AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವಿತ್ರಾ ಲೋಕೇಶ್ ಶಿಕ್ಷಣ, ಪಿಎಚ್​ಡಿ ಬಗ್ಗೆ ಹೆಮ್ಮೆಯಿಂದ ಹೇಳಿದ ನರೇಶ್

Mathe Maduve: ಪವಿತ್ರಾ ಲೋಕೇಶ್ ಶಿಕ್ಷಣದ ಬಗ್ಗೆ ಹಾಗೂ ಅವರು ಮಾಡುತ್ತಿರುವ ಪಿಎಚ್​ಡಿ ಸಂಶೋಧನೆ ಬಗ್ಗೆ ಹೆಮ್ಮೆಯಿಂದ ಹೇಳಿದರು ನಟ ನರೇಶ್.

ಪವಿತ್ರಾ ಲೋಕೇಶ್ ಶಿಕ್ಷಣ, ಪಿಎಚ್​ಡಿ ಬಗ್ಗೆ ಹೆಮ್ಮೆಯಿಂದ ಹೇಳಿದ ನರೇಶ್
ಮಳ್ಳಿ ಪೆಳ್ಳಿ
ಮಂಜುನಾಥ ಸಿ.
|

Updated on: Jun 03, 2023 | 6:57 PM

Share

ತೆಲುಗು ನಟ ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಅವರುಗಳ ಜೀವನವನ್ನು ಆಧರಿಸಿದ ಮಳ್ಳಿ ಪೆಳ್ಳಿ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಆಂಧ್ರ-ತೆಲಂಗಾಣಗಳಲ್ಲಿ ಬಿಡುಗಡೆ ಆಗಿದೆ. ಇದೀಗ ಮಳ್ಳಿ ಪೆಳ್ಳಿಯ (Malli Pelli) ಕನ್ನಡ ಆವೃತ್ತಿ ಮತ್ತೆ ಮದುವೆ (Mathe Maduve) ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನರೇಶ್ ಹಾಗೂ ಪವಿತ್ರಾ ಸಜ್ಜಾಗಿದ್ದು, ಸಿನಿಮಾದ ಪ್ರಚಾರಕ್ಕಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ನರೇಶ್, ಪವಿತ್ರಾ ಲೋಕೇಶ್​ ಅವರ ಶಿಕ್ಷಣ ಹಾಗೂ ಅವರು ಮಾಡುತ್ತಿರುವ ಪಿಎಚ್​ಡಿ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು.

”ಪವಿತ್ರಾ ಲೋಕೇಶ್ ಉತ್ತಮ ಶೈಕ್ಷಣಿಕೆ ಹಿನ್ನೆಲೆ ಇರುವ ವ್ಯಕ್ತಿ. ಅವರು ಕನ್ನಡ ಹಾಗೂ ಇಂಗ್ಲೀಷ್ ಎರಡರಲ್ಲೂ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಅವರ ಶಿಕ್ಷಣದ ಬಗ್ಗೆ ನನಗೆ ಹೆಮ್ಮೆ ಇದೆ. ಏಕೆಂದರೆ ನಾನು ಹೆಚ್ಚು ಕಲಿತವನಲ್ಲ. ನಾನು ಗೌರವ ಡಾಕ್ಟರೇಟ್ ಪಡೆದಿದ್ದೇನೆ ಆದರೆ ಅದು ಭಿನ್ನ. ಪವಿತ್ರಾಗೆ ಸಿನಿಮಾ ಬಿಟ್ಟರೆ ಓದು ಮಾತ್ರವೇ ಗೊತ್ತು. ಆಕೆಯ ಬಳಿ ಪುಸ್ತಕಗಳ ಸಂಗ್ರಹವಿದೆ. ಪುಸ್ತಕಗಳನ್ನು ಓದುತ್ತಿರುತ್ತಾಳೆ. ಕಲಿಯುವುದರಲ್ಲಿ ಬಹಳ ಆಸಕ್ತಿ ಅವರಿಗೆ ಇದೆ. ಈಗ ವೀಣಾ ವಾದನ ಕಲಿಯುತ್ತಿದ್ದಾರೆ. ಅದರಲ್ಲಿಯೂ ಪದವಿ ಗಳಿಸುವ ಬಯಕೆ ಹೊಂದಿದ್ದಾರೆ” ಎಂದರು ನರೇಶ್.

”ಈಗ ಅವರು ಪಿಎಚ್​ಡಿ ಮಾಡಲು ಮುಂದಾಗಿದ್ದಾರೆ. ರಂಗಭೂಮಿಯಲ್ಲಿ ಮಹಿಳೆಯರು ವಿಷಯವಾಗಿ ಪಿಎಚ್​ಡಿ ಮಾಡಲು ಮುಂದಾಗಿದ್ದು, ಈ ಬಗ್ಗೆ ನನ್ನ ಬಳಿ ಹೇಳಿದಾಗ ನನಗೆ ಬಹಳ ಖುಷಿಯಾಯಿತು. ಏಕೆಂದರೆ ನಾನೂ ಸಹ ಮಹಿಳಾ ನಿರ್ದೇಶಕಿಯ ಮಗ. ನನ್ನ ತಾಯಿ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಸ್ವತಃ ಪವಿತ್ರಾ ಲೋಕೇಶ್ ಸಹ ದೇವಸ್ಥಾನವೊಂದರ ಮೇಲೆ ಡಾಕ್ಯುಮೆಂಟರಿ ಮಾಡಿದ್ದಾರೆ. ಹಾಗಾಗಿ ಅವರು ಮಹಿಳೆ ಮತ್ತು ರಂಗಭೂಮಿ ಬಗ್ಗೆ ಪಿಎಚ್​ಡಿ ಮಾಡುವೆ ಎಂದಾಗ ಬಹಳ ಖುಷಿಯಾಯಿತು. ಅವರೊಟ್ಟಿಗೆ ನಾನೂ ಸಹ ಹಂಪಿ ವಿಶ್ವವಿದ್ಯಾಲಯಕ್ಕೆ ಹೋಗಿ ದಾಖಲಾತಿ ವೇಳೆ ಜೊತೆಗೆ ಇದ್ದೆ ಎಂದಿದ್ದಾರೆ ನರೇಶ್.

ಪವಿತ್ರಾ ಲೋಕೇಶ್​ಗೆ ಪ್ರತಿಭೆ ಇದೆ, ಅವರಿಗೆ ಶಕ್ತಿ ಇದೆ. ಹಾಗಾಗಿ ನಾನೂ ಅವರನ್ನು ಬೆಂಬಲಿಸುತ್ತಿದ್ದೇನೆ. ಅವರು ಒಳ್ಳೆಯದನ್ನೇ ಮಾಡುತ್ತಾರೆಂಬ ವಿಶ್ವಾಸ ನನಗೆ ಇದೆ. ಪಿಎಚ್​ಡಿಗೆ ಅವರು ಆಯ್ದುಕೊಂಡಿರುವ ವಿಷಯವೂ ನನಗೆ ಬಹಳ ಇಷ್ಟವಾಯಿತು. ಸ್ವತಃ ಮಹಿಳಾ ಸಾಧಕಿಯೊಬ್ಬರ ಮಗನು ನಾನಾಗಿರುವಾಗ ಮಹಿಳೆಯರ ಬಗ್ಗೆ ಮಾಡಲಾಗುತ್ತಿರುವ ಅಧ್ಯಯನಕ್ಕೆ ನಾನು ಬೆಂಬಲವಾಗಿ ನಿಲ್ಲುವುದು ನನ್ನ ಜವಾಬ್ದಾರಿ ಎನಿಸಿತು ಎಂದಿದ್ದಾರೆ ನಟ ನರೇಶ್.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಸಂಬಂಧದ ಬಗ್ಗೆ ಕಳೆದ ವರ್ಷ ಎದ್ದಿದ್ದ ವಿವಾದ ಹಾಗೂ ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿ ಈ ಇಬ್ಬರ ಮೇಲೆ ಮಾಡಿದ ಆರೋಪಗಳು ಆ ನಂತರ ನಡೆದ ಘಟನೆಗಳನ್ನು ಇರಿಸಿಕೊಂಡೆ ಮತ್ತೆ ಮದುವೆ ಸಿನಿಮಾ ಮಾಡಲಾಗಿದೆ. ಈಗಾಗಲೇ ಈ ಸಿನಿಮಾ ತೆಲುಗಿನಲ್ಲಿ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಅದೇ ಸಿನಿಮಾ ಕನ್ನಡದಲ್ಲಿ ಜೂನ್ 9ರಂದು ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ನರೇಶ್​ ಸ್ವತಃ ಡಬ್ಬಿಂಗ್ ಮಾಡಿದ್ದಾರಂತೆ. ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾದ ಎಂಎಸ್ ರಾಜು ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸ್ವತಃ ನರೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​