AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಕೀಲಾ’ ಡ್ರಗ್ಸ್ ಸುಳಿಯಲ್ಲಿ ಸಿಲುಕಿದವರ ಕತೆ, ಧರ್ಮಾ ಕೀರ್ತಿರಾಜ್ ನಾಯಕ

Tequila Kannada Movie: ಈ ಹಿಂದೆ ಕನ್ನಡದ ‘ಜೆಡ್’, ‘ಹೂ ಅಂತಿಯಾ ಊಹು ಅಂತಿಯಾ’ ಇನ್ನೂ ಕೆಲವು ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಹಿರಿಯ ನಿರ್ದೇಶಕ ಪ್ರವೀಣ್ ನಾಯಕ್ ಬಹಳ ದಿನಗಳ ಬಳಿಕ ಹೊಸದೊಂದು ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಧರ್ಮಾ ಕೀರ್ತಿರಾಜ್ ನಾಯಕ.

'ಟಕೀಲಾ' ಡ್ರಗ್ಸ್ ಸುಳಿಯಲ್ಲಿ ಸಿಲುಕಿದವರ ಕತೆ, ಧರ್ಮಾ ಕೀರ್ತಿರಾಜ್ ನಾಯಕ
Dharma Keerthiraj
ಮಂಜುನಾಥ ಸಿ.
|

Updated on: Apr 27, 2025 | 9:32 PM

Share

‘ಜಡ್’, ‘ಹೂ ಅಂತೀಯಾ ಉಹೂ ಅಂತೀಯಾ’, ‘ಮೀಸೆ ಚಿಗುರಿದಾಗ’ ಅಂಥಹಾ ಸಿನಿಮಾಗಳ (Cinema) ನಿರ್ದೇಶನ ಮಾಡಿರುವ ಕೆ.ಪ್ರವೀಣ್ ನಾಯಕ್ ಬಹಳ ದಿನಗಳ ನಂತರ ಮತ್ತೆ ನಿರ್ದೇಶಕನ ಟೋಪಿ ಧರಿಸಿದ್ದಾರೆ. ಪ್ರವೀಣ್ ‘ಟಕೀಲಾ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ಮರಡಿಹಳ್ಳಿ ನಾಗಚಂದ್ರ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿದ್ದು ನಿಖಿತಾ ಸ್ವಾಮಿ ನಾಯಕಿ. ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದೆ.

ಚಿತ್ರತಂಡ ಇತ್ತೀಚೆಗಷ್ಟೆ ಪತ್ರಿಕಾಗೋಷ್ಠಿ ಆಯೋಜನೆ ಮಾಡಿತ್ತು. ಈ ವೇಳೆ ಮಾತನಾಡಿದ ನಿರ್ದೇಶಕ ಪ್ರವೀಣ್ ನಾಯಕ್, ಮನಸಿನ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಕತೆ ಮಾಡಿದ್ದೇವೆ. ಮನಸಿನ ಸಮಸ್ಯೆಗಳನ್ನು ನೋಡ್ತಾ ನೋಡ್ತಾ ಜನರ ಮನಸ್ಥಿತಿ ಅವಲೋಕಿಸಿದಾಗ ಎಲ್ಲರಿಗೂ ಒಂದಲ್ಲ ಒಂದು ಚಿಂತೆಯಿರುತ್ತೆ ಅನ್ನೋದು ಗೊತ್ತಾಯ್ತು, ಇದೆಲ್ಲವನ್ನೂ ಸೇರಿಸಿ ನಾನು, ನನ್ನ ಪತ್ನಿ ಸೇರಿ ನೈಜತೆಗೆ ಹತ್ತಿರವಾಗುವಂಥ ಒಂದು ಕಥೆ ಬರೆದೆವು. ಜೀವನದಲ್ಲಿ ಮನುಷ್ಯನಿಗೆ ಒಂದು ಅವಕಾಶ ಸಿಗುತ್ತೆ, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ ಇದ್ದರೆ, ಮತ್ತೆ ಎರಡನೇ ಅವಕಾಶ ಸಿಗದೇ ಇರಬಹುದು, ಹಾಗಾಗಿ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ನಮ್ಮ ಚಿತ್ರದ ಮೂಲಕ ಹೇಳಿದ್ದೇನೆ, ತುಂಬಾ ತಡವಾಗಿ ನಿರ್ಧಾರ ತಗೊಂಡರೆ ಅದು ಕೂಡ ಉಪಯೋಗಕ್ಕೆ ಬರಲ್ಲ, ಚಟಗಳು ಅತಿಯಾದಾಗ ಏನು ಬೇಕಾದರೂ ಆಗಬಹುದು, ಡ್ರಗ್ಸ್ ಅನ್ನೋದು ಒಂದು ಸುಳಿ ಇದ್ದಹಾಗೆ, ಅದನ್ನು ಕುತೂಹಲದಿಂದ ಮುಟ್ಟಿ ನೋಡೋ ಪ್ರಯತ್ನ ಮಾಡಬಾರದು ಅನ್ನೋದು ಚಿತ್ರದ ಕಾನ್ಸೆಪ್ಟ್’ ಎಂದಿದ್ದಾರೆ.

‘ಸಿನಿಮಾದಲ್ಲಿ ಸ್ವಲ್ಪ ಅಡಲ್ಟ್ ಕಂಟೆಂಟ್ ಕೂಡ ಬರುತ್ತೆ, ಹಾಗಂತ ಯಾವುದನ್ನೂ ವಲ್ಗರ್ ಆಗಿ ತೋರಿಸಿಲ್ಲ, ಕ್ಲಾಸ್ ಆಗಿ ಹೇಳೋ ಪ್ರಯತ್ನ ಮಾಡಿದ್ದೇನೆ. ಜೀವನದಲ್ಲಿ ನಾನು ನೋಡಿದ, ಕೇಳಿದ ಅನುಭವಗಳೇ ಈ ಸಿನಿಮಾವಾಗಿದೆ. ಸೈಕಾಲಜಿ ಜತೆಗೆ ಸ್ಪಿರಿಚುಯಾಲಿಟಿ ಬೆರೆಸಿ ಮಾಡಿದ ಚಿತ್ರ ಇದು, ಈ ಮೂಲಕ ಒಂದು ಅರಿವು ಮೂಡಿಸುವ ಪ್ರಯತ್ನ ಎನ್ನಬಹುದು, ಟೈಟಲ್ ಸಾಂಗ್ ಒಂದೇ ದಿನದಲ್ಲಿ ಒಂದೂವರೆ ಲಕ್ಷ ವೀಕ್ಷಣೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ:500 ಕೋಟಿ ರೂಪಾಯಿ ವಜ್ರ ದೋಚುವ ಕಥೆ; ಒಟಿಟಿಯಲ್ಲಿರೋ ಸಿನಿಮಾನ ಮಿಸ್ ಮಾಡಬೇಡಿ

ನಾಯಕ ಧರ್ಮ ಕೀರ್ತಿರಾಜ್ ಮಾತನಾಡಿ, ‘ನಾನು ಈ ಸಿನಿಮಾದಲ್ಲಿ ಅಭಿನಯಿಸಲು ಕಾರಣ ನಿರ್ಮಾಪಕ ನಾಗಚಂದ್ರ, ಅವರಿಗೆ ಈ ಚಿತ್ರದಿಂದ ಒಳ್ಳೇ ಹೆಸರು ಬರಲಿ, ನಮ್ಮ ತಂದೆಯವರಿಗೆ ಪ್ರವೀಣ್ ನಾಯಕ್ ಅವರ ಜತೆ ಸಿನಿಮಾ ಮಾಡ್ತಿದೀನಿ ಎಂದಾಗ ಮಾಡು ಅಂಥವರ ಬಳಿ ಕಲಿಯುವುದು ಬಹಳಷ್ಟಿರುತ್ತೆ ಎಂದು ಪ್ರೋತ್ಸಾಹಿಸಿದರು. ಈ ಸಿನಿಮಾ ಮೂಲಕ ನನಗೆ ಖಂಡಿತ ಒಳ್ಳೇ ಹೆಸರು ಬರುತ್ತೆ ಎಂಬ ನಂಬಿಕೆಯಿದೆ, ಒಬ್ಬ ಬ್ಯುಸಿನೆಸ್ ಮ್ಯಾನ್ ಪಾತ್ರ ಮಾಡಿದ್ದು, ಆತ ಯಾವುದೋ ಒಂದು ಚಟಕ್ಕೆ ಬಿದ್ದಾಗ ಏನೆಲ್ಲ ಆಗುತ್ತೆ ಎಂಬುದೇ ಸಿನಿಮಾದ ಕತೆ’ ಎಂದಿದ್ದಾರೆ.

ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿರುವುದು ರೇಣುಕುಮಾರ್, ಎಡಿಟಿಂಗ್ ಮಾಡಿರುವುದು ನಾಗೇಂದ್ರ ಅರಸ್, ಶಂಕರ ರಾಮರೆಡ್ಡಿ ಸಹ ನಿರ್ಮಾಣ, ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಗಿರೀಶ್ ಅವರ ಸಂಕಲನ, ಪ್ರಶಾಂತ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ