ಕೊನೆ ಉಸಿರಿರುವವರೆಗೂ ನಾನೂ ಪವಿತ್ರಾ ಲೋಕೇಶ್ ಒಟ್ಟಿಗೆ ಇರ್ತೀವಿ: ನರೇಶ್

|

Updated on: Jun 03, 2023 | 9:30 PM

Naresh-Pavitra Lokesh: ನರೇಶ್ ಮತ್ತು ಪವಿತ್ರಾ ತಮ್ಮ ಮತ್ತೆ ಮದುವೆ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಈ ಸಮಯ ಮಾತನಾಡಿದ ನರೇಶ್, ಕೊನೆಯ ಉಸಿರಿರುವವರೆಗೆ ಪವಿತ್ರಾ ಲೋಕೇಶ್ ಹಾಗೂ ನಾನೂ ಒಟ್ಟಿಗೆ ಇರಲಿದ್ದೇವೆ ಎಂದಿದ್ದಾರೆ.

ಕೊನೆ ಉಸಿರಿರುವವರೆಗೂ ನಾನೂ ಪವಿತ್ರಾ ಲೋಕೇಶ್ ಒಟ್ಟಿಗೆ ಇರ್ತೀವಿ: ನರೇಶ್
ನರೇಶ್-ಪವಿತ್ರಾ
Follow us on

ಕಳೆದ ವರ್ಷ ತಮ್ಮ ಸಂಬಂಧದ ಕುರಿತಾಗಿ ಎದ್ದಿದ್ದ ವಿವಾದಗಳಿಂದ ಸುದ್ದಿಯಾಗಿದ್ದ ಪವಿತ್ರಾ ಲೋಕೇಶ್ (Pavitra Lokesh) ಹಾಗೂ ನರೇಶ್ (Naresh) ಅದೇ ವಿಷಯ ಆಧರಿಸಿ ಮಳ್ಳಿ ಪೆಳ್ಳಿ (Malli Pelli) ಹೆಸರಿನ ಸಿನಿಮಾ ಮಾಡಿದ್ದಾರೆ. ಸಿನಿಮಾವನ್ನು ಕನ್ನಡದಲ್ಲಿ ಮತ್ತೆ ಮದುವೆ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಸಿನಿಮಾ ಕುರಿತ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ಈ ಜೋಡಿ ತಮ್ಮ ಪ್ರೀತಿ, ತಮ್ಮ ಬಯಕೆಗಳ ಬಗ್ಗೆಯೂ ಮಾತನಾಡಿದರು. ನಾವಿಬ್ಬರೂ ಲಿವಿನ್ ರಿಲೇಶನ್​ಶಿಪ್​ನಲ್ಲಿದ್ದೇವೆ, ನನ್ನ ಕೊನೆಯ ಉಸಿರು ಇರುವವರೆಗೆ ಪವಿತ್ರಾ ನಾನೂ ಒಟ್ಟಿಗೆ ಇರುತ್ತೇವೆ ಎಂದು ನಟ ನರೇಶ್ ಹೇಳಿದ್ದಾರೆ.

ಪವಿತ್ರಾಗಾಗಿ ಕನ್ನಡ ಹಾಡು ಹಾಡನ್ನು ನರೇಶ್ ಹಾಡಿದರೆ ತೆಲುಗು ಹಾಡೊಂದನ್ನು ಪವಿತ್ರಾ ಲೋಕೇಶ್ ಹಾಡಿದರು. ಅದಾದ ಬಳಿಕ, ನಾವು ಕರ್ನಾಟಕದಲ್ಲಿ ಪ್ರವಾಸ ಕೈಗೊಂಡರೆ ಹಂಪಿಗೆ ನರೇಶ್ ಅವರನ್ನು ಕರೆದುಕೊಂಡು ಹೋಗುತ್ತೇನೆ ಎಂದರು ಪವಿತ್ರಾ, ಈಗಾಗಲೇ ನರೇಶ್ ಅವರಿಗೆ ಮೈಸೂರು ದಸರಾ ತೋರಿಸಿದ್ದೇನೆ. ಮುಂದೆ ನಾವಿಬ್ಬರೂ ವಿಶ್ವಪರ್ಯಟನೆಗೆ ಹೋಗುವ ಇರಾದೆಯೂ ಇದೆ” ಎಂದರು. ಇನ್ನು ನರೇಶ್, ನನಗೆ ಪವಿತ್ರಾ ಲೋಕೇಶ್ ತಮ್ಮ ನ್ಯಾಚುರಲ್​ನಲ್ಲಿ ಇರುವುದು ನನಗೆ ಇಷ್ಟ ಎಂದರು. ಆದರೆ ಈ ಸಿನಿಮಾದಲ್ಲಿ ತುಸು ಬೋಲ್ಡ್ ಆಗಿಯೇ ಪವಿತ್ರಾ ನಟಿಸಿದ್ದಾರೆಂದರು ಸಹ.

ವಯಸ್ಸಾದವರ ನಡುವಿನ ಪ್ರೀತಿಯ ಬಗ್ಗೆ ಮಾತನಾಡಿದ ನರೇಶ್, ಇದು ಎಲ್ಲರಿಗೂ ಆಗುತ್ತಿದೆ. ವಯಸ್ಸಾದ ಬಳಿಕ ಪ್ರೇಮಿಸಿದ ಮದುವೆ ಆದ ಘಟನೆಗಳು ಹಲವು ನಡೆಯುತ್ತಿವೆ. ಹಲವು ಪ್ರಕರಣಗಳು ಕೋರ್ಟ್​ನಲ್ಲಿವೆ. ಇತ್ತೀಚೆಗಷ್ಟೆ ಆಶಿಷ್ ವಿದ್ಯಾರ್ಥಿ ತಮ್ಮ 58ನೇ ವಯಸ್ಸಿನಲ್ಲಿ ಮದುವೆ ಆಗಿರುವ ಬಗ್ಗೆ ಮಾತನಾಡಿ ಅವರಿಗೆ ಶುಭಾಶಯಗಳನ್ನು ಹೇಳಿದರು ನರೇಶ್, ಇದೆಲ್ಲ ಈಗ ಸಾಮಾನ್ಯವಾಗಿದೆ. ನಮ್ಮ ಸಿನಿಮಾ ಸಹ ಇದೇ ವಿಷಯದ ಬಗ್ಗೆ ಮಾತನಾಡುತ್ತದೆ. ಸಿನಿಮಾ ನೋಡಿದ ಹಲವರು ನನಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮಗಳ ಜೀವನದಲ್ಲಿಯೂ ಇದೇ ರೀತಿಯ ಘಟನೆ ನಡೆದಿರುವುದಾಗಿ ಹೇಳಿಕೊಂಡಿದ್ದಾರೆ ಎಂದರು.

ಮಳ್ಳಿ ಪೆಳ್ಳಿ ಸಿನಿಮಾಕ್ಕೆ ತೆಲುಗಿನಲ್ಲಿ ಉತ್ತಮ ವಿಮರ್ಶೆಗಳು ಪ್ರಾಪ್ತವಾಗಿವೆ ಎಂದ ನರೇಶ್, ಯಾವುದೇ ಪ್ರಮುಖ ವೆಬ್​ಸೈಟ್ ಅಥವಾ ಯೂಟ್ಯೂಬ್ ಚಾನೆಲ್ ತೆಗೆದು ನೋಡಿದರೂ ಸಹ ಮಳ್ಳಿ ಪೆಳ್ಳಿ ಸಿನಿಮಾಕ್ಕೆ ಉತ್ತಮ ವಿಮರ್ಶೆಯೇ ವ್ಯಕ್ತವಾಗಿದೆ. ಜನರು ಸಹ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ತೆಲುಗಿನಲ್ಲಿ ಸಿನಿಮಾ ಚೆನ್ನಾಗಿ ಹೋಗತ್ತಿದೆ. ಇದೀಗ ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದ್ದು, ಬೆಂಗಳೂರಿನ ಏಳೆಂಟು ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ, ಕರ್ನಾಟಕದ ಜನ ಸಿನಿಮಾವನ್ನು ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇದನ್ನೂ ಓದಿ:ಪವಿತ್ರಾ ಲೋಕೇಶ್ ಶಿಕ್ಷಣ, ಪಿಎಚ್​ಡಿ ಬಗ್ಗೆ ಹೆಮ್ಮೆಯಿಂದ ಹೇಳಿದ ನರೇಶ್

ಇನ್ನು ಮತ್ತೆ ಮದುವೆ ಸಿನಿಮಾಕ್ಕೆ ತಾವೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವುದಾಗಿ ಹೇಳಿದ ನರೇಶ್ ನಾನು ಮೂರು ದಿನಗಳ ಕಾಲ ಸಮಯ ತೆಗೆದುಕೊಂಡು ಈ ಸಿನಿಮಾಕ್ಕೆ ಡಬ್ಬಿಂಗ್ ಮಾಡಿದ್ದೇನೆ. ಆರಂಭದಲ್ಲಿ ಬಹಳ ಕಷ್ಟವಾಯಿತು ಆದರೆ ವರದರಾಜು ಅವರ ಸಹಾಯದಿಂದ ಡಬ್ಬಿಂಗ್ ಸಾಧ್ಯವಾಯಿತು. ಎಲ್ಲ ಮುಗಿಸಿ ನಾನು ಕನ್ನಡ ಮಾತನಾಡುವುದನ್ನು ನಾನೇ ಕೇಳಿದಾಗ ಬಹಳ ಹೆಮ್ಮೆ ಎನಿಸಿತು. ನನ್ನ ಜೀವನದ ತುಸು ಸಮಯವನ್ನು ಕರ್ನಾಟದಲ್ಲಿ ಕಳೆದಿದ್ದೇನಾದ್ದರಿಂದ ಕನ್ನಡ ತುಸು ಬರುತ್ತದೆ. ಆದರೂ ನನ್ನಿಂದ ಉಚ್ಛಾರಣೆ ತಪ್ಪಾಗಿದ್ದರೆ ಕ್ಷಮಿಸಿ ಎಂದರು ನರೇಶ್. ಮತ್ತೆ ಮದುವೆ ಜೂನ್ 9ಕ್ಕೆ ಬಿಡುಗಡೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ