AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prashanth Neel Birthday: ಪ್ರಶಾಂತ್ ನೀಲ್​ಗೆ​ ಹುಟ್ಟುಹಬ್ಬದ ಸಂಭ್ರಮ; ಸ್ಟಾರ್​ ಡೈರೆಕ್ಟರ್​ ಈ ಬಾರಿ ಜನ್ಮದಿನ ಸೆಲೆಬ್ರೇಟ್​ ಮಾಡಿದ್ದು ಯಾರ ಜೊತೆ?

Happy Birthday Prashanth Neel: ಎಲ್ಲರೂ ಒಟ್ಟಾಗಿ ಕೇಕ್​ ಕಟ್​ ಮಾಡುತ್ತಿರುವ ಫೋಟೋ ವೈರಲ್​ ಆಗಿದೆ. ಅಭಿಮಾನಿಗಳು ಪ್ರಶಾಂತ್​ ನೀಲ್​ಗೆ ವಿಶ್​ ಮಾಡುತ್ತಿದ್ದಾರೆ.

Prashanth Neel Birthday: ಪ್ರಶಾಂತ್ ನೀಲ್​ಗೆ​ ಹುಟ್ಟುಹಬ್ಬದ ಸಂಭ್ರಮ; ಸ್ಟಾರ್​ ಡೈರೆಕ್ಟರ್​ ಈ ಬಾರಿ ಜನ್ಮದಿನ ಸೆಲೆಬ್ರೇಟ್​ ಮಾಡಿದ್ದು ಯಾರ ಜೊತೆ?
ಪ್ರಶಾಂತ್​ ನೀಲ್​ ಬರ್ತ್​ಡೇ ಸೆಲೆಬ್ರೇಷನ್​
ಮದನ್​ ಕುಮಾರ್​
|

Updated on: Jun 04, 2023 | 7:27 AM

Share

ಕನ್ನಡದ ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel) ಅವರು ದೇಶಾದ್ಯಂತ ಖ್ಯಾತಿ ಹೊಂದಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಿಂದ ಅವರಿಗೆ ಈ ಪರಿ ಪ್ರಸಿದ್ಧಿ ಸಿಕ್ಕಿದೆ. ಇಂದು (ಜೂನ್​ 4) ಅವರ ಜನ್ಮದಿನವನ್ನು (Prashanth Neel Birthday) ಅಭಿಮಾನಿಗಳು ಸೆಲೆಬ್ರೇಟ್​ ಮಾಡುತ್ತಿದ್ದಾರೆ. ನಿನ್ನೆ ರಾತ್ರಿಯೇ ಸೆಲೆಬ್ರೇಷನ್​ ಶುರುವಾಗಿದೆ. ವಿಶೇಷ ಎಂದರೆ, ಈ ಬಾರಿ ಪ್ರಶಾಂತ್ ನೀಲ್​ ಅವರು ಪ್ಯಾನ್ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಜೊತೆ ‘ಹೊಂಬಾಳೆ ಫಿಲ್ಮ್ಸ್​’ನ ವಿಜಯ್​ ಕಿರಗಂದೂರು ಕೂಡ ಸಾಥ್​ ನೀಡಿದ್ದಾರೆ. ಎಲ್ಲರೂ ಒಟ್ಟಾಗಿ ಕೇಕ್​ ಕಟ್​ ಮಾಡುತ್ತಿರುವ ಫೋಟೋ ವೈರಲ್​ ಆಗಿದೆ. ಅಭಿಮಾನಿಗಳು ಪ್ರಶಾಂತ್​ ನೀಲ್​ಗೆ ವಿಶ್​ ಮಾಡುತ್ತಿದ್ದಾರೆ. ಪ್ರಸ್ತುತ ‘ಸಲಾರ್​’ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

‘ಕೆಜಿಎಫ್​’ ಸಿನಿಮಾ ಬಾಕ್ಲ್​ ಬಸ್ಟರ್​ ಹಿಟ್​ ಆಗುತ್ತಿದ್ದಂತೆಯೇ ಪ್ರಶಾಂತ್​ ನೀಲ್​ ಅವರಿಗೆ ಟಾಲಿವುಡ್​ನಿಂದ ಸಾಕಷ್ಟು ಆಫರ್​ ಬರಲು ಆರಂಭ ಆಯಿತು. ಆ ಪೈಕಿ ಅವರು ಕೆಲವೇ ಪ್ರಾಜೆಕ್ಟ್​ಗಳಿಗೆ ಸಹಿ ಮಾಡಿದರು. ಪ್ರಭಾಸ್​ ಮತ್ತು ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಸಲಾರ್​’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಸಿನಿಮಾದ ಕೆಲಸಗಳು ಪೂರ್ಣಗೊಂಡ ಬಳಿಕ ಜೂನಿಯರ್​ ಎನ್​ಟಿಆರ್​ ನಟನೆಯ 31ನೇ ಸಿನಿಮಾಗೆ ಅವರು ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ‘ಸಲಾರ್​’ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಕೆಲಸದ ಮಧ್ಯೆ ಬ್ರೇಕ್​ ಪಡೆದು ಈ ಚಿತ್ರತಂಡದವರು ಪ್ರಶಾಂತ್​ ನೀಲ್​ ಅವರ ಬರ್ತ್​ಡೇ ಸೆಲೆಬ್ರೇಟ್​ ಮಾಡಿದ್ದಾರೆ.

ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಡಿವಿವಿ ಎಂಟರ್​ಟೇನ್​ಮೆಂಟ್ಸ್​’ ಕೂಡ ಪ್ರಭಾಸ್​ಗೆ ವಿಶ್​ ಮಾಡಿದೆ. ಜೂನಿಯರ್​ ಎನ್​ಟಿಆರ್​ ಹಾಗೂ ಪ್ರಭಾಸ್​ ಫ್ಯಾನ್ಸ್​ ಪೇಜ್​ಗಳಲ್ಲಿ ಪ್ರಶಾಂತ್​ ನೀಲ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹರಿದುಬಂದಿದೆ. ತೆಲುಗು ಚಿತ್ರರಂಗದಲ್ಲಿ ಪ್ರಶಾಂತ್​ ನೀಲ್​ ಅವರಿಗೆ ಸಖತ್​ ಬೇಡಿಕೆ ಇದೆ. ‘ಕೆಜಿಎಫ್​: ಚಾಪ್ಟರ್​ 2’ ಗೆದ್ದ ಬಳಿಕ ಪ್ರಭಾಸ್​ ಅವರು ಪರಭಾಷೆಯ ಹೀರೋಗಳ ಜೊತೆ ಸಿನಿಮಾ ಮಾಡಲು ಮುಂದಾಗಿದ್ದರಿಂದ ಕೆಲವರು ಟೀಕೆ ಮಾಡಿದ್ದರು. ಅವರು ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಬಾರದು ಎಂದು ಬಹುತೇಕರು ಅಭಿಪ್ರಾಯಪಟ್ಟರು. ಈ ಬಗ್ಗೆ ಈಗಲೂ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ.

ಇದನ್ನೂ ಓದಿ: ನಿರ್ದೇಶಕ ಪ್ರಶಾಂತ್ ನೀಲ್​ರ ಸಲಾರ್ ಸಿನಿಮಾದ 100ರ ಸೀಕ್ರೇಟ್ ಏನು?

ಇನ್ನು, ‘ಕೆಜಿಎಫ್​: ಚಾಪ್ಟರ್​ 3’ ಬಗ್ಗೆ ಬಹಳ ನಿರೀಕ್ಷೆ ಇದೆ. ಆ ಬಗ್ಗೆ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಅದಕ್ಕೂ ಮುನ್ನ ‘ಸಲಾರ್​’ ಟೀಸರ್​ ನೋಡಲು ಕಾತುರು ಹೆಚ್ಚಿದೆ. ಶೀಘ್ರದಲ್ಲೇ ಈ ಟೀಸರ್​ ಬಿಡುಗಡೆ ಆಗಲಿದೆ ಎಂಬ ಸುದ್ದಿ ಕೇಳಿಬಂದಿದೆ. ಪ್ರಶಾಂತ್​ ನೀಲ್​ ಅವರ ಹುಟ್ಟುದ ಪ್ರಯುಕ್ತ ಹಳೇ ಸಂದರ್ಶನದ ತುಣುಕುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕವೂ ನೆಚ್ಚಿನ ನಿರ್ದೇಶಕನಿಗೆ ಫ್ಯಾನ್ಸ್​ ಶುಭಾಶಯ ತಿಳಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್