ಜೀವನದಲ್ಲಿ ಸುದೀಪ್ ಅವರಂತಹ ವ್ಯಕ್ತಿ ಸಿಕ್ಕಿದ್ದು ನನ್ನ ಪುಣ್ಯ; ನವೀನ್ ಚಂದ್ರ

ನವೀನ್ ಚಂದ್ರ 'ಮಾರ್ಕ್' ಚಿತ್ರದ ಮೂಲಕ ಕನ್ನಡಕ್ಕೆ ಪರಿಚಿತರಾಗಿ, ಸುದೀಪ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಸುದೀಪ್ ನೀಡಿದ ಸಹಾಯವನ್ನು ಸ್ಮರಿಸಿದ್ದಾರೆ. ಬಳ್ಳಾರಿಯಲ್ಲಿ ಹುಟ್ಟಿ ಬೆಳೆದ ನವೀನ್, ಸ್ಪಷ್ಟ ಕನ್ನಡ ಮಾತನಾಡುತ್ತಾರೆ. ತೆಲುಗು-ತಮಿಳು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದರೂ, ಕನ್ನಡದೊಂದಿಗಿನ ತಮ್ಮ ನಂಟನ್ನು ಮರೆತಿಲ್ಲ ಎಂದು ಹೇಳಿದ್ದಾರೆ.

ಜೀವನದಲ್ಲಿ ಸುದೀಪ್ ಅವರಂತಹ ವ್ಯಕ್ತಿ ಸಿಕ್ಕಿದ್ದು ನನ್ನ ಪುಣ್ಯ; ನವೀನ್ ಚಂದ್ರ
ನವೀನ್-ಸುದೀಪ್
Edited By:

Updated on: Jan 01, 2026 | 8:38 AM

ನವೀನ್ ಚಂದ್ರ ಬಗ್ಗೆ ಅನೇಕರಿಗೆ ತಿಳಿದಿದೆ. ಅವರು ತಮಿಳು ನಟ. ಅವರು ಕನ್ನಡ ಚಿತ್ರರಂಗಕ್ಕೂ ಪರಿಚಯ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಮಾರ್ಕ್’ ಸಿನಿಮಾ. ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ಅವರು ಜನಪ್ರಿಯತೆ ಪಡೆದರು. ಅವರು ಸ್ಪಷ್ಟ ಕನ್ನಡ ಮಾತನಾಡುತ್ತಾರೆ. ಅವರು ಈಗ ಒಂದು ವಿಷಯ ರಿವೀಲ್ ಮಾಡಿದ್ದಾರೆ. ಸುದೀಪ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

‘ಮಾರ್ಕ್’ ಚಿತ್ರದ ಹುಬ್ಬಳ್ಳಿ ಈವೆಂಟ್​​ನಲ್ಲಿ ನವೀನ್ ಚಂದ್ರ ಮಾತನಾಡಿದ್ದರು. ಈ ವೇಳೆ ಅವರು ಒಂದು ವಿಷಯ ಹಂಚಿಕೊಂಡರು. ಅದು ಈಗ ವೈರಲ್ ಆಗಿದೆ ‘ಮಧ್ಯಾಹ್ನ 2 ಗಂಟೆವರೆಗೆ ಚೆನ್ನೈನಲ್ಲಿದ್ದೆ. ಹುಬ್ಬಳ್ಳಿಗೆ ಬರಬೇಕು, ಹೇಗೆ ಬರಬೇಕು ಗೊತ್ತಾಗಲಿಲ್ಲ. ರಸ್ತೆ ಮೂಲಕವಂತೂ ಬರೋಕೆ ಸಾಧ್ಯವೇ ಇರಲಿಲ್ಲ. ಒಂದು ಕಾಲ್ ಬಂತು. ನೀವು ಇಲ್ಲಿ ಬರಬೇಕು ಎಂದರು ಸುದೀಪ್. ಸುದೀಪ್ ಸರ್ ನಿಮ್ಮ ಮನಸ್ಸು ದೊಡ್ಡದು. ನಾಲ್ಕೂವರೆಗೆ ಚೆನ್ನೈ ಬಿಟ್ಟೆ. 8 ಗಂಟೆಗೆ ಇಲ್ಲಿದ್ದೇನೆ. ಇದಕ್ಕೆ ಸುದೀಪ್ ಕಾರಣ’ ಎಂದರು ನವೀನ್ ಚಂದ್ರ.

‘ನಮ್ಮ ಇಡೀ ಕುಟುಂಬ ಅವರಿಗೆ ದೊಡ್ಡ ಅಭಿಮಾನಿ. ಅವರಿಗೆ ಯಾರು ತಾನೇ ಅಭಿಮಾನಿ ಅಲ್ಲ ಹೇಳಿ. ಅವರದ್ದು ಏಂಜಲ್ ರೀತಿಯ ಮನಸ್ಸು. ಅವರು ನಮಗೆ ಸಿಕ್ಕಿದ್ದು, ಪರಿಚಯ ಆಗಿದ್ದಕ್ಕೆ ನಾನು ಲಕ್ಕಿ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ? ಉತ್ತರಿಸಿದ ಹೀರೋ

ನವೀನ್ ಚಂದ್ರ ಅವರು ಸ್ವಚ್ಛವಾಗಿ ಕನ್ನಡ ಮಾತನಾಡ ಬಲ್ಲರು. ಅವರು ಹುಟ್ಟಿ ಬೆಳೆದಿದ್ದು ಬಳ್ಳಾರಿಯಲ್ಲಿ. ಹೀಗಾಗಿ, ಕನ್ನಡದಲ್ಲೇ ಅವರು ಓದಿದ್ದು. ಆ ಬಳಿಕ ತೆಲುಗು, ತಮಿಳು ಸಿನಿಮಾಗಳಿಂದ ಆಫರ್ ಬಂದು ಆ ಕಡೆ ಹೆಚ್ಚು ಸೆಟಲ್ ಆದರು. ಇದರಿಂದ ಅವರಿಗೆ ಕನ್ನಡದ ಟಚ್​ ಸ್ವಲ್ಪ ತಪ್ಪಿದೆ. ಆದರೂ ಅವರು ಭಾಷೆಯನ್ನು ಮರೆತಿಲ್ಲ. ‘ಮಾರ್ಕ್’ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:33 am, Thu, 1 January 26