಸಿನಿಮಾ ಸರಣಿಯಲ್ಲಿ ಮೂರನೇ ಚಿತ್ರವಾಗಿ ‘ಹಿಟ್ 3’ ಬರುತ್ತಿದೆ. ಈ ಮೊದಲಿನ ಎರಡೂ ಸಿನಿಮಾಗಳು ಹಿಟ್ ಆಗಿವೆ. ಇದು ಮರ್ಡರ್ ಮಿಸ್ಟರಿ ಕಥೆಯನ್ನು ಹೊಂದಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಇದೆ. ‘ಕೆಜಿಫ್ 2’ ಹಾಗೂ ‘ಕೋಬ್ರಾ’ ಬಳಿಕ ಶ್ರೀನಿಧಿ ಶೆಟ್ಟಿ ಮತ್ತೆ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.