ಸುದೀಪ್ ಮುಂದಿನ ಸಿನಿಮಾಕ್ಕೆ ನಾಯಕಿ ಘೋಷಣೆ, ಪಕ್ಕದ ಚಿತ್ರರಂಗದಿಂದ ಬಂದ ಚೆಲುವೆ

Sudeep: ನಟ ಸುದೀಪ್ ದೊಡ್ಡ ಗ್ಯಾಪ್ ಬಳಿಕ ಮತ್ತೆ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಸುದೀಪ್​ರ ಮುಂದಿನ ಸಿನಿಮಾಕ್ಕೆ ನಾಯಕಿಯನ್ನು ಘೋಷಿಸಲಾಗಿದೆ.

ಸುದೀಪ್ ಮುಂದಿನ ಸಿನಿಮಾಕ್ಕೆ ನಾಯಕಿ ಘೋಷಣೆ, ಪಕ್ಕದ ಚಿತ್ರರಂಗದಿಂದ ಬಂದ ಚೆಲುವೆ
ಸುದೀಪ್-ಸಿಮ್ರತ್
Follow us
ಮಂಜುನಾಥ ಸಿ.
|

Updated on:Jun 03, 2023 | 10:08 PM

ಬಿಗ್​ಬಾಸ್ (Bigg Boss), ಕ್ರಿಕೆಟ್ (Cricket), ರಾಜಕೀಯ (Politics) ಇನ್ನಿತರೆ ಕಾರಣಗಳಿಂದ ವಿಕ್ರಾಂತ್ ರೋಣ (Vikrant Rona) ಸಿನಿಮಾದ ಬಳಿಕ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದ ನಟ ಸುದೀಪ್ (Sudeep) ಇತ್ತೀಚೆಗಷ್ಟೆ ತಮ್ಮ ಹೊಸ ಸಿನಿಮಾದ ಪ್ರೋಮೋ ಶೂಟ್ ಆರಂಭಿಸಿದ್ದಾರೆ. ಸುದೀಪ್​ರ 46ನೇ ಸಿನಿಮಾಕ್ಕೆ ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ಸಿನಿಮಾದಲ್ಲಿ ಸುದೀಪ್​ಗೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಇತ್ತು, ಅದಕ್ಕೀಗ ತೆರೆ ಬಿದ್ದಿದೆ. ಚಿತ್ರತಂಡವು ಸುದೀಪ್​ರ ಹೊಸ ಸಿನಿಮಾದ ನಾಯಕಿಯನ್ನು ಘೋಷಿಸಿದೆ.

ತೆಲುಗಿನ ಸಣ್ಣ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿ ತನ್ನ ಲುಕ್ಸ್ ಹಾಗೂ ನಟನಾ ಪ್ರತಿಭೆಯಿಂದ ಗಮನ ಸೆಳೆದು ಬಾಲಿವುಡ್​ನಲ್ಲೂ ಅವಕಾಶ ಗಿಟ್ಟಿಸಿಕೊಂಡಿರುವ ಸಿಮ್ರತ್ ಕೌರ್ ಅನ್ನು ಸುದೀಪ್ ಎದುರು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ವಿ ಕ್ರಿಯೇಶನ್ಸ್​ನ ನಿರ್ಮಾಪಕ ಕಲೈಪುಲಿ ಎಸ್ ತನು ಟ್ವೀಟ್ ಮಾಡಿದ್ದು, ”ಕಿಚ್ಚ 46ಗೆ ನಿಮಗೆ ಸ್ವಾಗತ. ನೀವಿಗ ನಮ್ಮ ಕುಟುಂಬದ ಸದಸ್ಯೆ, ನಾವುಗಳು ದೂರದ ಪಯಣ ಸಾಗಬೇಕಿದೆ” ಎಂದಿದ್ದಾರೆ.

ಪಂಜಾಬಿ ಕುಟುಂಬದ ಸಿಮ್ರತ್ ಕೌರ್ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಬಿಎಸ್​ಸಿ ಕಂಪ್ಯೂಟರ್ ಸೈನ್ಸ್ ಕಲಿತಿರುವ ಸಿಮ್ರತ್, ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. 2017 ರಲ್ಲಿ ಪ್ರೇಮತೋ ಮೀ ಕಾರ್ತಿಕ್ ಹೆಸರಿನ ರೊಮ್ಯಾಂಟಿಕ್ ತೆಲುಗು ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಸಿಮ್ರತ್, ಆ ಬಳಿಕ ಪರಿಚಯಂ ಹೆಸರಿನ ಮತ್ತೊಂದು ಸಣ್ಣ ತೆಲುಗು ಸಿನಿಮಾದಲ್ಲಿ ನಟಿಸಿದರು. ಅದಾದ ಬಳಿಕ ಹಿಂದಿಯ ಮಹಿಳಾ ಪ್ರಧಾನ ಥ್ರಿಲ್ಲರ್ ಸಿನಿಮಾ ಸೋನಿಯಲ್ಲಿ ನಟಿಸಿದರು. ಬಳಿಕ ಮತ್ತೆ ತೆಲುಗಿಗೆ ಬಂದು ಡರ್ಟಿ ಹ್ಯಾರಿ ಹೆಸರಿನ ಹಿಟ್ ಸಿನಿಮಾದಲ್ಲಿ ನಟಿಸಿದರು. ಬಳಿಕ ನಾಗಾರ್ಜುನ ಹಾಗೂ ಅವರ ಪುತ್ರ ನಾಗ್ ಚೈತನ್ಯ ಒಟ್ಟಿಗೆ ನಟಿಸಿದ್ದ ಬಂಗಾರ್ರಾಜು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದೀಗ ಹಿಂದಿಯಲ್ಲಿ ಗದರ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕನ್ನಡದಲ್ಲಿ ಸುದೀಪ್​ ಎದುರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ:Kichcha Sudeep: ಸುದೀಪ್​ ಹೊಸ ಸಿನಿಮಾ ಬಗ್ಗೆ ಸಿಕ್ತು ಅಪ್​ಡೇಟ್​; ‘ಕಬಾಲಿ’ ನಿರ್ಮಾಪಕರ ಜೊತೆ ಕೈ ಜೋಡಿಸಿದ ಕಿಚ್ಚ

ನಟ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ವಿಕ್ರಾಂತ್ ರೋಣ ಹಿಟ್ ಆದ ಬಳಿಕ ಬಹಳ ದೊಡ್ಡ ಬ್ರೇಕ್ ಅನ್ನೇ ಸುದೀಪ್ ತೆಗೆದುಕೊಂಡಿದ್ದರು. ಈ ನಡುವೆ ಎರಡು ಚಿತ್ರಕತೆಗಳಿಗೆ ಸುದೀಪ್ ಓಕೆ ಎಂದಿದ್ದರು. ಅನೂಪ್ ಭಂಡಾರಿ ನಿರ್ದೇಶನದ ಒಂದು ಸಿನಿಮಾ ಹಾಗೂ ತಮಿಳಿನ ಸ್ಟಾರ್ ನಿರ್ದೇಶಕರ ಒಂದು ಸಿನಿಮಾಕ್ಕೆ ಸುದೀಪ್ ಎಸ್ ಅಂದಿದ್ದರು. ಇದೀಗ ಮೂಲಗಳ ಪ್ರಕಾರ ತಮಿಳು ನಿರ್ದೇಶಕನ ಜೊತೆಗೆ ಸುದೀಪ್ ಸಿನಿಮಾ ಮಾಡುತ್ತಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿರಲಿದೆ. ಸಿನಿಮಾದ ಟೈಟಲ್ ಟೀಸರ್ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:07 pm, Sat, 3 June 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ