1960ರಲ್ಲೇ ಚಂದ್ರಲೋಕಕ್ಕೆ ಕಾಲಿಟ್ಟಿದ್ದ ನರಸಿಂಹರಾಜು; ಇಲ್ಲಿದೆ ಅಚ್ಚರಿಯ ವಿಚಾರ
Narasimharaju: 1969ರಲ್ಲಿ ಮಾನವ ಸಹಿತ ಉಪಗ್ರವನ್ನು ಅಮೆರಿಕದವರು ಕಳುಹಿಸಿದ್ದರು. ಅಮೆರಿಕದ ಗಗನಯಾತ್ರಿ ನೀಲ್ ಆರ್ಮ್ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ. ಅದಕ್ಕೂ ಮೊದಲೇ ಹಾಸ್ಯನಟರಾದ ನರಸಿಂಹರಾಜು ಹಾಗೂ ಎಂಎಸ್ ಉಮೇಶ್ ಚಂದ್ರನಮೇಲೆ ತೆರಳಿದ್ದರು.
ಚಂದ್ರನ ಬಗ್ಗೆ ಅಧ್ಯಯನ ಮಾಡಬೇಕು ಎನ್ನುವ ಕನಸು ನನಸಾಗಿದೆ. ಭಾರತ ಕಳುಹಿಸಿದ ಉಪಗ್ರಹ ‘ಚಂದ್ರಯಾನ್ 3’ (Chandrayan 3) ಚಂದ್ರನ ದಕ್ಷಿಣದ ಧ್ರುವದ ಮೇಲೆ ಇಳಿದಿದೆ. ಚಂದ್ರನ ಈ ಭಾಗಕ್ಕೆ ಕಾಲಿರಿಸಿದ ಮೊದಲ ರಾಷ್ಟ್ರ ಎನ್ನುವ ಖ್ಯಾತಿ ಭಾರತಕ್ಕೆ ಸಿಕ್ಕಿದೆ. ಈ ಉಪಗ್ರಹ ಇಲ್ಲಿ ಅಧ್ಯಯನ ನಡೆಸಲಿದೆ. ಚಂದ್ರನ ಮೇಲೆ ಮಾನವ ಸಹಿತ ಉಪಗ್ರಹ ಕಳಿಸಿದವರು ಅಮೆರಿಕದವರು ಮಾತ್ರ. ಅಚ್ಚರಿಯ ವಿಚಾರ ಎಂದರೆ ಹಾಸ್ಯ ನಟ ನರಸಿಂಹರಾಜು (Narasimharaju) ಹಾಗೂ ಉಮೇಶ್ ಅವರು 1960ರಲ್ಲೇ ಈ ಸಾಧನೆ ಮಾಡಿದ್ದರು!
1969ರಲ್ಲಿ ಮಾನವ ಸಹಿತ ಉಪಗ್ರಹವನ್ನು ಅಮೆರಿಕದವರು ಕಳುಹಿಸಿದ್ದರು. ಅಮೆರಿಕದ ಗಗನಯಾತ್ರಿ ನೀಲ್ ಆರ್ಮ್ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ. ಅದಕ್ಕೂ ಮೊದಲೇ ಹಾಸ್ಯನಟರಾದ ನರಸಿಂಹರಾಜು ಹಾಗೂ ಎಂಎಸ್ ಉಮೇಶ್ ಚಂದ್ರನಮೇಲೆ ತೆರಳಿದ್ದರು. ಹೀಗೊಂದು ದೃಶ್ಯ ‘ಮಕ್ಕಳ ರಾಜ್ಯ’ ಸಿನಿಮಾದಲ್ಲಿ ಬರುತ್ತದೆ.
ನರಸಿಂಹರಾಜು ಹುಟ್ಟಿದ್ದು 1923ರಲ್ಲಿ. 1954ರಲ್ಲಿ ‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅವರು ಕಾಲಿಟ್ಟರು. ನಂತರ ಹಲವು ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದರು. 1960ರಲ್ಲಿ ರಿಲೀಸ್ ಆದ ‘ಮಕ್ಕಳ ರಾಜ್ಯ’ ಸಿನಿಮಾ ಗಮನ ಸೆಳೆಯಿತು. ಬಿಆರ್ ಪಂತುಲು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಬರುವ ದೃಶ್ಯವೊಂದು ಈಗ ವೈರಲ್ ಆಗುತ್ತಿದೆ.
ವಿಜ್ಞಾನಿಯೋರ್ವ ಚಂದ್ರಗ್ರಹಕ್ಕೆ ತೆರಳುವ ಕನಸು ಕಂಡಿರುತ್ತಾನೆ. ಇದಕ್ಕೆ ಯಾವುದೇ ಮನುಷ್ಯರು ಮುಂದೆ ಬರದ ಕಾರಣ ನಾಯಿಯೊಂದಕ್ಕೆ ತರಬೇತಿ ನೀಡುತ್ತಾನೆ. ಆದರೆ, ನಾಯಿ ಓಡಿ ಹೋಗುತ್ತದೆ. ಆಗ ಆ ವಿಜ್ಞಾನಿಗೆ ಸಿಗೋದು ನರಸಿಂಹರಾಜು ಹಾಗೂ ಉಮೇಶ್. ಇಬ್ಬರನ್ನೂ ಒಂದು ವಿಮಾನದಲ್ಲಿ ಕೂರಿಸಿ ಚಂದ್ರ ಲೋಕಕ್ಕೆ ಕಳಿಸುತ್ತಾನೆ ವಿಜ್ಞಾನಿ. ಚಂದ್ರನ ಮೇಲೆ ಉಮೇಶ್ ಹಾಗೂ ನರಸಿಂಹರಾಜು ಕಾಲಿಡುತ್ತಾರೆ. ಅಲ್ಲಿನ ವ್ಯಕ್ತಿಗಳನ್ನು ಭೇಟಿ ಮಾಡುತ್ತಾರೆ.
(ವಿಡಿಯೋದಲ್ಲಿ 1:37 ಗಂಟೆಯಿಂದ ಚಂದ್ರಯಾನಕ್ಕೆ ಸಂಬಂಧಿಸಿದ ದೃಶ್ಯಗಳು ಇವೆ)
ಇದನ್ನೂ ಓದಿ: ಹಾಸ್ಯ ನಟ ನರಸಿಂಹರಾಜು ಜನ್ಮ ಶತಮಾನೋತ್ಸವ; ವರ್ಷಪೂರ್ತಿ ನಡೆಯಲಿದೆ ಕಾರ್ಯಕ್ರಮ
ಭೂಮಿಯ ಮೇಲೆ ಜನರು ಸಿಟ್ಟಾಗುತ್ತಾರೆ. ಹೋದವರು ಬಂದಿಲ್ಲ ಎಂದು ವಿಜ್ಞಾನಿಯನ್ನು ಕೊಂದು ಬಿಡುತ್ತಾರೆ. ಇನ್ನೇನು ವಿಜ್ಞಾನಿ ಕಣ್ಮುಚ್ಚಬೇಕು ಎನ್ನುವಾಗ ನರಸಿಂಹರಾಜು-ಉಮೇಶ್ ಮರಳಿ ಬರುತ್ತಾರೆ. ‘ನಾನು ಕಣ್ಣಿಮುಚ್ಚಿದರೂ ಇನ್ಯಾರೋ ಶೋಧನೆ ಮಾಡುತ್ತಾರೆ. ಸಂಶೋಧನೆ ನನಗೆ ಮಾತ್ರ ಸೀಮಿತ ಅಲ್ಲ’ ಎಂದು ವಿಜ್ಞಾನಿ ಕಣ್ಣು ಮುಚ್ಚುತ್ತಾನೆ. ಈ ರೀತಿಯ ದೃಶ್ಯವೊಂದು ಈಗ ವೈರಲ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:59 am, Sat, 26 August 23